ಬಲುಕುಂದಿ ಸುಂದರಿಯರಿಂದ ಕ್ಯಾಟ್ವಾಕ್ ಸಂಭ್ರಮ


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಮಾ.08: ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಭಾನುವಾರ ಗ್ರಾಮದ ಯುವಕರು ವಿವಿಧ ವೇಷಗಳನ್ನು ಹೊತ್ತು ಮನೆ ಮನೆಗೆ ತೆರಳಿ ಭಿಕ್ಷೆಬೇಡಿ ಮನರಂಜಿಸುವುದರೊಂದಿಗೆ ಹೋಳಿ ಹುಣ್ಣಿಮೆಯ ರಂಗನ್ನು ಹೆಚ್ಚಿಸಿದರು. ಹೋಳಿ ಹುಣ್ಣಿಮೆ ಅಂಗವಾಗಿ ಈ ಗ್ರಾಮದಲ್ಲಿ ಜಾನಪದ ಕಲೆಗಳು ಅನಾವರಣಗೊಂಡಿದ್ದು, ಎಲ್ಲೆಲ್ಲೂ ಜಾನಪದ ಸೊಗಡು ಕಂಡು ಬರುತ್ತಿದೆ.
ಬಲಕುಂದಿ ಗ್ರಾಮದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಹೋಳಿ ಹುಣ್ಣಿಮೆಯ ಅಂಗವಾಗಿ ಗ್ರಾಮದ ಅಂಗಳದಲ್ಲಿರುವ ದೇವಸ್ಥಾನದಲ್ಲಿ ಕಾಮನ ಮೂರ್ತಿಯನ್ನು ಕೂಡಿಸಿ ಪೂಜೆ ಸಲ್ಲಿಸುವುದರೊಂದಿಗೆ ಗ್ರಾಮದ ಯುವಕರು ಚೌಡ್ಕಿ ಜೋಗತಿಯರ ವೇಷ, ಗಂಡ ಹೆಂಡತಿಯ ವೇಷ, ಸಾಧು ಸಂತರ ವೇಷ, ಶಿವ ಪಾರ್ವತಿಯರ ವೇಷ, ಯುವತಿಯರ ವೇಷತೊಟ್ಟು ಹೋಳಿ ಹುಣ್ಣಿಮೆಯವರೆಗೆ ಸಂಭ್ರಮದಿಂದ ಆಚರಿಸುತ್ತಾರೆ.  ಐದು ದಿನಗಳ ಕಾಲ ಗ್ರಾಮದ ಯುವಕರು ವಿವಿಧ ಛದ್ಮವೇಷಗಳನ್ನು ತೊಟ್ಟು, ಮನೆ ಮನೆಗೆ ತೆರಳಿ ಭಿಕ್ಷೆಬೇಡಿ ಹಣವನ್ನು ಸಂಗ್ರಹಿಸುತ್ತಾರೆ. ಸಂಗ್ರಹವಾದ ಹಣದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಸಾಮಾನ್ಯವಾಗಿ ಗ್ರಾಮಗಳಲ್ಲಿ ಗ್ರಾಮ ದೇವಿಯರಿಗೆ ಕುಂಭವನ್ನು ಸಮರ್ಪಿಸುತ್ತಾರೆ ಆದರೆ ಬಲಕುಂದಿ ಗ್ರಾಮದಲ್ಲಿ ನಡೆಯುವ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಗ್ರಾಮದ ಮಧ್ಯಭಾಗದಲ್ಲಿರುವ ಕಾಮ-ರತಿಯರ ದೇವಸ್ಥಾನದಲ್ಲಿ ಹುಣ್ಣಿಮೆಗೆ 5 ದಿನ ಮುಂಚೆಯೇ ಕಾಮ-ರತಿಯರನ್ನು ಕೂಡಿಸಿ ಪೂಜೆ ನೆರವೇರಿಸಿ ಅಧಿಕೃತವಾಗಿ ಕಾಮನ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಹುಣ್ಣಿಮೆಯ ಮುನ್ನಾ ದಿನ ರಾತ್ರಿ 8-00 ಗಂಟೆಯ ನಂತರ ಹೋಳಿ ಹುಣ್ಣಿಮೆ ಅಂಗವಾಗಿ ಮಹಿಳೆಯರಂತೆ ವಿವಿಧ ವೇಷಗಳನ್ನು ಧರಿಸುವ ಯುವಕರ ತಂಡವು ಕುಂಭವನ್ನು ಸಮರ್ಪಿಸಿದರು.
5 ದಿನಗಳ ಕಾಲ ನಡೆಯುವ ಹೋಳಿ ಹುಣ್ಣಿಮೆಯು ಈ ಗ್ರಾಮದಲ್ಲಿ ಸಂಭ್ರಮ ಸಡಗರವನ್ನು ತುಂಬುತ್ತಿದ್ದು, ಛದ್ಮವೇಷ ತೊಟ್ಟ ಯುವಕರ ಗುಂಪನ್ನು ನೋಡಲು ಜನ ಮನೆ ಮುಂದೆ ಜಾತ್ರೆಯಂತೆ ನೆರೆದಿರುತ್ತಾರೆ. ಕಾಮರತಿಯರನ್ನು ಪೂಜಿಸಿ ಹೋಳಿ ಹುಣ್ಣಿಮೆಯ ಮುನ್ನಾದಿನವಾದ ಸೋಮವಾರ ರಾತ್ರಿ ಕಾಮನನ್ನು ಈ ಗ್ರಾಮದಲ್ಲಿ ದಹಿಸುತ್ತಾರೆ.  ಮಂಗಳವಾರದಂದು ಬಣ್ಣ ಬಣ್ಣದ ರಂಗಿನ ಹೋಳಿಯು ಈ ಗ್ರಾಮದಲ್ಲಿ ನಡೆಯುತ್ತದೆ. 
ಗ್ರಾಮದ ಯುವಕರು ವಿವಿಧ ವೇಷಗಳನ್ನು ಧರಿಸಿದ್ದರು, ಪೋಲಿಸ್ ವೇಷದಲ್ಲಿ ಭಾಗಿಯಾಗಿರುವರು ಪಿಎಸ್ಐ ಪಾತ್ರ ಬಸವರಾಜ ಗೌಡ,ಕಾನಿಸ್ಟೇಬಲ್ ಬಸವನಗೌಡ ಹಾಗೂ ಟ್ರಾಫಿಕ್ ಪೊಲೀಸರು ಶ್ರೀಧರ್ ಗೌಡ, ನಾಗಲಿಂಗ,ಬುರ್ ಬುರ್ ಸಂಕ್ಲಮ್ಮ ಈ ತಂಡದಲ್ಲಿ ಭಾಗವಹಿಸಿದವರು ಬಸವರಾಜ್ ಗೌಡ, ಪುರುಷೋತ್ತಮ್ ಗೌಡ,ತರುಣ್ ಕುಮಾರ್,ವೀರಭದ್ರ.
ವೀರಗಾಸೆ ತಂಡದವರು ಬಸವರಾಜ ಗೌಡ, ನಾಡಗೌಡ್ರು,ಬಸವನಗೌಡ, ಜೀವನ್ ಕುಮಾರ್ ಹಾಗೂ ಇದರಲ್ಲಿ ಮದುಮಗ ನಾಗಲಿಂಗ ಮದುಮಗಳು ಶ್ರೀಧರ್ ಗೌಡ ಇದರಲ್ಲಿ ಭಾಗಿಯಾಗಿದ್ದರು,ಹುಲಿವೇಷ ಭಾಗವಹಿಸಿದವರು ಲೇಪಾಕ್ಷಿ,ಜಡೇಶಾ,ಜೋಕುಮಾರ ಮಕ್ಕಳು ತಂಡ ಎಸ್ ಕಾಳಿಂಗನಗೌಡ,ಮುದಿಯಪ್ಪ, ತಿಮ್ಮಯ್ಯ,ಕೃಷ್ಣಮೂರ್ತಿ,ಲಿಂಗನಗೌಡ,ಕಾಳಿಂಗನಗೌಡ.
ಗೌರಿ ಮಕ್ಕಳ ತಂಡ ಎಸ್ ಬಸನಗೌಡ,ಸಾಧು ವೇಷ ತಂಡದವರು ದಾಸರ ಕೃಷ್ಣ,ಬಸವರಾಜ ಗೌಡ, ಬಸವನಗೌಡ,ನಾಗಲಿಂಗಪ್ಪ,ಶ್ರೀಧರ್ ಗೌಡ, ಲಿಂಗೈಕಾಗಿರುವ ಹೆಸರು ಲಿಂಗನಗೌಡ,ಗೌರಿ ಮಕ್ಕಳು ಎಸ್ ಬಸವರಾಜ ಗೌಡ,ತಂಡದಿಂದ ಹಾಗೂ ಸಾಧಕಲ್ಲಿ ತಂಡದಿಂದ ಕಳಿಂಗನಗೌಡ, ಶಂಭುಲಿಂಗ,ಚಾರ್ನಾಳ್ ಶರಣ,ರುದ್ರಮುನಿ ಸ್ವಾಮಿ,ಹಂಪನಗೌಡ,ಜಡೇಶ,ರಾಜ, ಬಸವ,ಉಮೇಶ,ಪಂಪ,ಗೋಡೆಯರ್ ಬಸವರಾಜ್,ಸುದರ್ಶನ್,ಬಸವರಾಜ್, ಅಂಬರೀಶ,ವೆಂಕಣ್ಣಗೌಡ,ಶರಣ,ವೈ ಮೌನೇಶ,
ಗಂಗೆ ಎತ್ತು ಆಡಿಸುವರು ತಂಡ ಹೊಡೆಯುವುದು ಕಾಳಿಂಗ ತಂಡದಿಂದ ಜೀರ್ ಮಲ್ಲಿ,ಕೋಳಿಯರಾಜ, ತಿಮ್ಮಯ್ಯ, ಗಂಗೆ ಎತ್ತು ಆಡಿಸುವ ತಂಡದವರು.
ಭಾಗವಹಿಸಿ ಕಾಮನ ಹುಣ್ಣುಮೆಯನ್ನು‌ ಅದ್ದೂರಿಯಾಗಿ ಆಚರಿಸಿದರು
“ಎರಡು ವರ್ಷಕ್ಕೊಮ್ಮೆ ನಡೆಯುವ ಹೋಳಿ ಹುಣ್ಣಿಮೆಯ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತೇವೆ ಹಾಗೂ ನಮ್ಮ ಗ್ರಾಮದ ಯುವಕರು ವಿವಿಧ ವೇಷಗಳನ್ನು ಧರಿಸಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಗ್ರಾಮಸ್ಥ ರುದ್ರಮುನಿ ಸ್ವಾಮಿ ತಿಳಿಸಿದರು.”