ಬಲಿದಾನದಿಂದ ದೊರೆತ ಸ್ವಾತಂತ್ರ್ಯದ ಮೌಲ್ಯ ಯುವಜನತೆ ಅರಿಯಲಿ

 

 ಹರಿಹರ.ಜು.೨೪: ಸಾವಿರಾರು ಭಾರತೀಯರ ಬಲಿದಾನದಿಂದ ದೊರೆತ ಸ್ವಾತಂತ್ರö್ಯದ ಬಗ್ಗೆ ಇಂದಿನ ಯುವಜನತೆಗೆ ಅರಿದುಕೊಳ್ಳುವ ಅನಿವಾರ್ಯತೆ ಇದೆ ಎಂದು ಶಿಕಾರಿಪುರದ ಕೆನರಾ ಬ್ಯಾಂಕಿನ ಕೃಷಿ ವಿಸ್ತರಣಾಧಿಕಾರಿ ಜೆ.ಎಸ್.ವಾಮದೇವ ಅವರು ಅಭಿಪ್ರಾಯಪಟ್ಟರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜಿ ಕಾಲೇಜುನಲ್ಲಿ 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸ್ವಾತಂತ್ರö್ಯ ಹೋರಾಟದ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಯುವಜನತೆ ತಮ್ಮ ಜೀವನ ಶೈಲಿಯ ಬಗ್ಗೆ ಅವಲೋಕಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ. ದೇಶ ಸ್ವಾತಂತ್ರö್ಯ ಹೊಂದಿದ ನಂತರ ಕಳೆದುಕೊಂಡಿದ್ದ ವೈಯಕ್ತಿಕ ಹಕ್ಕು, ಸ್ವಾಭಿಮಾನ ಹಾಗೂ ಗೌರವವನ್ನು ಹಲವಾರು ಜನರ ಬಲಿದಾನದಿಂದ ಮರಳಿ ದೊರೆತಿದೆ ಎಂದು ಯುವಜನತೆಯಲ್ಲಿ ಮನವರಿಕೆ ಮಾಡಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹೆಚ್.ವಿರುಪಾಕ್ಷಪ್ಪ ಅವರು ಮಾತನಾಡಿ, ನಾಡಿನ ಭವಿಷ್ಯವನ್ನು ರೂಪಿಸುವ ದೇಶದ ಯುವಕರು ಸ್ವಾತಂತ್ರö್ಯ ಹೋರಾಟದ ಹಂತಗಳನ್ನು ತಿಳಿದುಕೊಳ್ಳಬೇಕು. ಆಮೂಲಕ ಪ್ರಜಾಪ್ರಭುತ್ವ ದೇಶದ ಸ್ವತಂತ್ರವನ್ನು ಸರಿ ದಾರಿಯಲ್ಲಿ ಬಳಸಿಕೊಂಡು ಸಮಾಜಿಕ ಉನ್ನತಿಗೆ ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 75ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ವಿಶೇಷ ಕಾರ್ಯಕ್ರಮಗಳ ಸಂಯೋಜಕರಾದ ಪ್ರೊ.ಮಂಜುನಾಥ ನರಸಗೊಂಡರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸಮಿತಿಯ ಸದಸ್ಯರಾದ ಡಾ.ಟಿ.ನಾಗೇಶ್, ಡಾ.ಅನಂತನಾಗ್.ಎಚ್.ಪಿ., ಐಕ್ಯೂಎಸಿ ಸಂಯೋಜಕರಾದ ಜೆ.ಎಸ್ ಸುರೇಶ, ಡಾ.ಗಂಗಾಧರಯ್ಯ, ಡಾ.ಎಂ.ಎನ್.ರಮೇಶ್, ಡಾ.ಕೆ.ಎಂ.ಹನುಮತಪ್ಪ, ಎಂ.ಎಸ್.ತಿಪ್ಪೆಸ್ವಾಮಿ, ಬಿ.ಬಾಲಚಂದ್ರ, ಆರ್.ವಿಶ್ವನಾಥ್, ಡಿ.ಆರ್. ವಂದನ ಶೆಟ್ಟಿ, ಹೆಚ್.ಎಸ್.ಶ್ವೇತಾ, ಬಿ ಬಿ ಆಯಿಷಾ ಅವರುಗಳು ಉಪಸ್ಥಿತರಿದ್ದರು. ಬಿ.ಎಸ್ಸಿ ವಿದ್ಯಾರ್ಥಿನಿ ಪ್ರೀಯ ಪ್ರಾರ್ಥಿಸಿದರು. ವಿದ್ಯಾರ್ಥಿ ಆಜೀಮ್ ವಂದಿಸಿದರು.

Attachments area