ಬಲಿಷ್ಠ ರಾಷ್ಟ್ರ ಕಟ್ಟಲು ಮತ್ತು ನಮ್ಮ ರಚನಾತ್ಮಕ ಪ್ರಗತಿಗೆ ಕಡ್ಡಾಯ ಮತದಾನ ಅವಶ್ಯಕ: ಲಕ್ಷ್ಮಣ್ ದಸ್ತಿ

ಬೀದರ:ಎ.26:ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತ ದೇಶದಲ್ಲಿ ಮತದಾರರು ತಮ್ಮ ಮತದ ಹಕ್ಕನ್ನು ಕಡ್ಡಾಯವಾಗಿ ಅಸ್ತ್ರದ ರೂಪದಲ್ಲಿ ಬಳಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದಲ್ಲದೆ ನಮ್ಮ ಹಕ್ಕಿನ ನಮ್ಮ ಪ್ರದೇಶದ ಹಾಗೂ ಜಿಲ್ಲೆಯ ರಚನಾತ್ಮಕ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಅವರು ತಿಳಿಸಿದರು.

ಪ್ರಸ್ತುತ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ವಿನೂತನ ಮಾದರಿಯಲ್ಲಿ ಬೀದರ ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಮತದಾರರ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಂತಹ ಮಹಾನ್ ಪ್ರಜಾಪ್ರಭುತ್ವ ದೇಶದಲ್ಲಿ ನಮ್ಮ ಪವಿತ್ರ ಸಂವಿಧಾನ ರಾಷ್ಟ್ರಪತಿಗೂ ಒಂದೇ ವೋಟು ಸಾಮಾನ್ಯ ನಾಗರಿಕರಿಗೂ ಒಂದೇ ವೋಟಿನ ಹಕ್ಕು ನೀಡಿ ಸಮಾನತೆಯ ಸಂದೇಶ ನೀಡುವುದರ ಜೊತೆಗೆ ವೋಟಿನ ಮಹತ್ವ ಸಾರಿದೆ.ಪ್ರಸ್ತುತ ಚುನಾವಣೆಯಲ್ಲಿ ಬೀದರ ಜಿಲ್ಲೆಯ ಕಾರಂಜಾ ಮುಳುಗಡೆ ಸಂತ್ರಸ್ತರ ಸುಮಾರು 2 ಲಕ್ಷ ಮತದಾರರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಡ್ಡಾಯವಾಗಿ ವೋಟಿನ ಹಕ್ಕನ್ನು ಬಳಸಿ ನಮ್ಮ ಹಕ್ಕಿನ ನ್ಯಾಯಯುತವಾದ ಬೇಡಿಕೆಗಳ ಅಭಿವೃದ್ಧಿಗೆ ಹಾಗೂ ಬೀದರ ಜಿಲ್ಲೆಯ ರಚನಾತ್ಮಕ ಪ್ರಗತಿಗೆ ಸಮರ್ಥವಾದ ಅಭ್ಯರ್ಥಿಗಳಿಗೆ ಮತದಾನ ಮಾಡುವುದು ಅತಿ ಅವಶ್ಯಕವಾಗಿದೆ.

ಸಂವಿಧಾನ ನಮಗೆ ಹಕ್ಕುಗಳು ನೀಡುವಂತೆ ನಮ್ಮ ಕರ್ತವ್ಯಗಳು ಸಹ ತಿಳಿಸಿದೆ, ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ಮತದಾರರು ತಮ್ಮ ವೋಟಿನ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವುದು.ಜಾತಿ ಧರ್ಮಗಳನ್ನು ನೋಡದೆ ಯಾವುದೇ ಆಸೆ

ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕ ಕ್ರಿಯಾಶೀಲ ದಕ್ಷ ಅಭ್ಯರ್ಥಿಗೆ ನಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಿ ಕಲ್ಯಾಣ ಕರ್ನಾಟಕ ಪ್ರಗತಿಗೆ ನಾಂದಿ ಹಾಡಬೇಕಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಶೇಖರ ಪಾಟೀಲ ಹುಚಕ್ನಳ್ಳಿ ಅವರು ಮಾತನಾಡಿ, ಪಕ್ಷಾತೀತ, ಜಾತ್ಯತೀತ,ವರ್ಗಾತೀತ ತಳಹದಿಯ ಮೇಲೆ ಶುದ್ಧ ರಾಜಕೀಯೆತರವಾಗಿ ಹಮ್ಮಿಕೊಂಡ ಮತದಾರ ಜಾಗೃತಿ ಅಭಿಯಾನ ಉದ್ದೇಶ ಕಾರಂಜಾ ಮುಳುಗಡೆ ಪ್ರದೇಶದ ರೈತರು ಸೇರಿದಂತೆ ಎಲ್ಲಾ ಕ್ಷೇತ್ರದ ಲಕ್ಷಾಂತರ ಮತದಾರರು ಕಡ್ಡಾಯ ಮತದಾನ ಮಾಡಿ ನಮ್ಮ ನ್ಯಾಯತವಾದ ಬೇಡಿಕೆಗಳನ್ನು ಪಡೆಯಲು ಪ್ರಸ್ತುತ ಚುನಾವಣೆಯಲ್ಲಿ ನಮ್ಮ ಓಟಿನ ಅಸ್ತ್ರ ಬಳಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಲಿಂಗರಾಜ ಶಿರಗಾಪುರ ಅವರು ಮಾತನಾಡಿ ಪ್ರಜಾಪ್ರಭುತ್ವದ ಬೇರುಗಳು ನಮ್ಮ ವೋಟಿನ ಶಕ್ತಿ ತೋರಿಸಿಕೊಳ್ಳಲು ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ ಎಂದರು.

ಸಾಮಾಜಿಕ ಕಾರ್ಯಕರ್ತರಾದ ವಿನಯ ಮಾಳ್ಗೆಯವರು ಬೀದರ ನಗರದಲ್ಲಿ ನಡೆಯುತ್ತಿರುವ ವಿನೂತನ ಮಾದರಿಯ ಮತದಾರ ಜಾಗೃತಿ ಅಭಿಯಾನ ಸಮಾವೇಶ ಕರ್ನಾಟಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ ಅಷ್ಟೇ ಅಲ್ಲದೆ ಈ ಜಾಗೃತಿ ಅಭಿಯಾನದಿಂದ ಓಟಿನ ಮಹತ್ವ ಮತ್ತು ಹಕ್ಕು ಚಲಾವಣೆಯಿಂದ ಆಗುವ ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿದೆ ಎಂದರು.

ಈ ಬೃಹತ್ ಸಮಾವೇಶದಲ್ಲಿ ರಾಜಪ್ಪ ಕೋಸಂ, ಅಡ್ವೊಕೇಟ್ ನಾಗಶೆಟ್ಟಿ ಹಚ್ಚಿ, ರೋಹನ್ ಕುಮಾರ್, ಚಂದ್ರಕಾಂತ್ ಹಾಲ ಹಳ್ಳಿ,

ರಾಹುಲ ಬುಡ್ತಾ, ಮಹೇಶ ಮುಲಗೆ, ರಾಮರೆಡ್ಡಿ, ಮಾದಪ್ಪ, ಬಸವರಾಜ ಹಿಂದಾ,ಕೇದಾರನಾಥ ಪಾಟೀಲ, ಶಿವಕುಮಾರ ಗೊಂಡ, ಕಲ್ಯಾಣರಾವ ಸೇರಿದಂತೆ ನೂರಾರು ಜನ ಮತದಾರರು ಉಪಸ್ಥಿತರಿದ್ದರು.