ಬಲ್ಲರವಾಡ ಸಹಕಾರ ಪ್ರಾಥಮಿಕ ಕೃಷಿ ಪತ್ತಿನ ಶತಮಾನೋತ್ಸವ

ಅಣ್ಣಿಗೇರಿ,ನ17-ತಾಲೂಕಿನ ಬಲ್ಲರವಾಡ ಗ್ರಾಮದಲ್ಲಿ ದಿ.18 11.2020 ರಂದು ಬುಧವಾರ ಬೆಳ್ಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರ,ಧಾರವಾಡ ಜಿಲ್ಲಾ ಸಹಕಾರಿ ಯುನೀಯನ್ ನಿ.ಕೆ.ಸಿ.ಸಿ ಬ್ಯಾಂಕ್ ಧಾರವಾಡ ಸಹಕಾರಿ ಇಲಾಖೆ ಹಾಗು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಶತಮಾನೋತ್ಸವ ಹಾಗೂ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020 ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಸಹಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಸಂಸ್ಥೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ದಿ.28/7/1920ರಲ್ಲಿ ಅಂದಿನ ಗ್ರಾಮದ ಹಿರಿಯರಾದ ದಿ.ಮಲ್ಲೇಶಪ್ಪ ಶೀವಬಸಪ್ಪ ಹಿರಿಯಣ್ಣವರ ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಂಘ ಸಂಸ್ಥಾಪಕ ಅಧ್ಯಕ್ಷರಾಗಿಮತ್ತು ಅವರ ಸಹಪಾಠಿಗಳಾದ ದಿ.ಬುದರಡ್ಡಿ ಇನಾಮತಿ ದಿ.ಗದಿಗೆಪ್ಪ ನೆಲಗುಡ್ಡ,ದಿ.ಡಾ.ಶಿವಪ್ಪ ಶಾನವಾಡ,ದಿ.ಸಿದ್ದಪ್ಪ ಗಿಡ್ನವರ,ದಿ.ಯಲ್ಲಪ್ಪ ಕಲ್ಲಪ್ಪ ಶಾನವಾಡ,ದಿ.ರಾಜೇಸಾಬ ಫಕ್ಕೀರಸಾಬ ನದಾಫ್,ದಿ.ಶಿವನಗೌಡ ಪಾಟೀಲ,ಇನ್ನು ಅನೇಕ ಹಿರಿಯರು ಶ್ರಮದಿಂದ ಪ್ರಾರಂಭವಾದ ಸಂಸ್ಥೆ ದಿ.ವಿ.ಬಿ.ಇನಾಮತಿ ವಕೀಲರ ನೇತೃತ್ವದಲ್ಲಿ ಗ್ರಾಮದ ಗುರುಹಿರಿಯರ ಶ್ರಮದಫಲದಿಂದ ದಿ.24 /6/2001 ಸ್ವಂತ ಕಟ್ಟಡದೊಂದಿಗೆ ಲೋಕಾರ್ಪಣೆಗೊಂಡಿತು.
ದಿ.18 ರಂದು ನಡೆಯುವ ಕ್ರಾಮದ ದಿವ್ಯ ಸಾನಿಧ್ಯವನ್ನು ವೇ ಮೂರ್ತಿ ಶಿದ್ದಯ್ಯ ಅಂ.ಹಿರೇಮಠ,ಪ್ರಾಥಮಿಕ ಸಹಕಾರಿ ಪತ್ತಿನ ಅಧ್ಯಕ್ಷರಾದ ಮಹೇಶ ವಾ.ಇನಾಮತಿವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ .ಕ್ಷೇತ್ರದ ಶಾಸಕ ಹಾಗು P.Éಯುಡಿ.ಡಫ್ ಹಣುಕಾಶ ನಿಗಮದ ಅಧ್ಯಕ್ಷರಾದ ಶಂಕರಪಾಟೀಲ ಮುನೇನಕೊಪ್ಪ ಕಾರ್ಯಕ್ರಮ ಉದ್ಘಾಟನೆಗೊಳಿಸುವರು.
ಬಾಪುಗೌಡ ಪಾಟೀಲ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು ಮುಖ್ಯತಿಥಿಗಳಾಗಿ ಮಾಜಿ ಶಾಸಕ ಡಾ.ಆರ್.ಬಿ.ಶೀರಿಯಣ್ಣವರ,ಕೆ.ಎನ್.ಗಡ್ಡಿ,ಎನ್.ಎಚ್.ಕೋನರಡ್ಡಿ,ಜಿ.ಪಂ.ಸದಸ್ಯರಾದ ಗಾಯತ್ರಿ ರಾಯರಡ್ಡಿ,ವೀರಪ್ಪ ಚಾ.ನಾಯ್ಕರ,ಯಲ್ಲಪ್ಪ ಅಕ್ಕಿ,ಬಸವನಗೌಡ ಕುರಹಟ್ಟಿ,ಎಫ್.ಆರ್.ಕಲ್ಲನಗೌಡ್ರ,ಚಂಬಣ್ಣ ಹಾಳದೋಟರ,ಸದುಗೌಡ ಪಾಟೀಲ ಕೆ.ಮುನಿಯಪ್ಪ ,ಶ್ರೀಮತಿ ಎಸ್.ಬಿ.ಹಿರೇಮಠ,ಜಿ.ಎಸ್.ಹೆಗಟಡೆ,ಎಂ.ಬಿ.ಪೂಜಾರ,ಎಸ್.ವಿ.ಹೂಗಾರ ಹಾಗು ಇನ್ನಿತರ ಸಹಕಾರಿ ಧುರೀಣರು ಪಾಲ್ಗೊಳ್ಳವರು ಮತ್ತು ಧಾರವಾಡದ ಕೆ.ಸಿ.ಸಿ.ಬ್ಯಾಂಕಿನ ಆಡಳಿತ ವಿಭಾಗದ ವ್ಯವಸ್ಥಾಪಕರಾದ ಅಶೋಕ ಸೋಬಾನದ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪತ್ರಿಕಾ ಪ್ರಕಟಣೆ ತಿಳಿಸಿದೆ.