ಬರೀ ಕನ್ನಡ ಎಂದು ಹೇಳಿದರೆ ಸಾಲದು ಕನ್ನಡ ಬಗ್ಗೆ ಸ್ವಾಭಿಮಾನ ಇರಬೇಕು

??????

ಆಳಂದ:ನ.2:
ಇಂದಿನ ದಿನ ಮಾನಗಳಲ್ಲಿ ಕನ್ನಡ ಅಳಿವು , ಉಳಿವು ಬಗ್ಗೆ ಚಿಂತಿಸಬೇಕಾಗಿದೆ. ರಾಜ್ಯದಲ್ಲಿ ಇತರೆ ಭಾಷಿಗರು ವಲಸೆ ಬರುತ್ತಿದ್ದು. ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಅಭಿವೃದ್ಧಿಗಾಗಿ ಶ್ರಮಿಸುವ ಕಾರ್ಯ ನಡೆಯಬೇಕೆಂದು ತಹಶೀಲ್ದಾರ ಯಲ್ಲಪ್ಪ ಸುಬೆದಾರ ಅವರು ಹೇಳಿದರು.
ತಹಶೀಲ ಕಚೇರಿಯಲ್ಲಿ ತಾಲೂಕು ಆಡಳಿತ ಏರ್ಪಡಿಸಿ ಕನ್ನಡ ರಾಜೋತ್ಸವ ಸಮಾರಂಬದಲ್ಲಿ ಪ್ರಾಸ್ಥವಿಕವಾಗಿ ಮಾತನಾಡಿದ ಅವರು ಬರೀ ಕನ್ನಡ ಎಂದು ಹೇಳಿದರೆ ಸಾಲದು ಕನ್ನಡ ಬಗ್ಗೆ ಸ್ವಾಭಿಮಾನ ಇರಬೇಕು. ಕನ್ನಡ ಒಂದು ಗೂಡಿಸಲು ಹಲವಾರು ನಾಯಕರು ಶ್ರಮಿಸಿದನ್ನು ನಾವು ಶ್ರಮಿಸಬೇಕೆಂದು ಹೇಳಿದರು.
ಮುಖಂಡರಾದ ಅಶೋಕ ಗುತ್ತೇದಾರ, ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ಪಾಟೀಲ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ, ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಖಗಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ಸಂಜಯ ರೆಡ್ಡಿ, ಸಮಾಜ ಕಲ್ಯಾಣ ವಿಜಯಕುಮಾರ ಪುಲಾರೆ, ಬಿಸಿಯೂಟ ಅಧಿಕಾರಿ ಲೋಕಪ್ಪ ಜಾಧವ, ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ್, ಆಹಾರ ನೀರಿಕ್ಷಕ ಪ್ರವೀಣ ಸಾತನೂರೆ, ಗ್ರೇಡ-2 ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ ಹಾಗೂ ದವಲಪ್ಪ ವಣದೆ, ಆನಂದರಾಯ ಯಲಶಟ್ಟಿ, ಬಸವರಾಜ ಕೋರಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲಾಪಟಾಪ್ ವಿತರಣೆ
2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಧಂಗಪೂರ ಸರಕಾರಿ ಪ್ರೌಢ ಶಾಲೆಯ ಬೀರಣ್ಣಾ ಪೂಜಾರಿ, ಹಿತ್ತಲಶಿರೂರಿನ ಸುಮಿತ್ರಾಬಾಯಿ , ನಿಂಬಾಳದ ಮಹೇಶ ಶರಣಪ್ಪ ಅವರಿಗೆ ಸರಕಾರದಿಂದ ಉಚಿತವಾಗಿ ಲಾಪಟಾಪ ಶಿಕ್ಷಣ ಇಲಾಖೆ ವಿತರಿಸಿದರು. ಶಿಕ್ಷಕರಾದ ಸುರೇಶ ಕುಮಾರ ಕುಲಕರ್ಣಿ ಧಂಗಾಪೂರ ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಇದ್ದರು.