ಬರ ಪರಿಹಾರ: 28.67 ಕೋಟಿ ರೂ. ಇನ್ಪುಟ್ ಸಬ್ಸಿಡಿ ನೀಡಲು ಡಿ.ಸಿ. ಒಪ್ಪಿಗೆ

ಕಲಬುರಗಿ:ಜ.17: ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 11 ತಾಲ್ಲೂಕುಗಳು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಬಗ್ಗೆ “ಭೂಮಿ ಪರಿಹಾರ” ತಂತ್ರಾಂಶವು ಅನುಮೋದನೆ ನೀಡಿದ ಎರಡು ಹಂತದಲ್ಲಿನ 1,44,496 ರೈತ ಫಲಾನುಭವಿಗಳಿಗೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 28.67 ಕೋಟಿ ರೂ. ಇನ್ಪುಟ್ ಸಬ್ಸಿಡಿ ನೀಡಲು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಬುಧವಾರ ಮಂಜೂರಾತಿ ನೀಡಿದ್ದಾರೆ.

ಇನ್ಪುಟ್ ಸಬ್ಸಿಡಿ ಹಣ ಆಯಾ ರೈತರ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಎರಡು ದಿನದಲ್ಲಿ ನೇರವಾಗಿ ಜಮೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ಪುಟ್ ಸಬ್ಸಿಡಿ ಕುರಿತಂತೆ ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಹಾಯವಾಣಿ ಸಂಖ್ಯೆ 1077, ತಾಲೂಕು ಮಟ್ಟದ ಸಹಾಯವಾಣಿಗಳಾದ ಅಫಜಲಪೂರ-7760208044, ಆಳಂದ: 08477-202428, ಚಿತ್ತಾಪೂರ: 08474-236250, ಚಿಂಚೋಳಿ-9902977599, ಜೇವರ್ಗಿ-7411843393, ಕಮಲಾಪೂರ: 08478-200144, ಕಲಬುರಗಿ: 08472-278636, ಶಹಾಬಾದ: 08474-295910, ಸೇಡಂ- 9535448788 ಹಾಗೂ ಯಡ್ರಾಮಿ-9743682346 ಇವರನ್ನು ಸಂಪರ್ಕಿಸಬಹುದಾಗಿದೆ.