ಬಳಕೆ ಆಗದ ಸರ್ಕಾರಿ ವಾಹನ ನೋಂದಣಿ ನಿರ್ಲಕ್ಷ್ಯ – ಯಾರು ಹೊಣೆ?

ಡಕಲೊ ಗಾಡಿ ಐಸಾ … ಜೋರ್ ಲಗಾವೋ ಐಸಾ …
ದುರುಗಪ್ಪ ಹೊಸಮನಿ
ಲಿಂಗಸುಗೂರು.ಜೂ.೦೭-ಸರ್ಕಾರಿ ಯೋಜನೆಗಳು ಜನರಿಗೆ ಬಳಕೆ ಅಗುವುದಕ್ಕಿಂತ ಅಧಿಕಾರಿಗಳ ಹಣ ದುರ್ಬಳಕೆಗೆ ಬಲಿಯಾಗುತ್ತಿವೆ ಎಂಬುದಕ್ಕೆ ತಾಲೂಕು ಪಂಚಾಯಿತಿ ಸಕ್ಕಿಂಗ್ ಯಂತ್ರ ನಿದರ್ಶನವಾಗಿದೆ.
೨೦೧೩ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಕ್ಕಿಂಗ್ ಯಂತ್ರಗಳ ಖರೀದಿ ಹೆಸರಲ್ಲಿ ಕೋಟ್ಯಂತರ ಹಣ ದುರ್ಬಳಕೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಬಳಕೆ ಆಗದ ಸಕ್ಕಿಂಗ್ ಮಷಿನ್ ಖರೀದಿಸಿ ಇಂದಿಗೂ ಆರ್.ಟಿ.ಒ ಕಚೇರಿಯಲ್ಲಿ ನೋಂದಣಿ ಮಾಡಿಸಿಲ್ಲ.
ಜಿಲ್ಲೆಯಲ್ಲಿ ಐದು ಟ್ರ್ಯಾಕ್ಟರ್ ಜೊತೆ ಟ್ಯಾಂಕರ್ ಖರೀದಿಸಿ ಲಿಂಗಸುಗೂರು ತಾಲ್ಲೂಕು ಪಂಚಾಯಿತಿಗೆ ನೀಡಿದ್ದಾರೆ. ಎಂಟು ವರ್ಷಗಳ ಅವಧಿಯಲ್ಲಿ ಬಳಕೆ ಆಗದೆ ಅನಾಥ ಸ್ಥಿತಿಯಲ್ಲಿನ ಸಕ್ಕಿಂಗ್ ಮಷಿನ್ ದುಸ್ಥಿತಿಯಲ್ಲಿದೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣವೆ ನೆನೆಗುದಿಗೆ ಬಿದ್ದಿವೆ. ಸಕ್ಕಿಂಗ್ ಮಷಿನ್ ಬಳಸಿ ಸ್ವಚ್ಛತೆ ಮಾಡುವ ಕನಸು ಕಟ್ಡಿದವರು ಯಾರು? ಕಾಗದ ಪತ್ರದಲ್ಲಿ ಶೌಚಾಲಯ ಅಭಿವೃದ್ಧಿ ಕಂಡಿವೆ. ಗ್ರಾಮೀಣ ಪ್ರದೇಶಗಳ ವಾಸ್ತವ ಜ್ಞಾನ ಇಲ್ಲದ ಅಧಿಕಾರಿಗಳೆ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದು ಮೇಲ್ನೊಟಕ್ಕೆ ಸಾಬೀತಾಗಿದೆ.
ಅಂತೆಯೆ ಡಕಲೊ ಗಾಡಿ ಐಸಾ.. ಜೋರ್ ಲಗಾಕೆ ಐಸಾ ಎಂದು ಎಂಟು ವರ್ಷದಿಂದ ರಸ್ತೆಗೆ ಇಳಿಯದ, ನೋದಣಿ ಆಗಿರದ ಸಕ್ಕಿಂಗ್ ಮಷಿನನ್ನು ಸಿಬ್ಬಂದಿ ಶೆಡ್ ವೊಂದಕ್ಕೆ ತಳ್ಳಲು ಸಾಹಸ ನಡೆಸಿದ್ದಿ ಸಾಕ್ಷಿ.
ಬಳಕೆಗೆ ಬಾರದ, ಅನಾವಶ್ಯಕ ಮಚಿನರಿ ಖರೀದಿಗೆ ಕೋಟ್ಯಂತರ ಹಣ ಖರ್ಚು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ವಿವಿಧ ಸಂಘ ಸಂಸ್ಥೆಗಳು ಆಗ್ರಹಪಡಿಸಿವೆ.