ಬಲಿದಾನ ದಿನ: ಪಂಜಿನ ಮೆರವಣಿಗೆ

ಲಕ್ಷ್ಮೇಶ್ವರ, ಮಾ25: ಭಾರತ ಮಾತೆಯ ಹೆಮ್ಮೆಯ ವೀರಪುತ್ರರಾದ ಭಗತ್‍ಸಿಂಗ್,ಸುಖದೇವ ಮತ್ತು ರಾಜ್‍ಗುರು ಅವರ ದೇಶಪ್ರೇಮ, ತ್ಯಾಗ ತಲತಲಾಂತರದವರೆಗೂ ದೇಶದ ಜನತೆಗೆ ಸ್ಪೂರ್ತಿಯಾಗಿದೆ ಎಂದು ಯುವಮೋರ್ಚಾ ಅಧ್ಯಕ್ಷ ನವೀನ ಹಿರೇಮಠ ಹೇಳಿದರು.
ಅವರು ಮಂಗಳವಾರ ಸಂಜೆ ಭಗತ್‍ಸಿಂಗ್,ಸುಖದೇವ ಮತ್ತು ರಾಜ್‍ಗುರು ಅವರ ಬಲಿದಾನ ದಿನ ಅಂಗವಾಗಿ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಶಿಗ್ಲಿ ನಾಕಾವರೆಗೆ ಕೈಗೊಂಡ ಪಂಜಿನ ಮೆರವಣಿಗೆ ಬಳಿಕ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಅವರಿಗೆ ಸಿಂಹಸ್ವಪ್ನರಾಗಿದ್ದ ಈ ಮೂವರು ದೇಶ ಪ್ರೇಮಿಗಳಿಗೆ ಮಾ. 23 ರಂದು ಗಲ್ಲಿಗೇರಿಸಿದ ದಿನವಾಗಿದೆ. ದೇಶಕ್ಕಾಗಿ ವೀರಮರಣ ಹೊಂದಿದ ಭಾರತ ಮಾತೆಯ ಹೆಮ್ಮೆಯ ಮಕ್ಕಳನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಅವರ ದೇಶಪ್ರೇಮ, ತ್ಯಾಗ-ಬಲಿದಾನದ ಗುಣಗಳು ಯುವ ಜನತೆಗೆ ಪ್ರೇರಣೆಯಾಗಬೇಕು. ಅದಕ್ಕಾಗಿ ಜಾತಿ, ಮತ, ಧರ್ಮ ಮರೆತು ದೇಶ ಸೇವೆಗಾಗಿ ಸಂಕಲ್ಪ ಮಾಡೋಣ ಎಂದರು.
ಈ ವೇಳೆ ಪಕ್ಷದ ಮುಖಂಡರಾದ ಚಂಬಣ್ಣ ಬಾಳಿಕಾಯಿ, ಪ್ರ.ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಬಸವರಾಜ ಚಕ್ರಸಾಲಿ, ಸೊಮೇಶ ಉಪನಾಳ, ವಿಜಯ ಹತ್ತಿಕಾಳ, ಮಾರುತಿ ಸತ್ಯಮ್ಮನವರ, ನಿಂಬಣ್ಣ ಮಡಿವಾಳರ, ಶಿವಯೋಗಿ ಅಂಕಲಕೋಟಿ,ಲಕ್ಷ್ಮಣ ಲಮಾಣಿ,ವಿಜಯ ಕುಂಬಾರ, ಗಿರೀಶ ಚೌರಡ್ಡಿ, ಚಂದ್ರು ಮಾಗಡಿ,ಅರುಣ ಪಾಟೀಲ, ಪ್ರವೀಣ ಬೋಮಲೆ,ರಾಮಣ್ಣ ರಿತ್ತಿ, ರುದ್ರಪ್ಪ ಉಮಚಗಿ ಸೇರಿ ಭಗತ್‍ಸಿಂಗ್ ಯುವ ಸಮಿತಿ, ನಗರ ಘಟಕ, ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿದ್ದರು.