ಬಲಿದಾನದ ಸ್ಮರಣೆ : ಪಂಜಿನ ಮೆರವಣಿಗೆ


ಧಾರವಾಡ ಮಾ.24: ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ 71ರ ವತಿಯಿಂದ ಮಂಡಳ ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ “ಶಹೀದ್ ದಿವಸ್” ಅಂಗವಾಗಿ ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನದ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಧಾರವಾಡದ ಶಿವಾಜಿ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ರೀಗಲ್ ವೃತ್ತ, ಅಕ್ಕಿಪೇಟೆ, ಕಾಮತ ವೃತ್ತ ಮಾರ್ಗವಾಗಿ ಜಕನಿ ಭಾವಿಯ ಹತ್ತಿರ ಇರುವ ಹುತಾತ್ಮ ಸ್ಥೂಪದಲ್ಲಿ ನೂರಾರು ದೇಶ ಭಕ್ತರ ಜಯಘೋಷ ದೊಂದಿಗೆ ಮುಕ್ತಾಯ ಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾದ ಈರೇಶ್ ಅಂಚಟಗೇರಿ ಮಂಡಳ ಅಧ್ಯಕ್ಷರಾದ ಸುನೀಲ ಮೋರೆ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಕಿರಣ ಉಪ್ಪಾರ್, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಹಪ್ಪಳಿ, ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದು ಕಲ್ಯಾಣ ಶೆಟ್ಟಿ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ, ಮುತ್ತು ಬನ್ನೂರು, ಪಕ್ಷದ ಪ್ರಮುಖರಾದ ರಾಜೇಶ್ವರಿ ಸಲಾಗಟ್ಟಿ, ಶಂಕರ ಶೇಳ ಕೆ, ರಾಕೇಶ್ ನಾಜರೆ, ಮಂಜು ಭೋಸಲೆ, ಸಂತೋಷ ದೇವರೆಡ್ಡಿ, ಪ್ರಭು ಹಿರೇಮಠ ಮಂಜು ನಡ ಟ್ಟಿ, ಮಂಜು ಯರಗಟ್ಟಿ, ವೀರೇಶ್ ಹಿರೇಮಠ, ರಾಹುಲ ಮಲ್ಲಿಗವಾಡ, ರಘುನಾಥ್ ತೇರದಾಳ, ಚೇತನ ಹೊಟ್ಟಿ, ಪ್ರಕಾಶ ಇಂಗಳೆ ಬಸವರಾಜ್ ಬಾಳಗಿ , ಶಶಿ ಮುಂದಿನಮನಿ, ಸಂತೋಷ ತಿಗಡಿ ನಿಂಗಪ್ಪ ಸಪೂರಿ, ಸೂರಜ್ ಅಳಗವಾಡಿ , ಜಗದೀಶ್ ಚಿಕ್ಕಮಠ ರಾಜೇಶ್ವರಿ ಅಳಗವಾಡಿ , ಪುಷ್ಪಾ ನವಲಗುಂದ,ನಿರ್ಮಲಾ ಜವಳಿ, ಮಂಜು ನಿರಲಕಟ್ಟಿ, ರೇಖಾ ಹೊಸೂರ್, ಯುವಮೋರ್ಚಾ ಪದಾಧಿಕಾರಿಗಳಾದ ಕಾರ್ತಿಕ ಪೂಜಾರ, ರಾಘವೇಂದ್ರ ತುಪ್ಪದ, ಸುರಂಜನ ಗುಂಡೆ, ಶ್ರೀಕಾಂತ್ ಹಳ್ಳಿಗೆರಿಮಠ, ರಾಜೇಶ ನಾಯ್ಕ, ಸಚಿನ ಚವಾಣ್, ಸಾಗರ್ ಜೋಶಿ, ಅಭಿಷೇಕ್ ಚಿಕ್ಕಮಠ, ವಿಕಾಸ್ ಸವದತ್ತಿ ರವಿ ಮಾಳಗಾರ್, ಗಂಗನಗೌಡರ್, ರೋಹಿತ್ ಜಾಧವ, ಓಂಕಾರ ಚುರುಮುರಿ, ಪ್ರಸಾದ ಯಲವತ್ತಿಮಠ, ಪೃಥ್ವಿ, ಕಾರ್ತಿಕ ಹೆಂಬಲೀ, ವಿನಾಯಕ ಭೊಳೆ, ಮಣಿಕಂಠ ಬೆಟಗೇರಿ, ಮಂಜು ಸಿದ್ದಾಪುರ, ಗಣೇಶ್ ತೇರದಾಳ ಅಖಿಲೇಶ್ ತುಕ್ಕಪ್ಪನವರ,ಶರತ್ ತುರುಮೂರಿಮಠ ಹಾಗೂ ಎಲ್ಲ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.