ಬರ ಪರಿಹಾರ ಸಹಾಯ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಆದೇಶ


ಧಾರವಾಡ,ಮೇ.15: ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಹಂತಗಳಲ್ಲಿ ಒಟ್ಟು 1.06,707 ರೈತರಿಗೆ 108.12 ಕೋಟಿ ರೂ.ಗಳ ಬರ ಪರಿಹಾರ ಬಿಡುಗಡೆಯಾಗಿದೆ. ಪ್ರೂಟ್ಸ್ ಐಡಿಯಲ್ಲಿ ತಪ್ಪು ಮಾಹಿತಿ ಜೋಡನೆ, ಪ್ರೂಟ್ಸ್ ಐಡಿ ಮಾಡಿಸದಿರುವುದು, ತಾಂತ್ರಿಕ ಕಾರಣಗಳಿಂದ ಕೆಲವು ರೈತರ ಬ್ಯಾಂಕ ಖಾತೆಗೆ ಪರಿಹಾರ ಹಣ ಜಮೆ ಆಗದಿರುವುದು ಕಂಡು ಬಂದಿದ್ದು, ಜಿಲ್ಲೆಯ ಎಲ್ಲ ತಹಶಿಲ್ದಾರ ಕಚೇರಿಗಳಲ್ಲಿ ಬರ ಪರಿಹಾರ ಸಹಾಯ ಕೇಂದ್ರಗಳನ್ನು ತೆರೆದು, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ಬರಪರಿಹಾರದ ಹಣ ಜಮೆ ಆಗದಿರುವ ಬಗ್ಗೆ ಸಮಸ್ಯೆಗಳಿದ್ದಲ್ಲಿ ತಮ್ಮ ತಾಲೂಕಿನ ತಹಸಿಲ್ಲಾರ ಕಚೇರಿಗೆ ಭೇಟಿ ನೀಡಬಹುದು ಅಥವಾ ಸಹಾಯ ಕೇಂದ್ರಕ್ಕೆ ಕರೆ ಮಾಡಿ, ನಿಖರ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. ತಹಶಿಲ್ದಾರ ಕಚೇರಿಗಳಲ್ಲಿ ಆರಂಭಿಸಿರುವ ಬರ ಪರಿಹಾರ ಸಹಾಯ ಕೇಂದ್ರಗಳ ವಿವರಗಳನ್ನು ಪ್ರತಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯತರಾಜ್ಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಮತ್ತು ಬರ ಪರಿಹಾರ ಸಹಾಯ ಕೇಂದ್ರದ ವಿವರಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಆಯೋಜಿಸಬೇಕೆಂದು ಎಂದು ಅಧಿಕಾರಿಗಳಿಗೆ ಅವರು ಹೇಳಿದ್ದಾರೆ. 2023 ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್‍ಡಿಆರೆಫ್ ಅಥವಾ ಎನ್‍ಡಿಆರೆಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ 2 ಸಾವಿರ ರೂ.ಗಳವರೆಗೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ, ಈಗಾಗಲೇ ಸರ್ಕಾರವು ಆದೇಶಿಸಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ತ್ವರೀತಗತಿಯಲ್ಲಿ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಈ ಸಂಭಂದಿತ ರೈತರ ಮಾಹಿತಿಯ ವಿವರವನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಹಾಕಲಾಗಿದೆ. ರೈತರು ಈ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು , ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ 0836-2233840, 1077, ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಧಾರವಾಡ -0836-2233860, ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯ -0836-2447517, ತೊಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ -0836-2746334, ಧಾರವಾಡ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -0836-2233822, ಹುಬ್ಬಳ್ಳಿ ತಾಲೂಕು ತಹಶೀಲ್ದಾರ ಕಾರ್ಯಾಲಯ -0836-2233844, ಹುಬ್ಬಳ್ಳಿ ನಗರ ತಹಶೀಲ್ದಾರ ಕಾರ್ಯಾಲಯ -0836-2358035, ಕುಂದಗೋಳ ತಾಲೂಕು ತಹಶೀಲ್ದಾರ ಕಾರ್ಯಾಲಯ -08304-290239, ಕಲಘಟಗಿ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -08970-284535, ನವಲಗುಂದ ತಾಲೂಕು ತಹಶೀಲ್ದಾರ ಕಾರ್ಯಾಲಯ – 0830-229240, ಅಣ್ಣಿಗೇರಿ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ – 9008249921 ಹಾಗೂ ಅಳ್ನಾವರ ತಾಲ್ಲೂಕು ತಹಶೀಲ್ದಾರ ಕಾರ್ಯಾಲಯ -0836-2385544 ಗೆ ಸಂಪರ್ಕಿಸಿ ಬೆಳೆ ಪರಿಹಾರ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.