ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಸಮಾರಂಭವೀರಶೈವ ಲಿಂಗಾಯತ ಸಮಾಜ ಬೇರೆಯಲ್ಲ ಒಂದೇ- ತಿಪ್ಪಣ್ಣ

ರಾಯಚೂರು, ಡಿ.೦೩-ವೀರಶೈವ ಲಿಂಗಾಯತ ಸಮಾಜದ ಶಬ್ದ ಬೇರೆಯಾದರು ಅರ್ಥ ಒಂದೇ ಸಮಾಜ ಉಳಿವಿಗಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಸಬೇಕು ಎಂದು ವೀರ ಶೈವ ಲಿಂಗಾಯತ ಸಮಾಜದ ಮಾಜಿ ರಾಜ್ಯಾಧ್ಯಕ್ಷರಾದ ಎನ್ ತಿಪ್ಪಣ್ಣ ಅವರು ಹೇಳಿದರು.
ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಹಾಗೂ ತ್ರಿಕಾಲಸತ್ಯ ಸಂಗ್ರಹ ಗ್ರಂಥ ಬಿಡುಗಡೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,
ಬಸವಣ್ಣ ತೋರಿದ ಹಾದಿಯಲ್ಲಿ ನಡೆಯುವುದರ ಮೂಲಕ ಜಾತಿ ಧರ್ಮ ಭೇದ ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಮಾಜ ಸಮಗ್ರ ಅಭಿವೃದ್ಧಿಗೆ ನಾವು ಶ್ರಮಿಸಬೇಕು ಎಂದರು. ಸಮಾಜದ ಉನ್ನತ ಪ್ರಗತಿಗೆ ಶರಣ ವಚನಗಳನ್ನು ಮೈಗೂಡಿಸಿಕೊಳ್ಳಬೇಕು.ವೀರಶೈವ ಲಿಂಗಾಯತ ಸಮುದಾಯವು ಎಂದಿಗೂ ಒಂದೇ ಸಮಾಜವನ್ನು ಯಾರಿಂದಲೂ ಬೆರ್ಪಡಿಸಲು ಸಾಧ್ಯವಿಲ್ಲ. ಸಮುದಾಯವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಯಾಗಲು ಪ್ರಯತ್ನ ಮಾಡಬೇಕಾಗಿದೆ ಎಂದ ಅವರು ವೀರಶೈವ ಲಿಂಗಾಯತ ಎಂಬ ಬೇರ್ಪಡೆಯಾಗಿ ಸಮಾಜ ಒಡೆಯುವ ಕೆಲಸ ಮಾಡಬಾರದು. ಸಮುದಾಯದವು ಸಮಾಜ ಅಭಿವೃದ್ಧಿಗೆ ಶ್ರಮಿಸಿ ಮುಂದಿನ ಪೀಳಿಗೆಗೆ ಸಮಾಜವು ಮಾರ್ಗದರ್ಶವಾಗಬೇಕು ಎಂದರು. ಸಮಾಜವನ್ನು ಮುಖ್ಯವಾಹಿನಿ ಬರಲು ಶೈಕ್ಷಣಿಕ ಅಗತ್ಯವಿದೆ. ಸಾಂಕೇತಿಕವಾಗಿ ಸಮಾಜವು ಅಭಿವೃದ್ಧಿಯಾಗಿ ಮುಂದುವರಿಯಬೇಕು ಎಂದರು. ಸಮುದಾಯದ ಎಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಶ್ರೀ ಬಿ. ಎಸ್ ಪರಮಶಿವಯ್ಯ ಅವರಿಗೆ ಶಾಸಕ ಶಿವರಾಜ ಪಾಟೀಲ್ ಅವರು ’ಬಯಲ ಸಿರಿ ಬೆಳಕು’ ಪ್ರಶಸ್ತಿ ಪ್ರದಾನ ಮಾಡಿದರು.
ತ್ರಿಕಾಲಸತ್ಯ ಕೃತಿಯನ್ನು ಹೆಚ್ ಎಮ್ ರೇಣುಕಾ ಪ್ರಸನ್ನ ಅವರು ಲೋಕಾರ್ಪಣೆಗೊಳಿಸಿದರು.
ಈ ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ಸಾವಿರ ದೇವರ ಸಂಸ್ಥಾನ ಮಠ ಗಬೂರು ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಶಿವರಾಜ ಪಾಟೀಲ್ ವಹಿಸಿದ್ದರು.
ಅಖಿಲ ಭಾರತ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರು ಅವರು ಪ್ರಾಸ್ತವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ,ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಶರಣಭೂಪಲ ನಾಡಗೌಡ, ರಾಚನಗೌಡ ಕೋಳರು, ಪಾರ್ವತಿ ಕಾರಡ್ಡಿ,
ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಬ್ರಹನ್ಮಠ ನೀಲಗಲ್ ಶ್ರೀ ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಮಂಗಳವಾರಪೇಟೆ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಪಂಚಾಕ್ಷರಿ ಮಹಾ ಸಂಸ್ಥಾನ ಮಠ ಸುಲ್ತಾನಪೂರ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು,
ಸೇರಿದಂತೆ ಉಪಸ್ಥಿತರಿದ್ದರು.