ಬರದ ಜಿಲ್ಲೆ ಎಂದು ಪ್ರತೀತವಾದ ಈ ವಿಜಯಪುರವನ್ನು ವನದ ನಾಡನ್ನಾಗಿ ಮಾಡಬೇಕಾಗಿದೆಃ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ, ಜ.14-ವಿಜಯಪುರ ನಗರದ ವಾರ್ಡ ನಂ. 02, ಲಿಂಗೇಶ್ವರ ಕಾಲೋನಿಯ ಉದ್ಯಾನದಲ್ಲಿ ಜ್ಞಾನಯೋಗಾಶ್ರಮದ ನಡೆದಾಡುವ ದೇವರಾದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಉದ್ಯಾನವನದಲ್ಲಿ ಹಚ್ಚಿದ 250 ಗಿಡಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಅವರು ನಮ್ಮಿಂದ ಏನನ್ನು ಬಯಸದ ನಿಸರ್ಗ ದೇವತೆಯ ಆರಾಧಕರಾದ ಅವರು ಹೂವಿನಲ್ಲಿ ತಂಪಾದ ನೆರಳಿನಲ್ಲಿ ದೇವರನ್ನು ಕಾಣಿರಿ, ಬರದ ಜಿಲ್ಲೆ ಎಂದು ಪ್ರತೀತವಾದ ಈ ವಿಜಯಪುರವನ್ನು ವನದ ನಾಡನ್ನಾಗಿ ಮಾಡಬೇಕಾಗಿದೆ ಎಂದ ಅವರು ನಿಸರ್ಗ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ. ನಿಸರ್ಗ ರಕ್ಷಣೆ ಮುಂದಿನ ಪೀಳಿಗೆಯ ರಕ್ಷಣೆಯಾಗುತ್ತದೆ ಎಂದು ತಿಳಿಸಿದರು.
ಪೂಜ್ಯರ ಜೊತೆಯಲ್ಲಿ ಸೊನ್ನದ ವೀರಕ್ತಮಠದ ಪ.ಪೂ. ಶಿವಾನಂದ ಸ್ವಾಮಿಜಿಗಳು, ಮತ್ತು ಜ್ಞಾನಯೊಗಾಶ್ರಮದ ಬಸವಲಿಂಗ ಸ್ವಾಮೀಜಿಗಳು, ಉದ್ಯಾನವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಲಿಂಗೇಶ್ವರ ಕಾಲೋನಿಯ ವನ ವಿಜಯಪುರಕ್ಕೆ ಮಾದರಿ ವನ ಆಗಿದೆ ಎಂದು ಹಾಡಿ ಹೊಗಳಿದರು.
ಈ ಸಂದರ್ಭದಲ್ಲಿ ಲಿಂಗೇಶ್ವರ ಕಾಲೋನಿಯ ಅದ್ಯಕ್ಷರಾದ ಸಂತೋಷ ಕವಟೇಕರ ಮಾತನಾಡಿ, ಉದ್ಯಾನವನದ ಪ್ರಗತಿಗಾಗಿ ಶ್ರಮಿಸಿದ ಮತ್ತು ಸಹಾಯ ಮಾಡಿದ ಲಿಂಗೇಶ್ವರ ಕಾಲೋನಿಯ ಜನರನ್ನು ಶ್ಲಾಘಿಸಿದರು. ಸ್ವಚ್ಚ ಭಾರತ ಅಭಿಯಾನದ ವಿಜಯಪುರದ ರೂವಾರಿಯಾದ ಉಮೇಶ ವಂದಾಲ ಅವರ ಗ್ರೂಫ್ ಮಾಡಿದ ಕಾರ್ಯಗಳಿಗೆ ಅಭಿನಂದಿಸುತ್ತಾ, ಮಹಾನಗರ ಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ, ಅರಣ್ಯ ಇಲಾಖೆಯ ಸಹಾಯವನ್ನು ಸ್ಮರಿಸಿದರು.
ಈ ವೇಳೆಯಲ್ಲಿ ಕಾಲೋನಿಯ ಹಿರಿಯರಾದ ಬಿ.ಎಸ್. ಶೆಟ್ಟಿ, ಉಪಾಧ್ಯಕ್ಷರಾದ ಬಿ.ಎಸ್. ದಂಡೋತಿ, ಎಂ.ಎಸ್.ಗೊಂಬಿ, ಬಿ.ಕೆ. ಅನಾಜೆ, ಮಲ್ಲು ನಾಲವಾರ, ಸಿದ್ದು ಕುಂಬಾರ, ಪ್ರವೀಣ ಕೆ.ಸಿ., ಅಜೀತ ಉಪಾಧ್ಯೆ, ಸಂತೋಷ ಅಕೋಡೆ, ಪ್ರವೀಣ ಸವದತ್ತಿ, ಬಸವರಾಜ ದಂಧರಗಿ, ಪ್ರವೀಣ ಕಾಮಗೊಂಡ, ಸಂಜೀವ ಕುಲ್ಲೊಳ್ಳಿ, ನಿತೀನ ಶಿಂತ್ರೆ, ಶಿವಾನಂದ ಬೆಟಗೇರಿ, ರಾಜು ಅರಗೆ, ಅಶೋಕ ಕಬ್ಬಿನ, ಶ್ರೀಶೈಲ ಗಬಸಾವಳಗಿ, ಆರ್.ಎಸ್. ಪಾಟೀಲ, ವಿಲಾಸ ಹಿರೇಮಠ, ಇನ್ನಿತರರು ಉಪಸ್ಥಿತರಿದ್ದರು.