ಬರದ ನಾಡಾಗಿರುವ ಚಿತ್ರದುರ್ಗ ಬಂಗಾರದ ನಾಡಾಗಿ ಮಾರ್ಪಡಲಿದೆ

ಚಿತ್ರದುರ್ಗ, ಮೇ.15: ಸುಮಾರು ವರ್ಷಗಳಿಂದ ಜಡ್ಡುಗಟ್ಟಿರುವ ಚಿತ್ರದುರ್ಗ ರಾಜಕೀಯವನ್ನು ನೂತನವಾಗಿ ಆಯ್ಕೆಯಾಗಿರುವ ಶಾಸಕ ಕೆ.ಸಿ.ವಿರೇಂದ್ರಪಪ್ಪಿ ಅವರು ಸರಿಪಡಿಸಲಿದ್ದಾರೆ ಎಂದು ಚಲನ ಚಿತ್ರ ಹಾಸ್ಯ ನಟ ದೊಡ್ಡಣ್ಣ ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಕರಿ ನಾಯಕರು ಆಳ್ವಿಕೆ ಮಾಡಿದಂತಹ ಚಿತ್ರದುರ್ಗ ಕಳೆದ 35 ವರ್ಷಗಳಿಂದ ಅಭಿವೃದ್ಧಿ ಕಾಣದೇ ಕುಂಠಿತಗೊಂಡಿತ್ತು. ಇಲ್ಲಿನ ಐತಿಹಾಸಿಕ ಏಳು ಸುತ್ತಿನ ಕೋಟೆ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಬೇಕಿತ್ತು. ಆದರೆ ಇಲ್ಲಿನ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸೇರಿರಲಿಲ್ಲ. ಅಲ್ಲದೆ ಇಂತಹ ಅದೇಷ್ಟೋ ಕಾರ್ಯಗಳು ಮೂಲೆ ಗುಂಪಾಗಿ ಸೇರಿವೆ ಅಂತಹ ಕಾರ್ಯಗಳನ್ನು ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವಂತಹ ನನ್ನ ಅಳಿಯ ವಿರೇಂದ್ರಪಪ್ಪಿ ಅವರು ಮುನ್ನೆಲೆಗೆ ತರಲಿದ್ದಾರೆ ಎಂದರು.ಕೋಟೆ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಲು ಯುನೆಸ್ಕೋ ಸೇರ್ಪಡೆ ಆಗಬೇಕಿದೆ. ಅದಕ್ಕಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಮಾಡಲಿದ್ದಾರೆ. ಚಿತ್ರದುರ್ಗವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಬೇಕಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಇದರಿಂದ ಬರದ ನಾಡಾಗಿರುವ ಚಿತ್ರದುರ್ಗ ಬಂಗಾರದ ನಾಡಾಗಿ ಮಾರ್ಪಡಲಿದೆ ಎಂದು ಹೇಳಿದರು.ಈ ಭಾರೀ ಚುನಾವಣೆಯಲ್ಲಿ ಶೇಕಡ 80% ಜನರನ್ನು ನಾವು ತಲುಪಿದ್ದೆವೆ ಇದರಿಂದ ಹೆಚ್ಚಿನ ಮತದಾನ ಆಗಿದೆ. ನನ್ನ ಅಳಿಯ ವಿರೇಂದ್ರಪಪ್ಪಿ ಅವರ ಗೆಲುವಿಗೆ ಕಾರಣರಾದ ಚಿತ್ರದುರ್ಗ ಕ್ಷೇತ್ರದ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಲೀಲಾಧರ್ ಠಾಕೂರ್, ಮಹೇಶ್, ಅಬ್ದುಲ್ ರೆಹಮಾನ್, ಶಿವರಾಜ್ ಜಾಲಿಕಟ್ಟೆ ಕೊಟ್ರೇಶ್ ಉಪಸ್ಥಿತರಿದ್ದರು.