ಬಲಿದಾನದ ದಿನ- ಪಂಜಿನ ಮೆರವಣಿಗೆ

ಕೋಲಾರ,ಮಾ.೨೪ ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖದೇವ್ ಅವರಣ ಬಲಿದಾನ ದಿವಸ ಹಿನ್ನಲೆ ರಾಜ್ಯ ಯುವ ಮೋರ್ಚಾ ಸೂಚನೆಯಂತೆ ಕೆಜಿಎಫ್ ಗ್ರಾಮಾಂತರ ಯುವ ಮೋರ್ಚಾ ಘಟಕದಿಂದ ಪಂಜಿನ ಮೆರವಣಿಗೆ ಮಾಡಲಾಯಿತು.
ಗ್ರಾಮದ ವಟರ್ ವಕ್ರ್ಸ್ ಕಾಲೋನಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ಮೂಲಕ ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಂಚಾರ ಮಾಡಿ, ಬಸ್ ನಿಲ್ಧಾಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳ ದಿವಸವನ್ನು ಆಚರಣೆ ಮಾಡಲಾಯಿತು.
ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವಂತಹ ವ್ಯಕ್ತಿಗಳ ದಿವಸವನ್ನು ಬಿಜೆಪಿ ಪಕ್ಷ ದೇಶದ ಎಲ್ಲಾ ಕಡೆಗಳಲ್ಲಿಯೂ ಆಚರಿಸಿ ಅವರ ತತ್ವ ಸಿದ್ದಾಂತಗಳ ಬಗ್ಗೆ ಯುವಕರಿಗೆ ತಿಳಿಸಲಾಗುತ್ತಿದೆ ಎಂದು ಯುವ ಮೋರ್ಚಾ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು.
ದೇಶದ ಪ್ರತಿಯೊಬ್ಬ ಯುವಕನ್ನು ಸಹ ದೇಶದ ಮಹನ್ ವ್ಯಕ್ತಿಗಳ ಅದರ್ಶಗಳನ್ನು ರೂಡಿಸಿಕೊಂಡು, ಇತರರಿಗೆ ತಿಳಿಸುವ ಕಾರ್ಯವನ್ನು ಇಂದಿನ ಕಾಲದ ಯುವಕ ಮಾಡಬೇಕೆಂದು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ ಸಲಹೆ ನೀಡಿದರು.
ಎನ್.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿದರು, ಜಿಲ್ಲಾ ಕಾರ್ಯದರ್ಶಿ ಧರಣಿ, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಓಂ ಸುರೇಶ್, ಜಿಲ್ಲಾ ತಾಲ್ಲೂಕು ಉಪಾಧ್ಯಕ್ಷ ವಿಜಿ ಕುಮಾರ್, ಗ್ರಾಪಂ ಸದಸ್ಯರಾದ ಕಾರಿ ಚಲಚತಿ, ಪ್ರಸಾದ್, ಕೊಂಡಪ್ಪ, ಸುರೇಶ್ ರೆಡ್ಡಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್, ಸುನಿಲ್, ಹೋಬಳಿ ಅಧ್ಯಕ್ಷ ಅನಂದ್, ಹರೀಶ್, ಪ್ರವೀಣ್, ಮಂಜುನಾಥ್, ಅಂಜನೇಯಲು ಕಿರಣ್ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.