ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ ನೇರವೆರಿಸಿದ ಸಚಿವ ಪ್ರಭು ಚವ್ಹಾಣ

ಔರಾದ : ನ.6:ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಗೋಪೂಜೆ ಕಾರ್ಯಕ್ರಮ ನಿಯೋಜನೆ ಪ್ರಯುಕ್ತ ಗೋಪ್ರೇಮಿ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಾನ್ಯ ಪಶು ಸಂಗೋಪನಾ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ಮಂದಿರದಲ್ಲಿ ಗೋಪೂಜೆ ನೇರವೆರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಲಿಪಾಡ್ಯಮಿ ದಿನವಾದ ಶುಕ್ರವಾರ ರಾಜ್ಯದ ಎಲ್ಲ ಮುಜರಾಯಿ ಇಲಾಖೆ ಸಹಯೋಗದೊಂದಿಗೆ ಗೋಪೂಜೆ ಪಶು ಸಂಗೋಪನಾ ಇಲಾಖೆಯಿಂದ ಎಲ್ಲ ದೇವಾಲಯಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗೋಪೂಜೆ ಈ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವೂ ನಡೆಯಬೇಕ ಸ್ವಸ್ವತಂತ್ರ ಪೂರ್ವದಲ್ಲಿ ಜನಸಂಖ್ಯೆಗಿಂತ ಹೆಚ್ಚು ಗೋವುಗಳು ಇದ್ದವು, ಆದರೆ ಇಂದು ನಾವು ಯಾವ ಹಂತಕ್ಕೆ ಬಂದಿದ್ದೇವೆ ಹಾಲುಣಿಸುವ ತಾಯಿ ಕಾಮಧೇನುವನ್ನು ಹತ್ಯೆಯಾಗುತ್ತಿದೆ ದುರಂತ ಸಂಗತಿ, ಪ್ರತಿಯೊಂದು ಮನೆ ಮನೆಯಲ್ಲಿ ಗೋಮಾತೆ ನೆಲೆಸಬೇಕು ಗೋವುಗಳನ್ನು ಪೆÇೀಷಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ಪೆÇೀಕಲವಾರ, ಪ್ರಾಣಿ ದಯಾ ಸಂಘದ ಸದಸ್ಯರಾದ ಬಂಡೆಪ್ಪ ಕಂಟೆ, ಶಿವಾಜಿ ಕಾಳೆ, ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ಧೊಂಡಿಬಾ ನರೋಟೆ, ಬಸವರಾಜ ದೇಶಮುಖ, ಪ್ರಕಾಶ ಘೂಳೆ, ಶರಣಪ್ಪ ಪಂಚಾಕ್ಷರಿ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಅಶೋಕ ಅಲ್ಮಾಜೆ, ಕೇರಬಾ ಪವಾರ, ರಾಮ ನರೋಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.