ಬರಗಾಲ ಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಮನವಿ


ಹುಬ್ಬಳ್ಳಿ,sಸೆ.8: ಮುಂಗಾರು ಹಂಗಾಮು ಅರ್ಧ ಕಳೆಯುತ್ತಾ ಬಂದರೂ ಇಲ್ಲಿಯವರೆಗು ಸಮರ್ಪಕ ಮಳೆಯಾಗಿಲ್ಲ ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ, ಕಳೆದ 15 ದಿನಗಳ ಹಿಂದೆ ಕೆಲವೊಂದು ಭಾಗದಲ್ಲಿ ಮಾತ್ರ ಅಲ್ಪ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಬಹುತೇಕ ತಾಲೂಕಗಳಲ್ಲಿ ಸಮರ್ಪಕ ಮಳೆಯಾಗಿಲ್ಲ ಹೀಗಾಗಿ ಸಂಪೂರ್ಣ ಬರಗಾಲ ಪ್ರದೇಶವೆಂದು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ನಗರದಲ್ಲಿಂದು ಸರ್ಕಾರಕ್ಕೆ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರು ಪೂರೈಸಬೇಕು, ರೈತರ ಸಾಲ ಮನ್ನಾ ಮಾಡಿ, ಹೊಸ ಸಾಲ ನೀಡಬೇಕು, ಧಾರವಾಡ ಜಿಲ್ಲೆ ಹಾಗೂ ಹುಬ್ಬಳ್ಳಿ ತಾಲೂಕನ್ನು ಬೀಕರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಬೆಳೆವಿಮೆಯನ್ನು ತಕ್ಷಣ ರೈತರ ಖಾತೆಗೆ ಸೇರ್ಪಡೆ ಮಾಡಬೇಕು. ಕಬ್ಬಿನ ವಿಮೆ ಯೋಜನೆ ಜಾರಿಗೆ ತರವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು ಒತ್ತಾಯಿಸಿದರು.
ಮುಖಂಡರಾದ ಗುರು ರಾಯನಗೌಡ್ರ, ಕಲ್ಮೇಶ ಲಿಗಾಡಿ, ಬಸವರಾಜ ಗುಮ್ಮಗೋಳ, ಗುರುಸಿದ್ದಪ್ಪ ಗೌರಿ, ನಾಗಪ್ಪ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.