`ಬರ್ಗೆಟ್ ಬಸ್ಯಾ’ ಚಿತ್ರೀಕರಣ ಮುಕ್ತಾಯ

`ಬರ್ಗೆಟ್ ಬಸ್ಯಾ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. £ ತೀರ್ಥಹಳ್ಳಿ, ಕೊಪ್ಪ, ಬೆನಗನಹಳ್ಳಿ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.

ಚಿತ್ರವನ್ನು ರಿಶ್ ಹಿರೇಮಠ್, ಮೊದಲಬಾರಿಗೆ ನಿರ್ದೇಶಿಸಿದ್ದು, ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದಿದ್ದಾರೆ. ಚಿತ್ರದ ನಾಯಕಿ ಸಂಗೀತ.ಎನ್.ಸ್ವಾಮಿ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ಛಾಯಾಗ್ರಹಣ ಶ್ಯಾಮ್ ಸಾಲ್ವಿನ್, ಸಾಹಿತ್ಯ ಪ್ರಕಾಶ್.ಜಿ. ಸಂಕಲನ ಸಂಜಯ್ ರೆಡ್ಡಿ, ಅನುಜ್.ಎಸ್. ಪರಿವೃದ್ ರವರ ಸಂಗೀತ. `ಕಂಡ ಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಎಂದು ಬರ್ಗೆಟ್ ಬಸ್ಯ ಎನ್ನುವ ಪಾತ್ರಧಾರಿ ಅವರನ್ನು ಹಿಂಬಾಲಿಸುವುದರ ಬಗ್ಗೆ’ ಕಥಾವಸ್ತುವಿದೆ.  ಸಂಪೂರ್ಣ ಹಾಸ್ಯ ರೂಪದಾಲ್ಲಿ ತರಲಾಗುತ್ತೆ. ಈ ಚಿತ್ರದಲ್ಲಿ ಬರುವ 40 ಹುಡುಗಿಯರು ಬಸ್ಯನ ಜೀವನದಲ್ಲಿ ಹಾದುಹೋಗುತ್ತಾರೆ.  ಇದರ ಸುತ್ತ ಹೆಣೆದಿರುವ ಕಥಾವಸ್ತು ಇದು. ವೈ.ನಾಗಾರ್ಜುನ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.