ಬರದ ನಾಡಿನಲ್ಲಿ  ವರುಣನ ಆರ್ಭಟ.ಕೊಟ್ಟಿಗೆ ಬಿದ್ದು ಮೇಕೆ – ಮರಿಗಳು ಸಾವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.20 :- ಆರಂಭದ ವರ್ಷಧಾರೆ ಜೋರಾಗಿದ್ದು ಕೂಡ್ಲಿಗಿ ತಾಲೂಕಿನಲ್ಲಿ  ನಿನ್ನೆ ಮಧ್ಯಾಹ್ನ ದಿಂದಲೇ ವರುಣನ ಆರ್ಭಟದ ಮಳೆ ಗಾಳಿಗೆ ಕೊಟ್ಟಿಗೆಯೊಂದು ಬಿದ್ದು ಅದರಡಿ ಇದ್ದ ನಾಲ್ಕು ಮೇಕೆ ಹಾಗೂ ನಾಲ್ಕು ಮೇಕೆಮರಿಗಳು ಸಾವನ್ನಪ್ಪಿದ್ದು, ಅತೀ ಹೆಚ್ಚು ಮಳೆ ಸುರಿದ ಬಣವಿಕಲ್ಲು ವ್ಯಾಪ್ತಿಯ ಅಮಲಾಪುರ ಗ್ರಾಮದ ಮನೆಯ ಮೆಲ್ಚಾವಾಣಿ ಸಜ್ಜಾ ಬಿದ್ದಿರುವ ಬಗ್ಗೆ ಕಂದಾಯ ಇಲಾಖೆಯ ಮಾಹಿತಿ ತಿಳಿಸಿದೆ.
ನಿನ್ನೆ ಮಧ್ಯಾಹ್ನದಿಂದಲೇ ಬರದ ನಾಡಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ಕೂಡ್ಲಿಗಿ ಸುತ್ತಮುತ್ತ ಮಳೆ ಸುರಿದಿತ್ತು ನಂತರ ಸಂಜೆ ಸಮಯದಲ್ಲಿ ತಾಲೂಕು ವ್ಯಾಪ್ತಿಯಲ್ಲಿಬಣವಿಕಲ್ಲು  ಕೂಡ್ಲಿಗಿ, ಹೊಸಹಳ್ಳಿ, ಚಿಕ್ಕಜೋಗಿಹಳ್ಳಿ ವ್ಯಾಪ್ತಿ ವರುಣನ ಆರ್ಭಟದಲ್ಲಿ ಮಳೆ ಗಾಳಿ ಗುಡುಗು ಸಿಡಿಲು ಜೋರಾಗಿ ತಾಲೂಕಿನ ಗಡಿಭಾಗವಾದ ಟಿ ಕಲ್ಲಹಳ್ಳಿ ಗೊಲ್ಲರಹಟ್ಟಿಯ  ಪೂಜಾರಿ ನಾಗಣ್ಣ ಅವರ ಮನೆಯ ಹತ್ತಿರದ ಕೊಟ್ಟಿಗೆ ಬಿದ್ದಿದ್ದು ಇದರಡಿ ಕಟ್ಟಲಾಗಿದ್ದ ನಾಲ್ಕು ಮೇಕೆ ಹಾಗೂ ನಾಲ್ಕು ಮೇಕೆಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಅಲ್ಲದೆ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ತಿರುಮಲೇಶ ಎನ್ನುವವರ ಮನೆ ಮೆಲ್ಚಾವಾಣಿಯ ಸಜ್ಜಾ ಕುಸಿದು ಬಿದ್ದಿದೆ ಎನ್ನುವ  ಬಗ್ಗೆ ಆಯಾ ಗ್ರಾಮದ ಗ್ರಾಮಲೆಕ್ಕಾಧಿಕಾರಿಗಳು  ಹಾಗೂ ಹೊಸಹಳ್ಳಿ ಕಂದಾಯ ನೀರಿಕ್ಷಕರು  ಕೂಡ್ಲಿಗಿ ತಹಸೀಲ್ದಾರ್ ಗೆ ಮಳೆಯಿಂದಾದ ಹಾನಿಯ ಬಗ್ಗೆ ವರದಿ ಸಲ್ಲಿಸಿದ್ದಾರೆ