
ಬೀದರ್:ಅ.1: ಇತ್ತೀಚಿಗೆ ಕಲುಷಿತ ನೀರು ಕುಡಿದು ಅಶ್ವತ್ಥರಾದ ಬರಿದಾಬಾದ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ್ಪಾ.ಎಂ ನೀಡಿ ಗ್ರಾಮದಲ್ಲಿ ಅಸ್ವಸ್ಥರಾದವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ನೀರು ಸರಬರಾಜಾಗುವ ನಲ್ಲಿಗಳನ್ನು, ಟ್ಯಾಂಕರ್ ಗಳನ್ನು ಸ್ವಚ್ಚಗೊಳಿಸಬೇಕು, ತ್ಯಾಜಾವಸ್ತು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಹಾಗೂ ಎಲ್ಲರಿಗೂ ಶುದ್ಧ ಕುಡಿಯುವ ನೀರ ಸರಬರಾಜಾಗುವಂತೆ ಕ್ರಮ ವಹಿಸಬೇಕು ಎಂದರು.
ಬೀದರ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಮಾಣಿಕರಾವ ಪಾಟೀಲ್ ಮಾತನಾಡಿ, ಅಧಿಕಾರಿ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು, ಸರಿಯಾಗಿ ಕೆಲಸ ಮಾಡದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು
ಎಲ್ಲರೂ ನೀರನ್ನು ಕಾಯಿಸಿ ಸೆವಿಸಬೇಕು. ಮಳೆಯಿಂದಾಗಿ ನಮ್ಮ ಸುತ್ತಮುತ್ತ ತ್ಯಾಜವಸ್ತು ಸಂಗ್ರಹವಾಗಿ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ ಆದರಿಂದ ಎಲ್ಲರೂ ಮುಜಾಗೃತಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಇಇ ಸಂಜೀವ ಕುಮಾರ ಸಲಕೆ, ಜೆಇಇ ಮಲ್ಲಿಕಾರ್ಜುನ ಪಾಟೀಲ್ ,ಐಇಸಿ ಸಂಯೋಜಕ ಸತ್ಯಜಿತ್ ನಿಡೋದಕರ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.