ಬಲಕುಂದಿಯಲ್ಲಿ ಸಾಮೂಹಿಕ ವಿವಾಹ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.03: ತಾಲೂಕಿನ ಬಲುಕುಂದಿ ಗ್ರಾಮದಲ್ಲಿ ಶ್ರೀ ಬಲುಕುಂದಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ 7ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಗ್ರಾಮದ ಬನ್ನಿ ಮಹಾಂಕಾಳಿ ದೇವಸ್ಥಾನದ ಸರ್ವ ಭಕ್ತಾದಿಗಳ ವತಿಯಿಂದ ಪ್ರತಿ ವರ್ಷ ಸುತ್ತಮುತ್ತಲಿನ ಗ್ರಾಮದ ಕಡು ಬಡವರಿಗೆ ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತದೆ. ಇಂದು ಬೆಳಗ್ಗೆ 42 ನವ ಜೋಡಿಗಳಿಗೆ ಮಾಂಗಲ್ಯಧಾರಣೆಯನ್ನು ಮಾಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳಾದ ಮೋಹನ್ ತಳಪುರ, ಮೇಲ್ವಿಚಿರಕಿಯಾರದ ಮೈನಾವತಿ ಹಾಗೂ ಗ್ರಾಮದ ಮುಖಂಡರು ಇದ್ದರು.