ಬಲಿಜ ಸಮುದಾಯದ ಯುವಕ -ಯುವತಿಯರ ವಿವಾಹ ಪರಿಚಯ ಕಾರ್ಯಕ್ರಮ


ಬಳ್ಳಾರಿ  ಆ 7:ಬಲಿಜ  ಸಮುದಾಯದ ಯುವಕ ಯುವತಿಯರ ವಿವಾಹ ಪರಿಚಯ ಕಾರ್ಯಕ್ರಮವನ್ನು ನಗರದಲ್ಲಿ ನಿನ್ನೆ ಆಯೋಜಿಸಲಾಗಿತ್ತು .ನಗರದ ವಡ್ಡರ ಬಂಡೆಯಲ್ಲಿರುವ ಎಸ್. ಲಿಂಗಣ್ಣ ಬಲಿಜ ಭವನದಲ್ಲಿ, ಬಳ್ಳಾರಿ ಜಿಲ್ಲಾ ಬಲಿಜ ಸಂಘದ ವತಿಯಿಂದ ಆಯೋಜಿಸಲಾಗಿತ್ತು. ಸಮಾಜದ ಮುಖಂಡರಾದ ಉಪಾಧ್ಯಕ್ಷ ಕೆ.ದೊಡ್ಡಹನುಮಂತಪ್ಪ , ಕೆ.ಶ್ರೀನಿವಾಸಪ್ಪ, ಪಿ.ಸೂರ್ಯಬಾಬು, ಟಿ.ಕಲಾಚಂದ್ರ, ಪ್ರಧಾನ ಕಾರ್ಯದರ್ಶಿ ಹೆಚ್.ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಪಿ.ನಾರಾಯಣ, ಖಜಾಂಚಿ, ಟಿ.ರಾಮಕೃಷ್ಣ, ಕಾನೂನು ಸಲಹೆಗಾರ ವೀರಣ್ಣ ಪತ್ತಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.
ಬೆಳಿಗ್ಗೆ 9:00 ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಿತು ಇನ್ನೂರಕ್ಕೂ ಹೆಚ್ಚು ಯುವಕ-ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಪರಿಚಯ ಮಾಡಿಕೊಂಡರು ಎಂದು ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರ ಕೆ.ರಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ