ಬರ್ತೆಡೆ ಮಾಡಿಕೊಂಡು ಬರುತ್ತಿದ್ದ ಐದು ಜನ ಮಸಣಕ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಕೊಪ್ಪಳ, ಜು.24: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ನಿನ್ನೆ ರಾತ್ರಿ ಸ್ಕಾರ್ಪಿಯೋ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಂಭವಿಸಿದ  ಅಪಘಾತದಲ್ಲಿ ಒಂದೇ ಕುಟುಂಬದ  ಐದು ಜನ‌ ಸಾವನ್ನಪ್ಪಿ. ನಾಲ್ವರು ಗಾಯಹೊಂಡಿರುವ ಘಟನೆ ನಡೆದಿದೆ.
ಮೃತರು ಬಿನ್ನಾಳ ಗ್ರಾಮದ ದೇವಪ್ಪ ಎನ್ನುವವರ ಕುಟುಂಬದ ಸದಸ್ಯರಾಗಿದ್ದಾರೆ. ಕೊಪ್ಪಳದಲ್ಲಿ ಸಂಬಂಧಿಕರೊಬ್ಬರ ಬರ್ತಡೆ   ಪಾರ್ಟಿ ಮುಗಿಸಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಯಲಬುರ್ಗಾ ತಾಲೂಕು ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(62), ಅವರ  ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ(32), ಸಂಬಂಧಿ ಕಸ್ತೂರಮ್ಮ (20) ಮೃತರಾಗಿದ್ದಾರೆ
ತೀವ್ರವಾಗಿ ಗಾಯಗೊಂಡ  ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಿಲ್ಲಾಸ್ಪತ್ರೆಗೆ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.

Attachments area