ಬರಗಾಲ ಪ್ರದೇಶ ಘೋಷಣೆಗೆ ರೈತ ಸಂಘ ಒತ್ತಾಯ

ತಾಳಿಕೋಟೆ:ಸೆ.2: ಮುಂಗಾರು ಹಂಗಾಮು ಅರ್ಧ ಕಾಲ ಕಳೆಯುತ್ತಾ ಬಂದರೂ ಇಲ್ಲಿಯವರೆಗು ಸಮರ್ಪಕ ಮಳೆಯಾಗಿಲ್ಲ ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ, ಕಳೆದ 15 ದಿನಗಳ ಹಿಂದೆ ಕೆಲವೊಂದು ಭಾಗದಲ್ಲಿ ಮಾತ್ರ ಅಲ್ಪ ಸೊಲ್ಪ ಮಳೆಯಾಗಿದ್ದು ಬಿಟ್ಟರೆ ಬಹುತೇಕ ತಾಲೂಕಗಳಲ್ಲಿ ಸಮರ್ಪಕ ಮಳೆಯಾಗಿಲ್ಲ ಹೀಗಾಗಿ ಜಿಲ್ಲೆಯ ತಾಳಿಕೋಟೆ ತಾಲೂಕು ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘವು ಶುಕ್ರವಾರರಂದು ಸರ್ಕಾರಕ್ಕೆ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

   ಸರ್ಕಾರವು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಸಮೀಕ್ಷೆ ನಡೆಸಲು ಹೇಳಿದ ಪ್ರಕಾರ ಕೆಲವು ತೀವ್ರ ಮಳೆಯ ಕೊರತೆ ಉಂಟಾಗಿದೆ ಎಂದು ವರದಿ ಕಳುಹಿಸಿದ್ದಾರೆ, ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು 13 ತಾಲೂಕಗಳ ಪೈಕಿ ಕೇವಲ 5 ತಾಲೂಕಗಳಲ್ಲಿ ಮಳೆ ಕೊರತೆ ತಾಲೂಕಗಳೆಂದು ಗುರುತಿಸಲಾಗಿದೆ. ಅದರಲ್ಲಿ ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ, ಅದರಂತೆ ಬಬಲೇಶ್ವರ, ನಿಡಗುಂದಿ ಈ ಎರಡು ತೀವ್ರ ಮಳೆಯ ಕೊರತೆ ತಾಲೂಕಗಳೆಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದೆ ಸರಿಯಾಗಿ ಸಮೀಕ್ಷೆ ನಡೆಸದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ 8 ತಾಲೂಕಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ, ಬಹು ಮುಖ್ಯವಾಗಿ ತಾಳಿಕೋಟಿ ತಾಲೂಕಿನಲ್ಲಿ ಬರುವ 58 ಹಳ್ಳಿಗಳನ್ನು ಪರಿಗಣಿಸಬೇಕು. ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದವರು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ 13 ತಾಲೂಕಗಳಲ್ಲಿ ಸಮೀಕ್ಷೆ ನಡೆಸುವದನ್ನು ಬಿಟ್ಟು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಉಳಿದ ತಾಲೂಕಗಳನ್ನು ನಿರ್ಲಕ್ಷಿಸಲಾಗಿದೆ (ಕೆ.ಎಸ್.ಎನ್.ಎಂ.ಸಿ) ಯವರು ಎಷ್ಟು ತಾಲೂಕಗಳಗೆ ಭೇಟಿ ನೀಡಿದ್ದಾರೆ ಹಾಗೂ ಪ್ರತೀ ತಾಲೂಕಿನಲ್ಲಿಯ ಯಾವ ಯಾವ ಹಳ್ಳಗಳಿಗೆ ಹೋಗಿ ಯಾವ ರೈತರ ಜಮೀನುಗಳಿಗೆ ಬೇಟಿ ಕೊಟ್ಟಿದ್ದಾರೆ. ಎಷ್ಟು ಸರ್ವೆ ಮಾಡಿದ್ದಾರೆ. ಸರ್ವೆ ಮಾಡುವ ಸಂದರ್ಭದಲ್ಲಿ ಯಾರನ್ನು ಕರೆದುಕೊಂಡು ಸರ್ವೆ ನಡೆಸಿದ್ದಾರೆ. ಎಷ್ಟು ನೀರವರಿ ಕ್ಷೇತ್ರಗಳಿಗೆ ಬೇಟ್ಟಿಕೊಟ್ಟಿದ್ದಾರೆ ಒಣ ಬೇಸಾಯದ ಕ್ಷೇತ್ರಗಳಿಗೆ ಬೇಟಿ ಕೊಟ್ಟಿದ್ದು, ಎಷ್ಟು ಜಮೀನುಗಳ ಸರ್ವೆ ಮಾಡಲಾಗಿದೆ. ಯಾವ ಆಧಾರದ ಮೇಲೆ ಸರ್ವೆ ಕಾರ್ಯ ಮಾಡಿದ್ದಾರೆ, ಸೆಟಲೈಟ್ ಮೂಲಕ ತೆಗೆದಿದ್ದು ಏನಾದರು ಇದ್ದರೆ ಅದನ್ನು ಕೊಡಿ, ಸರ್ವೆ ವರಧಿ ಎಂದರೆ ಕಡ್ಡಾಯವಾಗಿ ಜಿ.ಪಿ.ಆರ್.ಎಸ್ ಮಾಡಿರಬೇಕು ಇವೆಲ್ಲವುಗಳ ಕುರಿತು ಸ್ಪಷ್ಟನೆ ನೀಡಬೇಕು 13 ತಾಲೂಕಗಳನ್ನು ಸರ್ವೆ ಮಾಡಲು ಎಷ್ಟು ದಿನ ತೆಗೆದುಕೊಂಡಿದ್ದಾರೆ ಎಂದು ತಿಳಿಸಬೇಕು, 13 ತಾಲೂಕಗಳು ಸರ್ವೆ ಮಾಡಬೇಕೆಂದರೆ ಕನಿಷ್ಠ ಎರಡು ತಿಂಗಳು ಬೇಕು ಅದರಲ್ಲಿ ಒಂದೆರಡು ದಿನ ಸರ್ವೆ ಮಾಡಲು ಸಾಧ್ಯವಿಲ್ಲ. ಇವರು ಎಷ್ಟುದಿನ ಸರ್ವೆಕಾರ್ಯ ನಡೆಸಲಾಗಿದೆ ಎಂಬುದು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರಲ್ಲದೇ ಈಗ ಕಳುಹಿಸಿರುವ ವರದಿಯನ್ನು ಪರಿಗಣಿಸದೆ ಪುನಃ ತಾಳಿಕೋಟೆ ತಾಲೂಕಿನ 58 ಹಳ್ಳಿಗಳನ್ನು ರೈತ ಮುಖಂಡರೊಂದಿಗೆ ಸರ್ವೆಕಾರ್ಯ ನಡೆಸಬೇಕು, ಒಟ್ಟು ತಾಳಕೋಟೆ ತಾಲೂಕಿನ 58 ಹಳ್ಳಿಗಳನ್ನು ತೀವ್ರ ಮಳೆಕೊರತೆ ಪರಿಗಣಿಸಿ ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಾನಿಗೊಳಗಾದ ಮುಂಗಾರು ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರದಲ್ಲಿ ಅಖಂಡ ಕರ್ನಾಟಕ ರೈತ ಸಂಘವು ಉಲ್ಲೇಖಿಸಿದೆ.

ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ಸಲ್ಲಿಸಿದರು.

ಈ ಸಮಯದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ತಾಳಿಕೋಟೆ ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಮಾಳಪ್ಪ ಬೂದಿಹಾಳ, ಸಂಗಪ್ಪ ನಾಯ್ಕೋಡಿ, ಶಿವನಗೌಡ ಕರಕಳ್ಳಿ, ಈರಣ್ಣ ಗೋನಾಳ, ಯಲ್ಲಾಲಿಂಗ ಹೂಗಾರ, ಹಣಮಂತ್ರಾಯ ಹಾಲರಡ್ಡಿ, ನಬಿರಸೂಲ ನಾಯ್ಕೋಡಿ, ಶಿವರಾಜ ಪಾಟೀಲ, ಮಲ್ಲಿಕಾರ್ಜುನ ಮುದನೂರ, ನಾಗೇಶ ತೋಟದ, ಸಂಗಣ್ಣ ಉಪ್ಪಲದಿನ್ನಿ, ಭೀಮರಾಯ ಕುಂಭಾರ, ರಾಮನಗೌಡ ತುಂಬಗಿ, ನಾಗರಾಜ ಬಳಿಗಾರ, ಬಸನಗೌಡ ಮಾಲಿಪಾಟೀಲ, ಮೊದಲಾದವರು ಇದ್ದರು.