ಬಯ್ಯಾಪುರ ಹುಲಗೇರಿ ಮಧ್ಯ ಮುಖಂಡರ ಕಡೆಗಣನೆ: ಕಾರ್ಯಕರ್ತರಲ್ಲಿ ಗೊಂದಲ

ಸಂಜೆವಾಣಿ ವಾರ್ತೆ
ಲಿಂಗಸುಗೂರು.ಮಾ.೧೪- ಲಿಂಗಸುಗೂರು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಗೊಂದಲದ ವಾತಾವರಣ ನಿರ್ಮಾಣ ಮಾಡಲು ಹೊರಟಿರುವ ಮಾಜಿ ಶಾಸಕ ಹುಲಗೇರಿ ಹಾಗೂ ಬಯ್ಯಾಪುರ ರವರ ಮದ್ಯೆ ಜಂಗಿ ಕುಸ್ತಿ ಯಿಂದ ಕ್ಷೇತ್ರದಲ್ಲಿ ಎರಡು ಬಣಗಳು ನಡುವೆ ಇರುವ ವ್ಯತ್ಯಾಸ ಏನು ಅಂತ ತಿಳಿಯದಾಗಿದೆ?
ರಾಯಚೂರು ಜಿಲ್ಲೆಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾದ ಡಿ.ಎಸ್ ಹೂಲಗೇರಿಯವರು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ೫೦೦೦ ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದು ಸರಿಯಷ್ಟೇ. ಆದರೆ ಶಾಸಕರಾದ ನಂತರ ೫ ವರ್ಷಗಳ ಪೂರ್ಣಾವಧಿಯಲ್ಲಿ ಪಕ್ಷದ ಸಂಘಟನೆಗೆ ಕಿಂಚಿತ್ತು ಒತ್ತು ನೀಡದಿರುವುದು, ಪಕ್ಷಕ್ಕೆ ದುಡಿದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ಜಿಲ್ಲಾ ಮುಖಂಡರ ಗಮನಕ್ಕೆ ಹಲವಾರು ಬಾರಿ ಮನವಿ ಕೂಡ ಸಲ್ಲಿಸಲಾಗಿತ್ತು. ಆದಾಗ್ಯೂ ಕೂಡ ೨೦೨೩ ರಲ್ಲಿ ಪಕ್ಷ ಹಲವಾರು ಗೊಂದಲದ ಮಧ್ಯೆ ಕೊನೆಗಳಿಗೆಯಲ್ಲಿ ಪಕ್ಷದ ಟಿಕೇಟನ್ನು ಡಿ.ಎಸ್.ಹೂಲಗೇರಿಯವರಿಗೆ ಘೋಷಣೆ ಮಾಡಿತ್ತು.
೨೦೨೩ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು, ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು, ಪಕ್ಷದ ಸಂಘಟನೆ ಮಾಡದೇ ಇರುವುದು ತಾನು ಮನಬಂದಂತೆ ವರ್ತಿಸಿ ವಿಧಾನಸಭಾ ಕ್ಷೇತ್ರದ ಸುಮಾರು ೪೦-೪೫ ಹಳ್ಳಿಗಳಿಗೆ ಪ್ರಚಾರಕ್ಕೆ ಹೋಗದೇ ಇರುವುದು ಹಾಗೂ ಯಾವುದೇ ತಾಂಡಾಗಳಿಗೂ ಕೂಡ ಚುನಾವಣಾ ಪ್ರಚಾರ ಮಾಡದೇ ಇರುವುದು, ಚುನಾವಣೆಯನ್ನು ಸರಿಯಾಗಿ ಮಾಡಿಕೊಳ್ಳದೇ ಸೋತಿರುವುದು ಪಕ್ಷಕ್ಕೆ ಹಿನ್ನೆಡೆಯಾಗಿದೆ..
ಚುನಾವಣೆ ನಂತರ ಹಳ್ಳಿಗಳಲ್ಲಿ ಚುನಾವಣಾ ಮಾಡಿದ ಮುಖಂಡರು, ಕಾರ್ಯಕರ್ತರಿಗೆ ಹಳ್ಳಿಗಳಲ್ಲಿ ಗಲಾಟೆಯಾದಾಗ, ಪೋಲಿಸರಿಂದ ತೊಂದರೆಯಾದಾಗ ಫೋನ್ ಕರೆಮಾಡಿದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಫೋನ್ ಕರೆಗಳಿಗೆ ಉತ್ತರ ಕೊಡದೇ ಇರುವುದರಿಂದ ಕಾರ್ಯಕರ್ತರು ಧೃತಿಗೆಟ್ಟಿದ್ದಾರೆ. ಇವರ ನಡತೆಯಿಂದ ಬೇಸತ್ತು ಮುಖಂಡರು, ಕಾರ್ಯಕರ್ತರು ಇವರಿಂದ ಇವತ್ತಿನವರೆಗೂ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಂತರದಲ್ಲಿ ಹೊಸ ಬ್ಲಾಕ್ ಅಧ್ಯಕ್ಷರನ್ನು ಆಯ್ಕೆಮಾಡುವಾಗ ಪಕ್ಷದ ಯಾವ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆರ್.ಎಸ್.ಎಸ್., ಬಿ.ಜೆ.ಪಿ.ಯಿಂದ ಚುನಾವಣಾ ಸಂದರ್ಭದಲ್ಲಿ ೭-೮ ದಿನಗಳ ಮುಂಚೆ ವಲಸೆ ಬಂದವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಹಾಗೂ ನಗರ ಯೋಜನಾ ಪ್ರಾಧಿಕಾರಕ್ಕೆ ಶಿಫಾರಸ್ಸು ಪತ್ರ ನೀಡಿರುವುದು ಮತ್ತು ಹಲವಾರು ನಾಮನಿರ್ದೇಶಕರಿಗೆ ಬಿ.ಜೆ.ಪಿ. ಪಕ್ಷದಿಂದ ಬಂದವರಿಗೆ ಶಿಫಾರಸ್ಸು ಮಾಡಿರುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ದುಡಿದ ನಿಷ್ಠಾವಂತ ಮುಖಂಡರನ್ನು ನಿರ್ಲಕ್ಷಿಸಿರುವುದು ಕ್ಷೇತ್ರದಲ್ಲಿ ಕಂಡುಬರುತ್ತದೆ. ಇದರಿಂದಾಗಿ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಂಭವವಿದ್ದು, ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯದ ಅವಶ್ಯಕತೆ ಇರುವುದು ಕಂಡು ಬರುತ್ತದೆ.
ಕಾರಣ ಡಿ.ಎಸ್.ಹೂಲಗೇರಿಯವರು ನಾಮನಿರ್ದೇಶಕರ ನೇಮಕಾತಿಗಾಗಿ ಕೊಟ್ಟ ಶಿಫಾರಸ್ಸನ್ನು ತಡೆಹಿಡಿದು ಪಕ್ಷಕ್ಕೆ ದುಡಿದ ನಿಷ್ಠಾವಂತ ಮುಖಂಡರಿಗೆ ಹಾಗೂ ಕಾರ್ಯಕರ್ತರನ್ನು ಪಕ್ಷದ ಸಂಘಟನೆಯಲ್ಲಿ ಇರುವವರನ್ನು ನಾಮನಿರ್ದೇಶಕರ ಹುದ್ದೆಗೆ ಹಾಗೂ ಪಕ್ಷದ ಸಂಘಟನೆಯ ಉನ್ನತ ಹುದ್ದೆಗೆ ಪರಿಗಣಿಸಿ ಮುಂಬರುವ ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಲು ನೈತಿಕ ಸ್ಥೆರ್ಯ ತುಂಬಲು ರಾಜ್ಯದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅದ್ಯೆಕ್ಷ ರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಮುಖಂಡರು ಕಾರ್ಯಕರ್ತರು ವಿನಂತಿ ಮಾಡಿಕೊಳ್ಳುತ್ತೇವೆ. ಹಾಗೂ ಮುಂದಿನ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದಾಗ ಇವರು ಮಾತ್ರ ತಟಸ್ಥವಾಗಿ ನಿಲ್ಲುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಕೂಡಲೇ ರಾಜ್ಯದಕ್ಷರು ಮತ್ತು ಕೊರ ಕಮೀಟಿ ಸದಸ್ಯರು ಲಿಂಗಸುಗೂರು ಕ್ಷೇತ್ರಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕು ಎಂದು ನೋಡಬೇಕಾಗಿದೆ?