ಬಲವಂತ ಮತಾಂತರಕ್ಕೆ ಶಾಶ್ವತ ನಿಷೇಧ ಅಗತ್ಯ

ನವದೆಹಲಿ,ಡಿ.೩೦- ಬಲವಂತ ಇಲ್ಲವೇ ಮೋಸದ ಮತಾಂತರ ಮತ್ತು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಾಶ್ವತ ಕಾನೂನು ರಚನೆ ಮಾಡುವ ಅವಶ್ಯಕತೆ ಇದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
ಮಧ್ಯಪ್ರದೇಶ ಸಚಿವ ಸಂಪುಟ ಸಭೆಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ೨೦೨೦ರ ಧರ್ಮ ಸ್ವತಂತ್ರ ಸುಗ್ರೀವಾಜ್ಷೆ ಬಗ್ಗೆ ಮಾತನಾಡಿದ ಅವರು ಭ್ರಮೆ, ಮೋಸ, ತುರಾಸೆ ಹಾಗೂ ಮತಾಂತರ ಮಾಡುವ ಪಿತೂರಿಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿದೆ ಎಂದು ತಿಳಿಸಿದರು.
ಮಾತುಕತೆಯ ಮೂಲಕ ವಿಷಯಗಳಿಗೆ ಪರಹಾರ ಸಿಗದಿದ್ದಾಗ ಸಹಜವಾಗಿಯೇ ಕಾನೂನು ಜಾರಿಗೆ ತರಬೇಕು. ದಶಕಗಳಿಂದಲು ಚರ್ಚೆಗಳು ನಡೆಯುತ್ತಿವೆ. ಸ್ವಾತಂತ್ರ್ಯ ಬಂದಾಗಿನಿಂದ ಮತಾಂತರದ ಬಗ್ಗೆ ಸಮಾಜದಲ್ಲಿ ಚರ್ಚೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕಾನೂನಿನ ಮೂಲಕ ಸಮುದಾಯವನ್ನು ಗುರಿಯಾಗಿಸುವ ಬಗ್ಗೆ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ತಮ್ಮ ಪಕ್ಷವು ಲವ್‌ಜಿಹಾದ್ ಎಂಬ ಪದವನ್ನು ರಚಿಸಿಲ್ಲ ಎಂದು ಹೇಳಿದ್ದಾರೆ.
ವ್ ಜಿಹಾದ್ ನಿಷೇಧದ ಬಗ್ಗೆ ಕಾನೂನಿನ ಚರ್ಚೆಗಳು ಪ್ರಾರಂಭವಾದಾಗ ಅದನ್ನು ಮಾಡುವವರ ಮನಸ್ಸಿನಲ್ಲಿ ಭಯ ಇರಬೇಕು ಎಂದು ಭಾವಿಸುತ್ತೇನೆ. ಮೋಸದಿಂದ ಮತಾಂತರ ಮಾಡಿದರೆ ಅದನ್ನು ಕೆಲವರು ಪಿತೂರಿಯಿಂದ ಮಾಡಿದಾಗ ನೀವು ಭಯಪಡಬೇಕು ಎಂದರು.