ಬರದನಾಡಿನ ಅಭಿವೃದ್ದಿಗೆ ಸಹಕಾರಿ ಸಂಘಗಳ ಸಹಕಾರ ಅತಿಮುಖ್ಯ :ಶಾಸಕ ಎಸ್‌ವಿಆರ್


ಜಗಳೂರು.ನ.೨೧; ಬರದನಾಡಿನ ಅಭಿವೃದ್ದಿಗೆ ಸಹಕಾರ ಸಂಘಗಳ ಸಹಕಾರ ಅತಿಮುಖ್ಯವಾಗಿದೆ ಎಂದು ವಾಲ್ಮೀಕಿ ಅಭಿವೃದ್ದಿ ನಿಗಮದ ಅದ್ಯಕ್ಷ ಹಾಗೂ ಶಾಸಕ ಎಸ್ ವಿರಾಮಚಂದ್ರ ಅಭಿಪ್ರಾಯಿಸಿದರು.
ತಾಲೂಕಿನ ಸಿದ್ದದಿಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕರ್ನಾಟ ರಾಜ್ಯ ಸಹಕಾರ ಮಹಾಮಂಡಳಿ ನಿ.ಬೆಂಗಳೂರು ದಾವಣಗೆರೆ ಜಿಲ್ಲಾಸಹಕಾರ ಯೂನಿಯನ್ ನಿ.ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘ, ಪಿಕಾರ್ಡ ಬ್ಯಾಂಕ್ ನಿ.ಸಿದ್ದಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ವಿವಿಧ ರೀತಿಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೬೭ನೇ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿಗೆ ೨೨ ಕೋಟಿ ಅನುದಾನ ಬಿಡುಗಡೆಮಾಡಿ ಸಾಲಸೌಲಭ್ಯ ಕಲ್ಪಿಸಿರುವ ಸಹಕಾರ ಸಂಘಗಳ ಜೊತೆ ರೈತರು ಉತ್ತಮ ಬಾಂಧವ್ಯ ಹೊಂದಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತ ಸರ್ಕಾರ ರೈತಪರವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಭಿವೃದ್ದಿಯತ್ತ ಸಾಗುತ್ತಿದೆ ಈಬಾರಿ ವರುಣನ ಕೃಪೆಯಿಂದ ತಾಲೂಕಿನಲ್ಲಿ ಉತ್ತಮ ಮಳೆ ಬೆಳೆಯಿಂದ ರೈತರು ಆರ್ಥಿಕ ಸಂಕಷ್ಟದಿಂದ ನಿಟ್ಟುಸಿರುಬಿಡುವಂತಾಗಿದೆ ಕನಸಿನ ಸಿರಿಗೆರೆ ಶ್ರೀಗಳ ಆಶಯದಂತೆ ಯೋಜನೆ ೫೭ ಕೆರೆ ನೀರು ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿ ಈಗಾಗಲೆ ತ್ವರಿತಗತಿಯಲ್ಲಿ ಸಾಗಿದ್ದು ಮುಂದಿನ ಜೂನ್ ವೇಳೆಗೆ ಬರದನಾಡನ್ನು ಹಸಿರು ನಾಡನ್ನಾಗಿ ಪರಿವರ್ತಿಸುವೆ ಎಂದು ಭರವಸೆ ನೀಡಿದರು.
ಕೊರೊನ ದಿಂದ ಸರ್ಕಾರ ಆರ್ಥೀಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆ ಭದ್ರಾಮೇಲ್ದಂಡೆ ಯೋಜನೆ ಪ್ರಗತಿ ವಿಳಂಬವಾಗಿದ್ದು ರೈತರು ಸಹಕರಿಸಬೇಕು ಮುಂದಿನ ವರ್ಷದ ಆರಂಭದಲ್ಲಿ ಮುಂಚೂಣ ಯಲ್ಲಿದ್ದು ಸರ್ಕಾರಕ್ಕೆ ಒತ್ತಡ ತರುವ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ನಿರ್ದೆಶಕರ ಸಂಘದ ಅದ್ಯಕ್ಷ ಷಣ್ಮುಖಪ್ಪ ಮಾತನಾಡಿ,ನೆಹರೂ ಅವರ ಜನ್ಮದಿನವನ್ನು ಸಹಕಾರಿ ಸಪ್ತಾಹದ ಹೆಸರಿನಡಿ ಸಹಕಾರ ಸಂಘಗಳ ಸೌಲಭ್ಯಗಳನ್ನು ಗ್ರಾಮೀಣ ಭಾಗಗಳಲ್ಲಿ ತಿಳಿಸಲಾಗುವುದು ಅಲ್ಲದೆ ಸಹಕಾರಿ ಸಂಘ ಇದೀಗ ರಾಜ್ಯವ್ಯಾಪಿ ರೈತರಿಗೆ ಅಗತ್ಯ ದಾಸ್ತಾನು ವಿತರಿಸುವ ಜೊತೆ ಸಾಲ ಸೌಲಭ್ಯ,ಸಾರಿಗೆ,ಆಸ್ಪತ್ರೆ,ಅಡಿಕೆಯ ಉತ್ಪನ್ನಗಳ ತಯಾರಿಕೆ,ಔಷಧಿ ಕೇಂದ್ರ,ವಿದ್ಯುತ್ ಕೇಂದ್ರ ತೆರೆಯುವ ಮೂಲಕ ಎಲ್ಲೆಡೆ ಪಸರಿಸಿ ತನ್ನದೇ ಆದ ಛಾಪು ಮೂಡಿಸುತ್ತಿವೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ತಾಲೂಕಾಗಿರುವ ಜಗಳೂರಿಗೆ ರೈತರಿಗೆ ವಿವಿಧ ಸಹಕಾರಿ ಸಂಘಗಳ ಮೂಲಕ ಸಾಲಸೌಲಭ್ಯಗಳಿಗಾಗಿ ೫೫ ಕೋಟಿ ಅನುದಾನ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ಮುರುಗೇಶ ಮಾತನಾಡಿ, ಸಾಲದಸುಳಿಯಲಿ ಸಿಲುಕಿ ನಲುಗಿ ಹೋಗಿರುವ ರೈತರ ಬದುಕು ಹಸನಾಗಿಸುವ ದೃಷ್ಠಿಕೋನದಿಂದ ಸಹಕಾರ ಸಂಘಗಳು ಸ್ಥಾಪನೆಯಾಗಿದ್ದು ಇದೀಗ ೬ಲಕ್ಷ ೪೪ ಸಾವಿರ ಹಳ್ಳಿಗಳು ಸಹಕಾರ ಸಂಘಗಳ ಬ್ಯಾಂಕ್ ಗಳನ್ನು ಅವಲಂಬಿಸಿವೆ ಎಂದರು.
ಲೀಡ್ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಎನ್.ಟಿ ಯರ್ರಿಸ್ವಾಮಿ ಅವರು ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ,ಡಿಜಿಟಲೈಸೇಷನ್ ಹಾಗೂ ಸಾಮಜಿಕ ಜಾಲತಾಣ ವಿಷಯಕುರಿತು ಗೋಷ್ಠಿ ಮಂಡಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅದ್ಯಕ್ಷ ವೇಣುಗೋಪಾಲ್ ರೆಡ್ಡಿ ಸಿಇಓ ತಾವರ್‍ಯಾನಾಯ್ಕ ವಿಎಸ್ ಎಸ್ ಎನ್ ಅದ್ಯಕ್ಷ ಬಿಸ್ತುವಳ್ಳಿ ಬಾಬು ಸಹಕಾರ ಸಂಘಗಳ ನಿರ್ದೇಶಕರುಗಳಾದ ಧನಂಜಯ್ ರೆಡ್ಡಿ ಚೌಡಮ್ಮ ಹನುಮಂತರೆಡ್ಡಿ ತಾಪಂ ಸದಸ್ಯ ತಿಮ್ಮಾಭೋವಿ ಮಾಜಿ ಜಿಪಂ ಸದಸ್ಯ ಎಸ್ ಕೆ ರಾಮರೆಡ್ಡಿ ಡಿಸಿಸಿ ಬ್ಯಾಂಕ್ ಕ್ಷೇತ್ರಿಯ ಅಧಿಕಾರಿ ಹಾಲಸ್ವಾಮಿ ಕಾರ್ಯದರ್ಶಿ ರಾಮ್ ಡಿಪಿ ಜಗಳೂರಯ್ಯ ಪ್ರಕಾಶ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.