(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21: ಬರಪೀಡಿತ ಪ್ರದೇಶದಲ್ಲಿ ರೈತರ ಹಾಗೂ ಕೃಷಿ ಕೂಲಿಕಾರರ ಗೂಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆಯನ್ನು ನಿರಂತರ ಜಾರಿಗೊಳಿಸಬೇಕುಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಜಾರಿಗೊಳಿಸಲು
ಭಾರತ್ ಕಮ್ಯುನಿಸ್ಟ್ ಪಕ್ಷ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ
ಜಿಲ್ಲೆಯಲ್ಲಿನ ಐದು ತಾಲೂಕ್ಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದರೆ ಸಾಲದು. ತುಂಗಭದ್ರ ಡ್ಯಾಮ್ ನಲ್ಲಿ ಪ್ರತಿ ವರ್ಷದ ವಾಡಿಕೆಯಂತೆ ನೀರು ಸಂಗ್ರಹಗೊಂಡಿಲ್ಲ ಕಾರಣ ಇದರಿಂದ ನೀರಾವರಿ ಸೌಲಭ್ಯ ಹೊಂದಿದ ಪ್ರದೇಶದಲ್ಲಿ ಬರ ತಾಂಡವವಾಡುತ್ತಿದೆ ಈ ಬರದಿಂದಾಗಿ ಸಾಲಸೂಲದಲ್ಲಿ ಸಿಲುಕಿದ ಅನ್ನದಾತರು ಆತ್ಮಹತ್ಯೆ ಗೀಡಾಗುವ ಅಪಾಯವಿದೆ
ಇದಕ್ಕೆ ತಕ್ಕಂತೆ ಬರ ಪರಿಹಾರ ಕಾರ್ಯಕ್ರಮಗಳನ್ನು ತ್ವರಿತವಾಗಿ ತೆಗೆದುಕೊಂಡು ರೈತರ ಹಾಗೂ ಕೃಷಿ ಕೂಲಿಕಾರರ ಜೀವನದ ರಕ್ಷಣೆಗೆ ಮುಂದಾಗಬೇಕು.
ವಿದ್ಯುತ್ ಕಣ್ಮುಚ್ಚಾಲೆಯಿಂದ ಉಂಟಾದ ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಬಡ ರೈತರ ಕೂಲಿಕಾರರ ಹಾಗೂ ಸ್ತ್ರೀ ಶಕ್ತಿ ಮಹಿಳೆಯರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಬೇಕು ಅಲ್ಲದೆ ಶ್ರೀಮಂತರ ಸಾಲವನ್ನು ದೀರ್ಘಾವಧಿ ಸಾಲವಾಗಿ ಪರಿವರ್ತಿಸಿ ಬಡ್ಡಿಯನ್ನು ಮನ್ನಾ ಮಾಡಬೇಕು. ಮುಂದಿನ ಕೃಷಿ ಜೀವನಕ್ಕೆ ಅಗತ್ಯವಾಗಿ ಬೇಕಾದ ಗೊಬ್ಬರ ಬೀಜ ಕೀಟನಾಶಗಳನ್ನು ಉಚಿತವಾಗಿ ವಿತರಿಸಬೇಕು ಹಿಂಗಾರಿನ ಕೃಷಿ ಕೆಲಸಗಳನ್ನು ಅಂದರೆ ನಾಟಿ ಬಿತ್ತನೆ ಕೀಟನಾಶಕ ಸಿಂಪರಣೆ ಕೆಲಸಗಳನ್ನು ಉದ್ಯೋಗ್ರಾತಿ ಯೋಜನೆಗೆ ಅಳವಡಿಸಬೇಕು ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದೆ
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಚಂದ್ರ ಕುಮಾರಿ, ಜೆ. ಸತ್ಯ ಬಾಬು, ಈರಮ್ಮ, ಬೈಲ ಹನುಮಂತ, ಹೊನ್ನೂರ್ ಸಾಬ್, ನವೀನ್, ಜಿ ಎರ್ರಿ ಸ್ವಾಮಿ, ತಿಪ್ಪೆ ರುದ್ರ, ಎಚ್ ಏನ್ ಎರ್ರಿಸ್ವಾಮಿ, ಜಿ ಎಸ್ ಮೂರ್ತಿ ಇದ್ದರು.