ಬಲಿದಾನ ಸ್ಮರಣೆಗೆ ಪಂಜಿನ ಮೆರವಣಿಗೆ

ಆನೇಕಲ್.ಮಾ.೨೪ – ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್,ರಾಜಗುರು ಸುಖದೇವ್ ಅವರ ಬಲಿದಾನದ ಸ್ಮರಣೆಯ ಅಂಗವಾಗಿ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಯಲ್ಲಿ ಬಿಜೆಪಿ ಯುವ ಮೋರ್ಚಾ ಅತ್ತಿಬೆಲೆ ಮಂಡಲದ ವತಿಯಿಂದ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೆಬ್ಬಗೋಡಿ ಪೋಲಿಸ್ ಠಾಣೆ ಯಿಂದ ಶ್ರೀರಾಮನ ದೇವಾಲಯದ ವರೆಗೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದೇ ಸಂಧರ್ಭದಲ್ಲಿ ಭಗತ್ ಸಿಂಗ್ . ರಾಜಗುರು ಹಾಗೂ ಸುಖದೇವ್ ರವರಿಗೆ ಜೈಕಾರ ಹಾಕಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು.
ಪಂಜಿನ ಮೆರವಣಿಗೆ ಯಲ್ಲಿ ಬಿಜೆಪಿಯ ಹೆಬ್ಬಗೋಡಿ ಶ್ರೀನಿವಾಸ್ ರೆಡ್ಡಿ, ತಿಲಕ್ ಗೌಡ, ಕುಮಾರ್, ಮುರಳಿ ಮೋಹನ್ ರೆಡ್ಡಿ, ಮಂಜುನಾಥ್ ರೆಡ್ಡಿ, ಸಂತೋಷ್, ವೀರಭದ್ರಪ್ಪ. ಮುನಿಯಲ್ಲಪ್ಪ. ರಾಮಚಂದ್ರ, ಮರುಗೇಶ್ ಮತ್ತು ಬಿಜೆಪಿ ಯುವ ಮೋರ್ಚಾದ ಪದಾದಿಕಾರಿಗಳು ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.