ಬರೀದಶಾಹಿ ಉದ್ಯಾನದಲ್ಲಿ ವಿಶ್ವಗುರು ಬಸವಣ್ಣನವರ ಭಾವ ಚಿತ್ರದ ಅನಾವರಣ

ಬೀದರ:ಫೆ.19:12ನೇ ಶತಮಾನದಲ್ಲಿ ಕ್ರಾಂತಿ ಯೋಗಿ ಶ್ರೀ ಜಗಜ್ಯೋತಿ ಬಸವಣ್ಣನವರು ಸಾರ್ವತ್ರಿಕ ಮೌಲ್ಯಗಳನ್ನು ಬೋಧಿಸಿರುವುದರಿಂದ, ರಾಜ್ಯ ಸರ್ಕಾರವು ಅವರನ್ನು “”ಕರ್ನಾಟಕದ ಸಾಂಸ್ಕøತಿಕ ನಾಯಕನೆಂದು”” ಘೋಷಿಸಿರುವುದು ಸಂದ ರ್ಭೋಚಿತವಾಗಿದೆ ಹಾಗೂ ಸರ್ವರಿಗೂ ಸಂತಸದ ವಿಷಯವಾಗಿದೆ ಎಂದು ವಿ.ವಿ.ಯ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ನುಡಿದರು.
ಅವರು ಬೀದರನ ಬರೀದಶಾಹಿ ಉದ್ಯಾನದಲ್ಲಿ ಜಗಜ್ಯೋತಿ ಬಸವಣ್ಣ ನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದ ಬಸವಣ್ಣನವರ ತತ್ವ -ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿ ಕೊಳ್ಳುವುದು ಅತ್ಯಾವಶ್ಯಕವಾಗಿದೆ ಅಭಿಪ್ರಾಯ ಪಟ್ಟರು. ಹಿರಿಯ ಯೋಗ ಮೇಲ್ವಿಚಾರಕರಾದ ಗಂಗಪ್ಪ ಸಾವಲೆಯವರು ಮಾತನಾಡಿ, ಸರಕಾರವು ಎಲ್ಲ ಕಚೆರಿಗಳಲ್ಲಿ ಬಸವಣ್ಣ ನವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸ ಬೇಕೆoದು ಆದೇಶ ಮಾಡಿರುವುದು ಸ್ತುತ್ಯಾರ್ಹವಾಗಿದೆ. ಬಸವ ತತ್ವ ಅನುಯಾಯಿಗಳು ಇದರ ಮೆಲ್ವಿಚಾರಣೆ ಮಾಡಿ ಅದನ್ನು ಕಾರ್ಯಾನ್ವ ಯ ಗೊಳಿಸಬೇಕೆಂದು ಕರೆ ನೀಡಿದರು. ಪ್ರತಿ ವರ್ಷ ಈ ದಿನವನ್ನು ಹಬ್ಬದ ರೂಪದಲ್ಲಿ ಆಚರಿಸ ಬೇಕೆಂದು ಎಲ್ಲರಿಗೆ ಪ್ರತಿಜ್ಞೆ ಯನ್ನು ಬೋಧಿಸಲಾಯಿತು. ಅರುಣಾ, ವೀಣಾ ಹಾಗೂ ಪುಷ್ಪಾರವರು ಬಸವೇಶ್ವರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ವಾಗಿ ಪೂಜೆ ಸಲ್ಲಿಸಿದರು. ಶ್ವೇತ ವಸ್ತ್ರಧಾರಿಗಳಾಗಿದ್ದ ಎಲ್ಲರೂ ವಚನ ಪಠಣ ಹಾಗೂ ಗಾಯನ ಮಾಡಿದರು. ಸರ್ವರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಹಿರಿಯರಾದ ಮಲ್ಲಿಕಾರ್ಜುನ ಪಾಟೀಲ್ ಸ್ವಾಗತಿಸಿದರು. ಕೊನೆಯಲ್ಲಿ ಅಶೋಕ್ ಸೀಲವoತ್ ರವರು ವoದಿಸಿದರು. ರಾಮಕೃಷ್ಮ ಮುಣಿಗ್ಯಾಲ, ಸಂಜು ಕುಮಾರ್ ಪಾಟೀಲ, ನಂದಕುಮಾರ್ ಸ್ವಾಮಿ, ವೀರಶೆಟ್ಟಿ, ಚಂದ್ರಶೇಖರ್ ದೇವನಿ, ಶಿವರಾಜ್ ಕಪಲಾಪುರ ಮುಂತಾದವರು ಭಾಗವಹಿಸಿದ್ದರು