ಬರಗಾಲಕ್ಕೆ ನೆರವಾದ ನರೇಗ

module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 100.0;


* ದಿನಕ್ಕೆ 349 ಕೂಲಿ
* ನೇರ ಅಕೌಂಟ್ ಗೆ ಹಣ
* ಒಬ್ಬರಿಗೆ ನೂರು ದಿನ ಕೂಲಿ
* ಗುಳೆ ತಪ್ಪಿಸಿ ಜೀವನಕ್ಕೆ ಆಧಾರ
ಎನ್.ವೀರಭದ್ರಗೌಡ
ಬಳ್ಳಾರಿ, ಮೇ.16: ಈ ವರ್ಷದ ಬೇಸಿಗೆಯ ಬರಗಾಲದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡ ಜನತೆ ಕೂಲಿ ಹುಡಿಕಿಕೊಂಡು ಗುಳೇ ಹೋಗುವುದನ್ನು ತಪ್ಪಿಸಿದ್ದು. ಜನರ ಜೀವನಕ್ಕೆ ಉತ್ತಮ ಸಹಕಾರಿಯಾಗಿದೆಂದೇ ಹೇಳಬಹುದು.
ಇತ್ತೀಚೆಗೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ತುಂಗಭದ್ರ ಉಪ ಕಾಲುವೆಗಳಲ್ಲಿನ ಹೂಳನ್ನು ತೆಗೆಯುವ ಕಾರ್ಯ ನರೇಗ ಯೋಜನೆಯಡಿ ನಡೆದಿದೆ.
ದಿನಕ್ಕೆ 349 ರೂ ಕೂಲಿ ನಿಗಧಿಯಾಗಿದೆ. ಕೂಲಿಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ನೀಡಲಿದೆ.
ಈ ಹಿಂದೆ ನರೇಗದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ನಡೆಯುವುದನ್ನು ತಪ್ಪಿಸಲು. ಕೊಟ್ಟ ಕೂಲಿಗಿ ನಿಗಧಿತ ಪ್ರಮಾಣದಷ್ಟು ಕೆಲಸ ಮಾಡಬೇಕು, ಅದರ ಜಿಪಿಎಸ್ ಪೋಟೋ ಸಹ ಆನ್ ಲೈನ್ ನಲ್ಲಿ ಕಳಿಸಬೇಕಿದೆ.
ಆದರೆ ಈ ಕಾಮಗಾರಿ ವ್ಯವಸ್ಥಿತವಾಗಿ ನಡೆಯಬೇಕು. ಕಾಲುವೆಯ ಹೂಳನ್ನು ಅಲ್ಲೇ ಪಕ್ಕದಲ್ಲಿ ಹಾಕಿದರೆ ಅದು ಮತ್ತೆ ನೀರು ಬಿಟ್ಟಾಗ ಕಾಲುವೆಯಲ್ಲಿಯೇ ಸೇರಿಕೊಳ್ಳುತ್ತೆ ಇದನ್ನು ಸರಿಪಡಿಸಬೇಕಿದೆ. 
ಕೇವಲ ಜನರಿಗೆ ಕೂಲಿ ರೂಪದಲ್ಲಿ ಹಣ ನೀಡುವುದಷ್ಟೇ ಮುಖ್ಯವಾಗಿರದೆ. ಕಾಮಗಾರಿಯಿಂದ ಶಾಶ್ವತ ಕೆಲಸಗಳು ಆಗಬೇಕಿದೆ.
ನರೇಗ ಕೂಲಿಕಾರರಿಗೆ ಜಿಪಂ ನಿಂದ ಸ್ಥಳದಲ್ಲಿ ನೀರು, ಮಕ್ಕಳಿಗೆ ನೆರಳುನ ವ್ಯವಸ್ಥೆಯನ್ನು ಮಾಡಲಿದೆಂದು ಹೇಳುತ್ತಿದ್ದರೂ ಹಲವಡೆ ಇದು ಕಂಡು ಬರುತ್ತಿಲ್ಲ.