ಬರ ಪರಿಹಾರ ಪಡೆಯಲು ಎಫ್‍ಐಡಿ ಮಾಡಿಸಿ ; ಅರುಣಕುಮಾರ ಪಾಟೀಲ

ಅಫಜಲಪುರ :ಡಿ.3: ರಾಜ್ಯ ಸರ್ಕಾರವು ಈಗಾಗಲೇ ಈ ವರ್ಷ ಹಲವು ತಾಲೂಕುಗಳು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

ಅಫಜಲಪುರ ತಾಲ್ಲೂಕಿನ ರೈತರು ಕಡ್ಡಾಯವಾಗಿ ಬರ ಪರಿಹಾರ ಪಡೆದುಕೊಳ್ಳಲು ಸರಕಾರದ ಆದೇಶದಂತೆ ಎಫ್‍ಐಡಿ ಮಾಡಿಸಿಕೊಳ್ಳಬೇಕೆಂದು ಕೆಪಿಸಿಸಿ ಸದಸ್ಯರು ಹಾಗೂ ಮಾಜಿ ಜಿ.ಪಂ. ಸದಸ್ಯರಾದ ಅರುಣಕುಮಾರ ಎಂ. ಪಾಟೀಲ ಸಲಹೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವು ಬರಗಾಲ ಘೋಷಣೆ ಮಾಡಿದ ಮೇಲೆ ರೈತರ ಖಾತೆಗೆ ಹಣ ಹಾಕಲು ತಯಾರಿ ಮಾಡಿಕೊಳ್ಳುತ್ತಿದೆ.
ಅದಕ್ಕಾಗಿ ಬರ ಪರಿಹಾರಕ್ಕಾಗಿ ಈಗಾಗಲೇ ಹಲವು ರೈತರು ಎಫ್‍ಐಡಿ ಮಾಡಿಕೊಂಡಿದ್ದಾರೆ.

ಇನ್ನೂ ಬಹುತೇಕ ರೈತರು ಎಫ್‍ಐಡಿ ಮಾಡಿಕೊಂಡಿಲ್ಲ. ಆದ್ದರಿಂದ ರೈತರು ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ ಕಾರ್ಡ್ ತೆಗೆದುಕೊಂಡು ಗ್ರಾಮ ಲೆಕ್ಕಾಧಿಕಾರಿ ಕಛೇರಿ, ಕೃಷಿ ಇಲಾಖೆ, ತೋಟಗಾರಿ ಇಲಾಖೆ ಹಾಗೂ ಗ್ರಾ. ಪಂ. ಇಡಿಓ ಕಚೇರಿಗಳಿಗೆ ತೆರಳಿ ಎಫ್‍ಐಡಿ ಮಾಡಿಕೊಳ್ಳಬೇಕೆಂದು ಅರುಣಕುಮಾರ ಪಾಟೀಲ ರೈತರಲ್ಲಿ ಮನವಿ ಮಾಡಿದರು.