ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬ ಆಚರಣೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜೂ.29: ಪಟ್ಟಣದ ಕೆಇಬಿ ಬಳಿಯಿರುವ  ಈದ್ಗಾ ಮೈದಾನದಲ್ಲಿ ಇಂದು ಬೆಳಿಗ್ಗೆ  ಮುಸ್ಲಿಂ ಬಾಂಧವರೆಲ್ಲಾ ಸೇರಿ, ಶ್ರದ್ಧಾ ಭಕ್ತಿ ಯಿಂದ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಪ್ರವಾದಿ ಹಜರತ್ ಇಬ್ರಾಹಿಂ ರವರ ತ್ಯಾಗ ಬಲಿದಾನ, ಅಚಲ ದೈವಭಕ್ತಿ ಮತ್ತು ಅವರ ಪುತ್ರ ಹಜರತ್ ಇಸ್ಮಾಯಿಲ್ ರವರ ದೈವ ಭಕ್ತಿಯನ್ನು ಸಾಂಕೇತಿಕರಿಸುವಂತಹದ್ದೇ ಬಕ್ರೀದ್ ಆಚರಣೆ.
ತ್ಯಾಗ, ಬಲಿದಾನ ಸ್ಮರಿಸುವ  ಬಕ್ರೀದ್ ಹಬ್ಬ .ವನ್ನು ಪಟ್ಟಣದ ಈದ್ಗಾ ಮೈದಾನದಲ್ಲಿ ಮತ್ತು ಹಲವು ಕಡೆಗಳಲ್ಲಿ ಮುಸ್ಲಿಂ ಸಮುದಾಯದವರೇಲ್ಲಾ  ಸೇರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾ, ಭಕ್ತಿ ಯಿಂದ ಸಂತೋಷ ಸಂಭ್ರಮದಿಂದ ಬಕ್ರೀದ್ ಹಬ್ಬ ವನ್ನು  ಆಚರಿಸಿದರು
ಸಾಮೂಹಿಕ ಪ್ರಾರ್ಥನೆಯಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಎಸ್. ಖಾದರ್ ಎಂ. ಅಬ್ದುಲ್, ಹಾಗೂ ಇನ್ನು ಮುಂತಾದವರಿದ್ದರು.