ಬಲವಂತದಿಂದ ಬಂದ್ ಮಾಡಿದ್ರೇ ಕಾನೂನು ಕ್ರಮ: ಆನಂದ್ ಸಿಂಗ್

ವೀರಭದ್ರಗೌಡ ಎನ್ ಬಳ್ಳಾರಿ

ಬಳ್ಳಾರಿ ನ 19 ; ವಿಜಯನಗರ ಜಿಲ್ಲೆ ಮಾಡೋ ವಿಚಾರದಲ್ಲಿ ಬಳ್ಳಾರಿ ಬಂದ್ ಕರೆ ನೀಡಿರುವುದು‌ ಸರಿಯಲ್ಲ. ಬಲವಂತದಿಂದ ಬಂದ್ ಮಾಡಿದ್ರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಜಿಲ್ಲಾ ಉಸ್ತುವಾರಿ‌ಸಚಿವ ನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು
ಬಂದ್ ಮಾಡ್ತೇವೆ ಎನ್ನುವವರ ವಿರುದ್ಧ ಸಿಂಗ್ ಆಕ್ರೋಶ ವ್ಯಕ್ತ ಪಡಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‌ಬಂದ್ ಮಾಡೋದಕ್ಕೆ ಎಲ್ಲರಿಗೂ ಅವಕಾಶ ಇದೆ. ಆದರೆ ಬಲವಂತದಿಂದ ಬಂದ್ ಮಾಡಿದರೆ ಕಾನೂನು ಕ್ರಮ ಕೈ ಕೊಳ್ಳಲಿದೆ. ಯಾರು ಬೇಕಾದರೂ ನೂತನ ಜಿಲ್ಲೆ ಮಾಡೋದರ ವಿರುದ್ಧ ಹೋರಾಟ ಮಾಡಲಿ ಆದರೆ ದೌರ್ಜನ್ಯದ ಬಂದ್ ಮಾಡಿದರೆ ಕ್ರಮ ಗ್ಯಾರಂಟಿ ಎಂದು ಬಂದ್ ಗೆ ಕರೆ ಕೊಟ್ಟಿರುವವರಿಗೆ ಪರೋಕ್ಷವಾಗಿ ಸಿಂಗ್ ಟಾಂಗ್ ಕೊಟ್ಟಿದ್ದಾರೆ.

ಚಿಕ್ಕ ಜಿಲ್ಲೆಯಾದಷ್ಟು ಅಭಿವೃದ್ಧಿಯಾಗ್ತದೆ. ಅದಕ್ಕೆ ‌ಜಿಲ್ಲೆ ವಿಭಜನೆ ಮಾಡ್ತಿದ್ದೇವೆ ಎಂದು‌ನೂತನ‌ಜಿಲ್ಲೆ ರಚನೆ ಬಗ್ಗೆ ಸಮರ್ಥಿಸಿ‌ಕೊಂಡ ಅವರು ಶಾಸಕ
ಸೋಮಶೇಖರ ರೆಡ್ಡಿ ಅವರನ್ನು ಮಾಧ್ಯಮ ದವರೇ ಪ್ರಚೋದನೆ ಮಾಡ್ತಿದ್ದಾರೆ. ಅವರ ಜೊತೆ ವಿರೋಧ ಸರಿಯಲ್ಲ ಎಂದು ಸಿಎಂ ಮಾತನಾಡ್ತಾರೆ. ನಾನು ಕೂಡ ಮಾತನಾಡ್ತೇನೆ
ಜಿಲ್ಲೆಯಾಗೋ ವಿಚಾರದಲ್ಲಿ ಯಾರೂ ಕೂಡ ಪ್ರಚೋದನೆ ಮಾಡೋದು ಬೇಡ. ಯಾವ ತಾಲೂಕು ಯಾವ ಕಡೆ ಸೇರಬೇಕು ಅನ್ನೋ ಬಗ್ಗೆ ಇನ್ನೂ ಪೈನಲ್ ಆಗಿಲ್ಲ. ಯಾವ ಮ್ಯಾಪ್ ನ್ನು ಸರ್ಕಾರ ರಿಲೀಸ್ ಮಾಡಿಲ್ಲ. ಯಾವುದು‌ ಕೂಡ ಈವರೆಗೂ ಫೈನಲ್ ಆಗಿಲ್ಲ ಈ ಬಗ್ಗೆ ಸಾಮಾಜಿಕ‌ ಜಾಲತಾಣಗಳಲ್ಲಿ‌ ಹರಿದಾಡುವುದನ್ನು ನಂಬ‌ಬಾರದು ಎಂದರು.

ಬಿಜೆಪಿ ಇಬ್ಭಾಗ ಆಗಲ್ಲ:
ಬಿಜೆಪಿಗೆ ಬರುವವರ ಸಂಖ್ಯೆ ಮತ್ತೇ ಹೆಚ್ಚಾಗಿದೆ. ಶೀಘ್ರದಲ್ಲೇ ಮತ್ತೆ ನಾಲ್ಕು ಜನ ಇತರೇ ಪಕ್ಷದ ಶಾಸಕರು ಬಿಜೆಪಿಗೆ ಬರುತ್ತಾರೆ. ಹೀಗಿರುವಾಗ ನೂತನ‌ಜಿಲ್ಲೆ ರಚನೆಯಿಂದ ಇಭ್ಭಾಗ ಆಗದು ಎಂದರು.