ಬರ ಘೋಷಣೆ ಮಾನದಂಡ ಬದಲು, ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು,ಆ.೧೩:ರಾಜ್ಯದಲ್ಲಿ ಮಳೆ ಕೊರತೆಯಿಂದ ಹಲವು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಈ ತಾಲ್ಲೂಕುಗಳ ಬರ ಘೋಷಣೆಗೆ ಈಗಿರುವ ನಿಯಮಗಳು ಅಡ್ಡಿಯಾಗಿವೆ. ಹಾಗಾಗಿ ಬರ ಘೋಷಣೆಯ ಮಾನದಂಡಗಳನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರವನ್ನು ಒತತಾಯಿಸಿದ್ದಾರೆ.
ಕೇಂದ್ರದ ಕೃಷಿ ಸಚಿವ ನರಏಂದ್ರಸಿಂಗ್ ತೋಮರ್‌ರವರಿಗೆ ಈ ಸಂಬಂಧ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬರ ನಿರ್ವಹಣೆಯ ಕೈಪಿಡಿಯಂತೆ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿದರೆ ರೈತರು ಬೆಳೆ ವೈಫಲ್ಯದ ಸಂದರ್ಭದಲ್ಲಿ ಇನ್‌ಪುಟ್ ಸಬ್ಸಿಡಿಗಳನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ, ಬರ ಘೋಷಿಸಲು ಪ್ರಸ್ತುತ ಇರುವ ನಿಯಮಗಳನ್ನು ಬದಲಿಸುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು,ಕರ್ನಾಟಕದಲ್ಲಿ ೩೩೬ ಮಿ.ಮೀ ಸಾಮಾನ್ಯ ಮಳೆಯಾಗಬೇಕಿತ್ತು.ಆದರೆ ೨೩೪ ಮಿ.ಮೀ ಮಳೆ ದಾಖಲಿಸಿದೆ. ಮಳೆ ಕೊರತೆಯಾಗಿದೆ. ದುರ್ಬಲ ಮಾನ್ಸೂನ್‌ನಿಂದ ಜೂನ್‌ನಲ್ಲಿ ಶೇ.೫೬ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ಬರಗಾಲದ ಪರಿಸ್ಥಿತಿದೆ. ಆದರೆ ಬರ ಘೋಷಿಸಲು ಈಗ ಇರುವ ನಿಯಮಾವಳಿಗಳಂತೆ ಆಗುತ್ತಿಲ್ಲ. ಹಾಗಾಗಿ, ಬರ ಘೋಷಣೆಯ ಮಾನದಂಡಗಳನ್ನು ಬದಲಿಸಲು ಮಧ್ಯಪ್ರವೇಶಿಸಬೇಕು ಎಂದು ಅವರು ಕೇಂದ್ರದ ಕೃಷಿ ಸಚಿವರನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪರಿಷ್ಕೃತ ಬರ ಕೈಪಿಡಿಯಲ್ಲಿರುವ ಬರ ಘೋಷಣೆಯ ನಿಯಮಗಳು ಬರ ಪರಿಸ್ಥಿತಿಗಳನ್ನು ನಿರ್ವಹಿಸಲು ಪ್ರಮುಖ ಮಾರ್ಗ ಸೂಚಿಗಳಾಗಿವೆ ನಿಜ ಆದರೆ,ರಾಜ್ಯದಲ್ಲಿನ ವೈವಿಧ್ಯಮಯ ೧೪ ಕೃಷಿ ಹವಾಮಾನ ವಲಯಗಳನ್ನು ಪ್ರತಿಬಿಂಬಿಸಲು ಅವುಗಳನ್ನು ಪರಿಷ್ಕರಿಸಬೇಕಾಗಬಹುದು. ಪ್ರತಿಯೊಂದು ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ. ಬರ ಘೋಷಣೆಗೆ ಪ್ರಸ್ತುತ ಒಂದು ಗಾತ್ರ. ಹಾಗಾಗಿ ಬರ ಘೋಷಣೆಯ ಮಾನದಂಡಗಳ ಬದಲಾವಣೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬರ ಘೋಷಣೆಯ ಮಾನದಂಡಗಳನ್ನು ಬದಲಿಸುವ ವಿಶ್ವಾಸವಿದೆ ರತರ ಸಂಕಷ್ಟ ನಿವಾರಣೆಯ ಜತೆಗೆ ರೈತರಿಗೆ ಸಕಾಲಿಕ ಸಹಾಯವನ್ನು ನೀಡಲು ಸಾಧ್ಯವಾಗುತ್ತದೆ. ಹಾಗೆಯೇ ಬರಪೀಡಿತ ಪರದೇಶಗಳಲ್ಲಿನ ಜನರ ಯೋಗಕ್ಷೇಮದ ಬದ್ಧತೆಯನ್ನು ಪ್ರದರ್ಶಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.