ಬಲ್ಕರ್ ಬ್ಲಾಸ್ಟ್ಲಾರಿ ಚಾಲಕ ಕ್ಲೀನರ್ ಗೆ ಗಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.09: ತಾಲೂಕಿನ ವೇಣಿ ವೀರಾಪುರ ಬಳಿಯ ಸ್ಕ್ಯಾನ್ ಸ್ಟೀಲ್ಸ್ ಸ್ಪಾಂಜ್ ಐರನ್ ಕಾರ್ಖಾನೆಯಿಂದ ಹೈದ್ರಾಬಾದಿಗೆ ಲೋಡ್ ತೆಗೆದುಕೊಂಡು ಹೋಗಿದ್ದ ಲಾರಿ ಚಾಲಕ, ಕ್ಲೀನರ್ ಅಲ್ಲಿ ಇದೇ ಕಾರ್ಖಾನೆಯ ಮಾಲೀಕರ ಕಾರ್ಖಾನೆಯಲ್ಲಿ ಅನ್ ಲೋಡ್ ಮಾಡುವಾಗ ಬಲ್ಕರ್ ಬ್ಲಾಸ್ಟ್ ಆಗಿ ಚಾಲಕ ಶಿವರಾಜ್ ಮತ್ತು ಕ್ಲೀನರ್ ಶಿವ ತೀವ್ರವಾಗಿ ಗಾಯಗೊಂಡಿದ್ದಾರೆಂದು ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ತಿಳಿಸಿದ್ದಾರೆ.
ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡದೆ, ಪ್ರಕರಣ ದಾಖಲಿಸದೇ ಇರುವ ಕಾರಣ ಇಲ್ಲಿನ ಕಾರ್ಖಾನೆ ಬಳಿ ತೆರಳಿದ ಸಂಘದ ಇನ್ನಿತರ ಸದಸ್ಯರೂ ಸೇರಿ ಗಾಯಗೊಂಡವರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಫ್ಯಾಕ್ಟರಿ ಆವರಣದಲ್ಲಿಯೇ ಅವಘಡ ಸಂಭವಿಸಿರುವುದರಿಂದ ಇದಕ್ಕೆ ಆ ಕಂಪನಿಯೇ ಜವಾಬ್ದಾರಿಯಾಗಿದೆ. ಸೂಕ್ತ ಪರಿಹಾರ ನೀಡದಿದ್ದರೆ, ಈ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

One attachment • Scanned by Gmail