ಬರಗಾಲ ತಾಲೂಕು ಘೋಷಣೆಗೆ ರೈತ ಸಂಘ ಆಗ್ರಹ

ತಾಳಿಕೋಟೆ:ಜೂ.29: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಹೊಲವನ್ನು ಹದಗೊಳಿಸಿ ಬಿತ್ತನೆಗೆ ಬೇಕಾಗಿರುವ ಬೀಜ ಗೊಬ್ಬರವನ್ನು ಸಾಲಸೊಲ ಮಾಡಿ ತಂದು ಇನ್ನೆನು ಮುಂಗಾರು ಮಳೆ ಆಗುತ್ತೆ ಎಂಭ ಭರವಸೆ ಇಟ್ಟು ಮಳೆರಾಯನ ಆಗಮನಕ್ಕೆ ಮುಗಿಲಿನತ್ತ ಮುಖ ಮಾಡಿದ ರೈತರಿಗೆ ತುಂಭಾ ನಿರಾಸೆ ಉಂಟಾಗಿ ಬದುಕು ನಡೆಸುವುದು ದುಸ್ತರವಾಗಲಿದೆ ಎಂಬ ಆತಂಕದಲ್ಲಿದ್ದು ಕೂಡಲೇ ತಾಳಿಕೋಟೆ ತಾಲ್ಲೂಕು ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆಯನ್ನು ಘೋಷಣೆ ಮಾಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ವತಿಯಿಂದ ತಹಶಿಲ್ದಾರರ ಮೂಲಕ ಬುಧವಾರರಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  ಹವಾಮಾನ ಇಲಾಖೆ ವಾಯುಭಾರ ಕುಸಿತದಿಂದ ಜೂನ ಕೊನೆಯವರೆಗೂ ಮಳೆ ಬರುವ ಲಕ್ಷಣಗಳು ಇಲ್ಲ ಎಂದು ತಿಳಿಸುತ್ತಿರುವುದರಿಂದ ಅನ್ನದಾತ ಎನ್ನು ಮಾಡಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು  ಕುಳಿತುಕೊಳ್ಳುವಂತಾಗಿದೆ. ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಿ ಬೆಳೆ ಸಾಲ ಮನ್ನಾ ಮಾಡಬೇಕು,  ಇನ್ನುವರೆಗೂ ಬರದಿರುವ ಫಸಲ್ ಭೀಮಾ ಯೋಜನೆಯ ವಿಮೆಯನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಮಾನ್ಯ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಘನ ಸರಕಾರಕ್ಕೆ ಒತ್ತಾಯಿಸುತ್ತಾ ಇದ್ದವೆ ಎಂದು ತಾಳಿಕೋಟಿ  ತಾಲೂಕಾ ರೈತ ಸಂಘದ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಅವರು ಹೇಳಿದರು.
 ಮನವಿ ಪತ್ರವನ್ನು ತಹಶಿಲ್ದಾರಾದ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ಸಂಘದ ಪದಾಧಿಕಾರಿಗಳು ಸಲ್ಲಿಸಿದರು.
     ಈ ಸಮಯದಲ್ಲಿ ಕಲಕೇರಿ  ಹೋಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಮುಖಂಡರಾದ ಹಣಮಂತ ವಡ್ಡರ, ದೇವಿಂದ್ರಪ್ಪಗೌಡ ಪಾಟೀಲ, ಲಿಂಗರಾಜ ಮೇಟಿ ಮೊದಲಾದವರು ಇದ್ದರು.