ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ನಾಳೆ ಕುಂದಗೋಳ ಬಂದ್


ಕುಂದಗೋಳ,ಸೆ.13: ಕುಂದಗೋಳ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು ಬರಪರಿಹಾರ ರೈತರಿಗಾಗಿ ರೂಪಿಸಿರುವ ಯೋಜನೆ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಮಾಡವ ಕುರಿತಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ ಗುರುವಾರ ಬೆಳಿಗ್ಗೆ 14 ರಂದು ಬೆ.9 ರಿಂದ ಸಂಜೆಯ ವರೆಗೆ ಕುಂದಗೋಳ ಬಂದ್ ಆಚರಿಸಲಾಗುತ್ತದೆ ಎಂದು ರೈತಪರ ಸಂಘಟನೆಗಳ ಒಕ್ಕೂಟದ ಮಾಣಿಕ್ಯ ಚಿಲ್ಲೂರ ಅವರು ತಿಳಿಸಿದರು.
ಕುಂದಗೋಳ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಬೇಡಿಕೆ ಈಡೇರಿಕೆಗೆ ಸ್ಪಂದಿಸುವುದಲ್ಲದೇ ಕೃಷಿ ಸಚಿವರು ಬಂದು ಮನವಿ ಸ್ವೀಕರಿಸುವ ವರೆಗೂ ಪ್ರತಿಭಟನೆ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ರೈತಪರ ಸಂಘಟನೆಗಳ ಅನೇಕ ಮುಖಂಡರು, ಕಾರ್ಯಕರ್ತರಿದ್ದರು.