ಬರಪೀಡಿತ ಪ್ರದೇಶದ ಘೋಷಣೆಗೆ ಅಗ್ರಹ


ನವಲಗುಂದ,ಸೆ.16: ಅಣ್ಣಿಗೇರಿ ತಾಲ್ಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಮಾಜಿ ತಾಲ್ಲೂಕಾ ಪಂಚಾಯತ್ ಅಧ್ಯಕ್ಷ ನಿಂಗಪ್ಪ ಬಾರಕೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಣ್ಣಿಗೇರಿ ತಾಲ್ಲೂಕಿನಲ್ಲಿ ಕೇವಲ ನಾಲ್ಕು ಹಳ್ಳಿಗಳು ನೀರಾವರಿ ವ್ಯಾಪ್ತಿಗೆ ಬರುತ್ತವೆ. ಉಳಿದ 18 ಹಳ್ಳಿಗಳು ಒಣ ಬೇಸಾಯ ಜಮೀನುಗಳಿಂದ ಕೂಡಿದ್ದು ಅಣ್ಣಿಗೇರಿ ತಾಲ್ಲೂಕಿನ ತೊಂಬತ್ತರಷ್ಟು ಜಮೀನುಗಳು ಬರಗಾಲದಿಂದ ಕೂಡಿದ್ದು ಬರ ಪಟ್ಟಿಯಿಂದ ಅಣ್ಣಿಗೇರಿ ತಾಲ್ಲೂಕನ್ನು ಕೈ ಬಿಟ್ಟಿರುವುದು ಸರಿಯಲ್ಲ.
ಮುಂಗಾರು ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಹಿಂಗಾರು ಬೆಳೆ ಸಹಿತ ಬರಲಾರದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ತಕ್ಷಣ ಸರ್ಕಾರ ಅಣ್ಣಿಗೇರಿಯನ್ನು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.