ಬಲರಾಮನ ಪ್ರಾಣ ಪ್ರತಿಷ್ಠಾಪನೆ, ವಿಶೇಷ ಪೂಜೆ

ರಾಯಚೂರು.ಜ.೨೨- ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ ನಿಮಿತ್ಯ ಯರಮರಸ್ ಕ್ಯಾಂಪ್‌ನ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ದೀಪೋತ್ಸವ, ಸದ್ಭಕ್ತರಿಗೆ ನೈವೇದ್ಯ ಪ್ರಸಾದ ವಿತರಿಸಲಾಯಿತು.
ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಈಶ್ವರ ದೇವಸ್ಥಾನದಿಂದ ಶ್ರೀ ರಾಮ ಮಂದಿರವರೆಗೆ ದೇವರ ವಿಗ್ರಹಗಳ ಮೆರವಣಿಗೆ ನಡೆಸಲಾಯಿತು.
ಹಿರಿಯ ಮುಖಂಡರಾದ ಯು, ಗೋವಿಂದರೆಡ್ಡಿ, ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ, ಮಾಜಿ ಸದಸ್ಯರಾದ ಶಂಶಾಲಂ,ಯುವ ಮುಖಂಡರಾದ ವೈ.ಎಸ್.ಅಶೋಕ್, ವಿನೋದ್ ರೆಡ್ಡಿ, ರಾಮನಗೌಡ, ಪುಟ್ಟು ಪಾಟೀಲ್, ಬಸವರಾಜ್, ಅಶೋಕ್, ಶಶಿಕುಮಾರ್, ಮಧು, ನಾಗರಾಜ್, ಪವನ್ ಕುಮಾರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.