ಬರದ ಜಿಲ್ಲೆಯಂಬ ಹಣಿಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆ ಹಸಿರು ನಂದನ ವನ್ನಾಗಿಸಲು ಶ್ರಮಿಸಬೇಕುಃ ಸುನೀಲ್ ಜೈನಾಪುರ

ವಿಜಯಪುರ, ಜೂ.6-ಬರದ ಜಿಲ್ಲೆಯಂಬ ಹಣಿಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆ ಹಸಿರು ನಂದನ ವನ್ನಾಗಿಸಲು ಶ್ರಮಿಸಬೇಕಾಗಿದೆ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ ಅಧ್ಯಕ್ಷ ಸುನೀಲ್ ಜೈನಾಪೂರ್ ಹೇಳಿದರು.
ಇಲ್ಲಿನ ಕೆಸಿ ನಗರದ ಸಿದ್ಧಿವಿನಾಯಕ್ ಮಂದಿರದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದಿನ ದಿನಗಳಲ್ಲಿ ಜೂನ್ 5ರಂದು ಮಾತ್ರ ಗಿಡ ನೆಡುವ ಮೂಲಕ ಪರಿಸರ ಪ್ರೇಮಿ ಅನಿಸಿ ಅನಂತರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೆ ಪರಿಸರದ ಕುರಿತಾದ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಬೀರು ಗಾಢವೆ ಮಾತನಾಡಿ ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದಾಗಿದೆ ಆದರೆ ಬಹು ಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸಿಲ್ಲ. ಜೂನ್ 5ರಂದು ಶಾಲೆಗಳು ಮತ್ತು ಸರಕಾರಿ ಕಚೇರಿಗಳು ಸೇರಿದಂತೆ ಹಲವಾರು ಆಚರಣೆಗೆ ಮಾತ್ರ ಸೀಮಿತವಾಗಿದೆ ಮಾತ್ರವಲ್ಲದೆ ಪರಿಸರದ ಕೇವಲ ಪರಿಸರ ದಿನಾಚರಣೆಯ ಮಾತ್ರವೇ ಸೀಮಿತವಾಗಿದೆ. ಜೊತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ ಈ ದಿನಕಿರುವ ಮಹತ್ವನ್ನು ಪ್ರತಿಯೊಬ್ಬರು ತಿಳಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಆನಂದ ಬ್ಯಾಲಾಳ, ಎ ಎಸ್ ಐ ಮಾಲೇಗಾವ್, ಹೆಡ್ ಕಾನ್ಸ್ಟೇಬಲ್ ಕಬಾಡೆ, ಅವದುತ್ ಕೋಳಿ, ಶಶಿ ಸಂಗಣ್ಣವರ, ಸಂಜು ಹೂಗಾರ, ವೈ. ಎಸ್ ಅರಬಿ, ಸತೀಶ ದೊಡ್ಡಮನಿ, ವಿನಾಯಕ ರಾಥೋಡ್ ವಿಕಾಸ್ ಚವ್ಹಾಣ, ಸಂದೀಪ್ ರಾಥೋಡ, ದೀಪಕ ನಾಯ್ಕ್, ದಾನೇಶ್ವರ ನಾಯಿಕ್ ನಿಖಿಲ್ ಬಾಗೇವಾಡಿ, ವಿನೋದ್ ರಾಥೋಡ, ಕಿರಣ್ ಅಲಕುಂಟೆ,ಆದಿತ್ಯ ರಾಥೋಡ್, ಬೈಲಪ್ಪ, ರಾಹುಲ್ ಪೆÇಳ್, ಉಮೇಶ್ ಗುಡಿಸಲಮನಿ, ದಯಾನಂದ, ರಾಹುಲ್ ಪನ್ಹಾಳಕರ, ಅನಿಲ್ ನಾನೂರಿ, ವಿವೇಕ್ ಸಿಂದಗಿ, ರಾಜೇಶ್ ಕುಂಟೆ, ಶಿವರಾಜ ಬೇವಿನಮರದ, ಸಂತೋಷ ನಿಂಬರ್ಗಿ, ಪ್ರಶಾಂತ್ ದೇಸಾಯಿ, ಶಿವು ಹಳ್ಳಿ ಉಪಸ್ಥಿತರಿದ್ದರು.