ಬರದನಾಡಿನಲ್ಲಿ ಗಂಗೆ ಹರಿಸಿದ ಸಿರಿಗೆರೆ ಶ್ರೀ

ಜಗಳೂರು.ಜ.೧೪: ಭರಮಸಾಗರ ಕೆರೆ ಕೋಡಿ ಬಿದ್ದು ತಾಲೂಕಿನಲ್ಲಿ ನೀರು ಹರಿದಷ್ಟು ರೈತರ ಮನದಲ್ಲಿ ಸಂತಸ ಹರಿಯುತ್ತಿದ್ದು ಬರದನಾಡಿನಲ್ಲಿ ಸಂಭ್ರಮದ ಕಾಲ ಸನ್ನಿಹಿತವಾಗಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜೀ ಹೇಳಿದರು. ತಾಲೂಕಿನ ತುಪ್ಪದಹಳ್ಳಿ ಕೆರೆ, ಬಿಳಿಚೋಡು ಗ್ರಾಮದ ಚೆಕ್ ಡ್ಯಾಂ ಬಳಿ ನೀರಿನ ಹರಿವು ಮತ್ತು ಕಾಮಗಾರಿ, ವೀಕ್ಷಿಸಿ ಬಾಗೀನ ಅರ್ಪಿಸಿ, ಸ್ವಾಮೀಜಿ ಮಾತನಾಡಿದರು.ಕೆರೆತುಂಬಿಸುವ ಯೋಜನೆಗಳು ಕೇವಲ ಶ್ರೀಗಳಿಂದ ಮಾತ್ರವಲ್ಲ ಕಾಲಕಾಲಕ್ಕೆ ಬದಲಾದ ಅಂದಿನಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತ ಸರ್ಕಾರಗಳು ಯೋಜನೆಗಳನ್ನು ಜಾರಿಗೊಳಿಸಲು ಚಾಚು ತಪ್ಪದೆ ಪಾಲಿಸಿದ ಫಲವಾಗಿ ಅವಳಿ ಯೋಜನೆಗಳಾದ ಭರಮಸಾಗರ ಹಾಗೂ ಜಗಳೂರು ಕ್ಷೇತ್ರದ 57 ಕೆರೆಗಳು ಏತಾ ನೀರಾವರಿ ಯೋಜನೆ ಯಶಸ್ವಿಯಾಗಲು ಕಾರಣವಾಗಿ ಇಂದು ಕ್ಷೇತ್ರಗಳಿಗೆ ಗಂಗೆ ಹರಿಯುತ್ತಿದ್ದಾಳೆ. ಜಗಳೂರಿನ ತರಳಬಾಳು ಹುಣ್ಣಿಮೆ ಸಾರ್ಥಕವಾಯಿತು. ಚಟ್ನಹಳ್ಳಿ ಗುಡ್ಡಕ್ಕೆ ಜಾಕ್ ವೆಲ್ ಗೆ ಯೋಜನೆ ತಯಾರಿಸಿದ 800 ಮೀಟರ್ ಜಮೀನು ನೀಡಲು ನಿರಾಕರಿಸಿ ರೈತರು ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದಾಗ 35 ಲಕ್ಷ ರೂ. ಪರಿಹಾರ ಕೊಡಲು ನಿರ್ಧರಿಸಿದ್ದೆವು. ಅವರು 6 ಕೋಟಿ ಬೇಡಿಕೆಯಿಟ್ಟಿದ್ದಾರೆ. ಸರ್ಕಾರಿ ಕಾರ್ಯಕ್ರಮವಾಗಿದ್ದು ಹೈಕೋರ್ಟು ಸ್ಟೇ ಆರ್ಡರ್ ನ್ನು ವಜಾಗೊಳಿಸಿದ್ದಾರೆ. ಬೆಳೆ ಪರಿಹಾರಕ್ಕೆ ಮಾತ್ರ ಅವಕಾಶವಿದೆ ಎಂದರು.ಕೆರೆತುAಬಿಸುವ ಯೋಜನೆಗಳು ಎರಡು ಕೂಸುಗಳಿದ್ದಂತೆ ಭರಮಸಾಗರ ಯೋಜನೆ ಮೊದಲು ಜನಿಸಿದ ಕೂಸು. ಜಗಳೂರು ಕೆರೆತುಂಬಿಸುವ ಯೋಜನೆ ಎರಡನೇ ಕೂಸು ಜೂನ್ ವೇಳೆಗೆ ಜನಿಸಲಿದೆ. 22ಕೆರೆಗಳ ಲೋಪ ದೋಷಗಳು ಈ ಯೋಜನೆಗಳಲ್ಲಿ ಕಂಡುಬರುವುದಿಲ್ಲ. ಜಗಳೂರು ಕೆರೆ ತುಂಬಿಸುವ ಯೋಜನೆ ಭರಮಸಾಗರ ಯೋಜನೆಗಿಂತ ವಿಶಿಷ್ಠವಾಗಿದೆ. ಚಟ್ನಹಳ್ಳಿ ಗುಡ್ಡದ ಮೇಲಿನಿಂದ ಗುರುತ್ವಾಕರ್ಷಣೆ ಬಲದಿಂದ ಕ್ಷೇತ್ರದ 57 ಕೆರೆಗಳಿಗೆ ನೀರು ಹರಿಯಲಿವೆ ಎಂದರು.ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, 1974 ರಲ್ಲಿ ನೈಸರ್ಗಿಕವಾಗಿ ಕೆರೆ ಕೋಡಿ ಬಿದ್ದು ನೀರು ಹರಿದಿತ್ತು. 2021,ರಲ್ಲಿ ತುಂಗಭದ್ರ ಏತನೀರಾವರಿ ಯೋಜನೆ ಮೂಲಕ ಮೂಲಕ ಕೆರೆ ಕೋಡಿ ಬಿದ್ದು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದು ಕಳೆದ 4 ದಶಕಗಳ ಹಿಂದಿನ ದಾಖಲೆಯನ್ನು ಸಿರಿಗೆರೆ ಶ್ರೀಗಳ ಐತಿಹಾಸಿಕ ದಾಖಲೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂಜಾಗೃತಿಗಾಗಿ 13 ಕೋಟಿ 20 ಲಕ್ಷ ರೂ. ವೆಚ್ಚದಲ್ಲಿ ಜೌಗು ಭೂಮಿ ಯಿಂದ ಪರ್ಯಾಯವಾಗಿ ನೀರು ಹರಿಯಲು ಕಾಮಗಾರಿಗೆ ಅನುದಾನ ತರಲು ಯೋಜನೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ತುಪ್ಪದಹಳ್ಳಿ ಸೇರಿದಂತೆ ಒಂದೇ ತಿಂಗಳಲ್ಲಿ 18 ಕೆರೆಗಳು ಭರ್ತಿಯಾಗಲಿವೆ. ಕೆರೆತುಂಬಿಸುವ ಪೈಪ್ ಲೈನ್ ಕಾಮಗಾರಿಗೆ ವಿಧಾನ ಸಭಾಕ್ಷೇತ್ರದ ರೈತರಿಂದ ಅಡ್ಡಿಯಾಗಲಿಲ್ಲ ಆದರೆ ಹರಿಹರ ಭಾಗದ ರೈತರು ಬೇಸರ ಉಂಟುಮಾಡಿದರು ಎಂದು ತಿಳಿಸಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್, ಅಂತರ್ಜಲ ಕುಸಿತವಾಗಿದ್ದು. ಕೆರೆಗಳು ಭರ್ತಿಯಾದರೆ ಭವಿಷ್ಯದ ಪೀಳಿಗೆಗೆ ಅನುಕೂಲವಾಗಲಿದೆ.ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಬೇಕಿದೆ.ಬೆಳೆ ವಿಮೆ ಸಮರ್ಪಕ ಜಾರಿಯಾದರೆ ರೈತರ ಆರ್ಥಿಕ ಸಂಕಷ್ಟ ದೂರಾಗಲಿವೆ ಎಂದು ಹೇಳಿದರು.ಶ್ರೀಗಳಿಗೆ ಅದ್ದೂರಿ ಸ್ವಾಗತ:ಕಲ್ಲು ಮುಳ್ಳು ಲೆಕ್ಕಿಸದೆ ನಡೆದ ಶ್ರೀಗಳು :ಬಿಳಿಚೋಡು ಗ್ರಾಮದ ಹಳ್ಳದಲ್ಲಿನ ಚೆಕ್ ಡ್ಯಾಂ ಗೆ ಸಂಪರ್ಕಿಸಲು ಸಮರ್ಪಕ ರಸ್ತೆಯಿಲ್ಲದೆ. ತಾತ್ಕಾಲಿಕ ಜೆಸಿಬಿ ಯಂತ್ರದಿAದ ಮುಳ್ಳಿನ ಗಿಡ ಸ್ವಚ್ಛತೆಗೊಳಿಸಲಾಗಿತ್ತು. ಆದರೆ ಶ್ರೀಗಳು ಕಲ್ಲು ಮುಳ್ಳು ಲೆಕ್ಕಿಸದೆ ನಡೆದು ನೀರಿನಲ್ಲಿ ತೆರಳಿ ನೀರಿನ ಹರಿವು ವೀಕ್ಷಿಸಿದ್ದು ಭಕ್ತ ಸಮೂಹಕ್ಕೆ ಹುಮ್ಮಸ್ಸು ನೀಡಿತು. ಶ್ರೀಗಳು ಆಗಮಿಸುತ್ತಿದ್ದಂತೆ ಮಹಿಳೆಯರು ಕಳಸ ಹಿಡಿದು ಕುಂಭ ಹೊತ್ತು ಅದ್ದೂರಿಯಾಗಿ ಸ್ವಾಗತಿಸಿ ಬಾಗಿನ ಅರ್ಪಿಸಲಾಯಿತು.ನಂತರ ಭಕ್ತರು ಕಾಣಿಕೆ ಸನ್ಮಾನದಿಂದ ಶ್ರೀಗಳಿಗೆ ಗೌರವಿಸಿ ಭಕ್ತಿಪರ್ವ ಮೆರೆದರು.ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಬಿಜೆಪಿ ಅಧ್ಯಕ್ಷ ಹೆಚ್.ಸಿ.ಮಹೇಶ್, ಹೆಮ್ಮನಬೇತೂರು ಶಶಿಕುಮಾರ್, ನಿವೃತ್ತ ಉಪನ್ಯಾಸಕ ಸುಬಾಷ್ ಚಂದ್ರ ಬೋಸ್, ಬಿಳಿಚೋಡು ಮಹೇಶ್, ನಾಗನಗೌಡ, ಪರಮೇಶ್ವರಪ್ಪ, ಗೌಡ್ರುಶರಣಪ್ಪ, ರವಿಚಂದ್ರ, ಓಮಣ್ಣ, ಗಿರೀಶ್ ಒಡೆಯರ್, ಚಂದ್ರನಾಯ್ಕ,ಸೇರಿದAತೆ ನೀರಾವರಿ ಅಧಿಕಾರಿಗಳು ಇತರರು ಭಾಗವಹಿಸಿದ್ದರು.