ಬರ ನಿರ್ವಹಣೆ ಕೈ ಪಾತ್ರವೇನು?: ನಗರ ಬಿಜೆಪಿ ಪ್ರಶ್ನೆ

ಸಂಜೆವಾಣಿ ನ್ಯೂಸ್
ಮೈಸೂರು: ನ.02:- ಬರ ನಿರ್ವಹಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಎನೂ? ಪ್ರತಿ ಜಿಲ್ಲಾಧಿಕಾರಿಗಳ ಬಳಿ ಕನಿಷ್ಠ 350 ಕೋಟಿ ರೂ. ಇಂದ 400 ಕೋಟಿ ಬಳಸಿಕೊಂಡು ಎನೂ ಮಾಡುತ್ತಿದ್ದಿರಿ ಎಂದು ಬಿಜೆಪಿ ರಾಜ್ಯ ಮಾದ್ಯಮ ವಕ್ತಾರ ಎಂ.ಮಹೇಶ್ ಕಿಡಿಕಾರಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕೊಟ್ಟ 5 ಕೆಜಿಯಲ್ಲಿ ಎರಡು ಕೆಜಿ ಕಡಿಮೆ ಮಾಡಿದ್ದಿರಿ. ನಿಮ್ಮದೇ ಗ್ಯಾರಂಟಿಯನ್ನು ಅನುಷ್ಠಾನ ಮಾಡಿದ್ದರೆ ಬಹಿರಂಗ ಅಂಕಿ- ಅಂಶ ಕೊಡಲು ಸಾಧ್ಯವೇ ತಿಳಿಸಿ. ಅಸಮರ್ಪಕ ಸರ್ಕಾರ ತನಗರಿವಿಲ್ಲದೆ ಕೆಲಸ ಮಾಡುತ್ತಿಲ್ಲ. ಇದುವರೆವಿಗೂ ಕನಿಷ್ಠ ಒಂದು ಸಭೆ ಮಾಡಿಲ್ಲ. ಕೇಂದ್ರ ಸರ್ಕಾರವನ್ನು 17900ಕೋಟಿ ರೂ. ಕೇಳಿದೆ. ಕೇಂದ್ರ ಕೊಡುವವರೆಗೂ ರಾಜ್ಯ ಸರ್ಕಾರದ ಅನುದಾನವನ್ನ ಎಷ್ಟು ಬಳಸಿದ್ದೀರಿ ಹೇಳಿ ಎಂದರು.
ಯಡಿಯೂರಪ್ಪ ಅವಧಿಯಲ್ಲಿ ಆರು ತಿಂಗಳ ಮುನ್ನವೇ ಸಚಿವ ಸಂಪುಟವೇ ರಚನೆ ಆಗಿರಲಿಲ್ಲ. ಆಗ ಒಬ್ಬರ ಸಿಎಂ ಆಗಿ ನೆರೆ ಪ್ರದೇಶದ ಇಡೀ ರಾಜ್ಯ ಸುತ್ತಾಡಿದರು. ಪರಿಹಾರವಾಗಿ ಮನೆ ಕಳೆದುಕೊಂಡವರಿಗೆ 5ಲಕ್ಷ ಕೊಡುವ ಕೆಲಸ ಮಾಡಿದರು. ಆದರೆ, ಈಗಿನ ರಾಜ್ಯ ಸರ್ಕಾರ ಬೇರೆ ರಾಜ್ಯದ ಚುನಾವಣೆಗೆ ಹಣ ಕಳುಹಿಸುತ್ತಿದ್ದಾರೆ. ಇದನ್ನು ತಮ್ಮದೇ ಪಕ್ಷದ ಶಾಸಕ ರಾಯರೆಡ್ಡಿ ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯದಲ್ಲಿ ಮಾಡುತ್ತಿರುವುದು ನೋಡಬಹುದಾಗಿದೆ ಎಂದರು.
ಕಾಂಗ್ರೆಸ್ ನ ಒಳಗಿನ ಆಂತರಿಕ ಕಲಹ ಡಿಕೆಶಿ, ಸತೀಶ ಜಾರಕಿಹೊಳಿ, ಸಿದ್ದರಾಮಯ್ಯ ಒಂದೊಂದು ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅವರ ಅಸಮರ್ಥ ಆಡಳಿತ ಮರೆಮಾಚಲು ಬಿಜೆಪಿ ಅಪರೇಷನ್ ಕಮಲ ಎನ್ನುತ್ತಿದ್ದಿರಿ, ಅನಾವಶ್ಯಕ ರಾಮನಗರ ಸೇರ್ಪಡೆ ವಿಚಾರ ತರುತ್ತಿದ್ದಿರಿ. ಆ ಮೂಲಕ ನೀವು ಅಸಮರ್ಪಕ ಎಂದು ತೋರಿಸಿಕೊಂಡಿದ್ದಿರಿ ಎಂದರು.
ಕರ್ನಾಟಕದಲ್ಲಿ ಆವರಿಸಿರುವ ಬರವನ್ನು 17 ತಂಡದ ಮೂಲಕ ಅಧ್ಯಯನ ಮಾಡುತ್ತೇವೆ. ಬಸವರಾಜ ಪಾಟೀಲ್ ಯತ್ನಾಳ್ ಹಾಗೂ ಸಂಸದ ಪ್ರತಾಪಸಿಂಹ ಹರ್ಷವರ್ಧನ್, ಶ್ರೀವತ್ಸ ತಂಡ ಮೈಸೂರಿನಲ್ಲಿ ಮುಂದಿನ ದಿನಗಳಲ್ಲಿ ಮಾಡಲಿದೆ. ಕಳೆದ 5 ತಿಂಗಳಲ್ಲಿ 286 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಕಾನೂನು ಮೀರಿ ನಿನ್ನೆ ಎಸ್ ಡಿಪಿಐ ಎನಕ್ಕೆ ಮೆರವಣಿಗೆ ಹೊರಟರು. ಯಾರು ಅವರ ಬೆಂಬಲಕ್ಕೆ ಇದ್ದಾರೆಂದರು.
ನಮ್ಮ ಅವಧಿಯಲ್ಲಿ ಸರ್ ಪ್ಲಸ್ ಕರೆಂಟ್ ಇತ್ತು. ಉತ್ತರ ಪ್ರದೇಶಕ್ಕೆ ನಾವು ಕರೆಂಟ್ ಕೊಡುತ್ತಿದ್ದೇವು. ಈಗ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳುತ್ತಿದ್ದರು. ವಿದ್ಯುತ್ ಖರೀದಿಯಲ್ಲಿ ಹಣ ಲೂಟಿ ಮಾಡುವ ಹುನ್ನಾರ ಇರಬಹುದು ಎಂದರು. ಕಾಂಗ್ರೆಸ್ ಗೆ ಮತ ಕೊಟ್ಟ ಜನ ಈಗ ಮರುಕ ವ್ಯಕ್ತಪಡಿಸುತ್ತಿದ್ದಿರಿ. ತತಕ್ಷಣದಲ್ಲಿ ಬರ ಪೀಡಿತ ಸ್ಥಳಕ್ಕೆ ಜಿಲ್ಲಾ ಸಚಿವರನ್ನು ಕರೆಸಿಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಡಿಎಂಕೆ ಸ್ಟಾಲಿನ್ ಅವರೊಟ್ಟಿಗೆ ಮಾತನಾಡಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಮೂಲಕ ಹಾಕಿರುವ ಅರ್ಜಿಯನ್ನು ವಾಪಾಸ್ ಪಡೆಯಲು ಹೇಳಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾದ್ಯಮ ವಕ್ತಾರ ಕೆ.ವಸಂತ್ ಕುಮಾರ್, ಸೋಮಸುಂದರ್ ಇನ್ನಿತರರು ಉಪಸ್ಥಿತರಿದ್ದರು.