ಬಲಿಜ ಸಮುದಾಯದ ಗುರುಪೀಠದ ಸ್ಥಾಪನೆಗೆ ಸ್ಥಳ ಮಂಜೂರು ಮಾಡಿ: ಶ್ರೀನಿವಾಸನ್ ಗುರೂಜಿ

ಕಲಬುರಗಿ:ಮಾ.26 : ಕರ್ನಾಟಕದ ಪ್ರಮುಖ ಸಮುದಾಯಗಳಲ್ಲಿ ಬಲಿಜ ಸಮುದಾಯವು ಸಹ ಒಂದಾಗಿದ್ದು, ಇಲ್ಲಿಯವರೆಗೆ ಈ ಸಮುದಾಯಕ್ಕೆ ತನ್ನದೇ ಆದ ಒಂದು ಗುರು ಪೀಠವು ಇರದೇ ಇದ್ದದ್ದು, ನೋವಿನ ಸಂಗತಿ. ಹೀಗಾಗಿ ಅಖಿಲ ಭಾರತ ಬಲಿಜ ಸಮುದಾಯದ ಗುರುಪೀಠದ ಸ್ಥಾಪನೆಗೆ ಸ್ಥಳ ಮಂಜೂರು ಮಾಡಬೇಕೆಂದು ಖ್ಯಾತ ಸಂಖ್ಯಾ ಶಾಸ್ತ್ರಜ್ಞರು ಹಾಗೂ ನಾಡಿ ಜ್ಯೋತಿಷ್ಯರು ಆದ ಶ್ರೀ ಜಯಶ್ರೀನಿವಾಸನ್ ಗುರೂಜೀ ಹೇಳಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಲಿಜ ಸಮುದಾಯವು ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾದ ದಾವಣಗೆರೆ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಬಲಿಜ ಸಮುದಾಯದ ಜನತೆ ವಾಸವಾಗಿದ್ದು, ಅವರ ಅಭಿವೃದ್ಧಿಯ ಧ್ಯೇಯೋದ್ದೇಶದೊಂದಿಗೆ ಅಖಿಲ ಭಾರತ ಬಲಿಜ ಮಹಾ ಸಂಸ್ಥಾನದ ಮಠ ಟ್ರಸ್ಟ್ ತನ್ನ ಪೀಠವನ್ನು ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಫಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಹೀಗಾಗಿ ಗುರುಪೀಠಕ್ಕೆ ಸುಮಾರು 3 ಏಕರೆ ಜಮೀನಿನ ಅವಶ್ಯಕತೆ ಇದ್ದು, ತಾವುಗಳು ದಾವಣಗೆರೆ ಜಿಲ್ಲೆಯಲ್ಲಿ ಮಠ ಸ್ಥಾಪನಗೆ ಸೂಕ್ತ ಸ್ಥಳವನ್ನು ಸರ್ಕಾರ ಒದಗಿಸಿಕೊಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಬಲಿಜ ಸಮಾಜ ಶೇ 40% ಇದೆ, ಆದರೆ ಸರ್ಕಾರ 25 ಪ್ರತಿಶತ ಇದೆ ಎಂದು, 2ಎ ಗೆ ಇದ್ದಿದ್ದನ್ನು ತೆಗೆದು ಹಾಕಿದ್ದಾರೆ. 2ಎ ಮೀಸಲಾತಿಗಾಗಿ ಅನೇಕ ಹೋರಾಟಗಳು ನಡೆದಿವೆ. ಹೀಗಾಗಿ ಮೊದಲಿನಂತೆ ಬಲಿಜ ಸಮಾಜವನ್ನು 2ಎ ಗೆ ಸೇರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ , ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ ಇದ್ದರು.