ಬರ ಎದುರಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲ

ಕಲಬುರಗಿ: ಅ.17:ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ,ಜನ ವಿರೋಧಿ ನೀತಿ,ರೈತರಿಗೆ ಅಸಮರ್ಪಕ ವಿದ್ಯುತ ವಿತರಣೆ, ಬರ ಪರಿಹಾರ ವಿತರಣೆ ವಿಳಂಬ ಸೇರಿ ರಾಜ್ಯ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ಮುಖಂಡ ಗುಂಡಪ್ಪ ಟಿ ಮತ್ತಿಮಡು ಅವರು ತೀವ್ರವಾಗಿ ಆರೋಪಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬರದಿಂದ ಜನ ತತ್ತರಿಸಿದ್ದು, ವಿದ್ಯುತ ಕಡಿತದಿಂದ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ. ಗ್ಯಾರಂಟಿ ಹೆಸರಲ್ಲಿ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ. ರಾಜ್ಯದ ರೈತರು ಕಷ್ಟದಲ್ಲಿದ್ದರೂ ರಾಜ್ಯ ಸರಕಾರ ತಮಿಳುನಾಡಿನ ಸರಕಾರ ಓಲೈಸಿಕೊಳ್ಳಲು ಕಾವೇರಿ ಹರಿಸುತ್ತಿದೆ.ಇದು ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕಾರಕ್ಕೆ ಬಂದ ನೂರು ದಿನದಲ್ಲಿಯೇ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ.ರೈತರ ಬಗ್ಗೆ ಕಿಂಚತ್ತೂ ಕಾಳಜಿ ತೋರುತ್ತಿಲ್ಲ. ನುಡಿದಂತೆ ನಡೆದ್ದಿದೇವೆ ಎನ್ನುತ ಕೋಟ್ಯಾಂತರ ರೂಪಾಯಿ ಜಾಹೀರಾತುಗಳಿಗೆ ವಿನಿಯೋಗ ಮಾಡುತ್ತಿದೆಯೇ ಹೊರತು ರೈತರು,ಮಧ್ಯಮ ವರ್ಗದವರು,ಬಡವರ ಪರ ಕಾಳಜಿ ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಬೆಂಗಳೂರಿನ ಅಂಬಿಕಾಪತಿ ಮನೆಯಲ್ಲಿ ಕೋಟಿ ಕೋಟಿ ಹಣದ ಕಂತೆ ಪತ್ತೆಯಾಗಿದೆ. ಇದು ಕೇವಲ ಒಂದು ಉದಾರಣೆ ಅಷ್ಟೇ.ಗುತ್ತಿಗೆದಾರರಿಗೆ ಬಾಕಿ ಹಣ ಪಾವತ್ತಿಗೆ ಕಾಂಗ್ರೆಸ್ ಸರಕಾರ ಕೋಟ್ಯಾಂತರ ಕಮೀಷನ್ ಪಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೊಪಿಸಿದರು.

    ವಿದ್ಯುತ ಕೊರತೆಯಿಂದ ರೈತರ ಜಮೀನುಗಳಿಗೆ ನೀರು ಹಾಯಿಸಲಾಗುತ್ತಿಲ್ಲ.ದುಬಾರಿ ಕರೆಂಟ ಬಿಲ ಸಾರ್ವಜನಿಕರಿಗೆ ಹೈರಾಣಗೊಳಿಸಿದೆ.ರೈತರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ. ಬಡವರು,ಕೂಲಿ ಕಾರ್ಮಿಕರು ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ರಾಜ್ಯ ಸರಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು ಕೂಡಲೇ ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಅವರು ಒತ್ತಾಯಿಸಿದರು.