
ರಾಯಚೂರು, ನ.೧೮- ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿರುವದರಿಂದ ರೈತರ ಬೆಳೆಗಳು ಹೊಲದಲ್ಲಿ ಕಮರಿ ಹೋಗಿ ಒಣಗುತ್ತಿವೆ ಕೂಡಲೇ ರೈತರ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಜಿಲ್ಲೆಯ ದೇವದುರ್ಗ, ಮಾನ್ವಿ, ಸಿಂಧನೂರು. ಮಸ್ಕಿ, ಸಿರವಾರ, ಲಿಂಗಸೂಗೂರು ಮತ್ತು ರಾಯಚೂರು ಈ ಎಲ್ಲಾ ತಾಲೂಕುಗಳಲ್ಲಿ ಮುಂಗಾರು ವೈಫಲ್ಯದಿಂದ ಭೀಕರ ಬರ ಆವರಿಸಿದೆ. ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಮಳೆ ಬಾರದೆ ಇರುವದರಿಂದ ಸಾಲದ ಸೂಲಕ್ಕೆ ಸಿಲುಕಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬರಲಾಗಿದೆ.ರೈತರ ಸ್ಥಿತಿ ಮತ್ತಿಷ್ಟು ಗಂಭೀರವಾಗಿದೆ ಎಂದು ಆರೋಪಿಸಿದರು.ರೈತರು ಕೃಷಿ ಚಟುವಟಿಕೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಸಾಲ ತೀರಿಸದೇ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದೊದಗಿದೆ. ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲ ವಸೂಲಿ ಮಾಡಲು ಅಧಿಕಾರಿಗಳು ಮನೆ ಮನೆಗೆ ಅಲೆಯುತ್ತಿದ್ದಾರೆ.ಈ ಬರಗಾಲದಿಂದ ರೈತ ಕಂಗಾಲಾಗಿದ್ದಾನೆ. ಖಾಸಗಿ ಸಾಲ ಕೊಟ್ಟರು ಮತ್ತು ಬ್ಯಾಂಕಿನವರು ಸಾಲ ಮರು ಪಾವತಿಸದಿದ್ದರೆ. ಅಸಲಿಗೆ ಒಂದು ವರ್ಷದ ಮಾಡುತ್ತಿದ್ದಾರೆ.ಇದರಿಂದ ರೈತರು ಬದುಕು ಕಷ್ಟ ಕರವಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.ರಾಜ್ಯ ಸರಕಾರ ಬರಗಾಲ ಘೋಷಣೆ ಮಾಡಿ, ಹಣ ಬಿಡುಗಡೆಗೊಳಿಸಿದರೂ ರೈತರ ಖಾತೆಗಳಿಗೆ ಹಣಜಮೆಯಾಗದೇ, ರೈತರು ಕಛೇರಿಯಿಂದ ಕಛೇರಿಗೆ ಅಲೆದಾಡುವಂತಾಗಿದೆ. ರೈತರ ಬಗ್ಗೆ ಸರಕಾರ ಮಲತಾಯಿಧೋರಣ ಮಾಡುತ್ತಿದೆ. ಮುಂಗಾರು ಮತ್ತು ಹಿಂಗಾರು ಮಳೆ ಬಾರದೇ ಇರುವುದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗಳು ನಷ್ಟವಾಗಿರುವುದನ್ನು ಕೇಂದ್ರ ಸರಕಾರಈ ಬಗ್ಗೆ ಕಾಳಜಿ ವಹಿಸದೇ, ಬರಗಾಲ ಘೋಷಣೆ ಮಾಡದೇ ರೈತರಿಗೆ ಮಾಡಿರುವ ದ್ರೋಹವಾಗಿದೆ. ತಕ್ಷಣಕೇಂದ್ರ ಸರಕಾರ ಬರಗಾಲ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ಕೂಡಲೇಕೇಂದ್ರ ಮತ್ತುರಾಜ್ಯ ಸರಕಾರಗಳು ಬರ ಪರಿಹಾರಕೊಡಬೇಕು. ಕೇಂದ್ರದಿಂದ ಬರ ಪರಿಹಾರಒಂದುಎಕರೆಗೆ ರೂ.೫೦ ಸಾವಿರ ಗಳಂತೆ ನಿಗದಿಗೊಳಿಸಿ, ರಾಜ್ಯ ಸರಕಾರ ರೂ.೩೦ ಸಾವಿರ ಹಣ ಬಿಡುಗಡೆ ಮಾಡಬೇಕು.ಸಹಕಾರಿ ಬ್ಯಾಂಕ್‌ಗಳು, ಸರಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.ರೈತರು ಬೆಳೆದು, ಮಳೆಯಿಂದ ಅಥವಾಅತಿವೃಷ್ಠಿಯಿಂದ ಹಾನಿಯಾದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ರಾಜ್ಯ ಸರಕಾರವು ರೈತರಿಗೆ ಗ್ಯಾರಂಟಿಕೊಡಬೇಕು.ಈ ಸಂದರ್ಭದಲ್ಲಿ ಮಲ್ಲಯ್ಯ ಕಟ್ಟಿಮನಿ,ಸೈಯದ್ ಅಬ್ಬಾಸಲಿ ಜಿ., ಸಂತೋಷ ದಿನ್ನಿ, ಕೆ.ಗಿರಿಲಿಂಗ ಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.