
ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 24 :- ಇಂದು ಬೆಳ್ಳಂಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗಿಬರುತ್ತಿದ್ದ ಗುಂಡುಮುಣುಗು ರೈತನೋರ್ವನ ಮೇಲೆ ತಾಯಿ – ಮರಿ ಕರಡಿಗಳು ದಾಳಿ ನಡೆಸಿ ತೀವ್ರಗಾಯಗೊಳಿಸಿರುವ ಘಟನೆ ತಿಳಿದಿದ್ದು ಜನತೆ ಬಯಲುಮುಕ್ತ ಶೌಚಾವನ್ನು ಮುಕ್ತಗೊಳಿಸಿ ಮನೆಯ ಮುಂದಿನ ಶೌಚಾಲಯ ಬಳಕೆ ಮಾಡಿದಲ್ಲಿ ಇಂತಹ ಕರಡಿಗಳಿಂದ ದಾಳಿ ತಪ್ಪಿಸಬಹುದೆಂದು ಮುನ್ನೆಚ್ಚರಿಕೆಯ ಸಂದೇಶವನ್ನು ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಪತ್ರಿಕೆ ಮೂಲಕ ಜನತೆಗೆ ತಿಳಿಸಿದ್ದಾರೆ.ಇಂದು ಬೆಳಿಗ್ಗೆ ಕರಡಿದಾಳಿಯ ವಿಷಯ ತಿಳಿದಿದ್ದು ಅಷ್ಟರಲ್ಲಿ ಆ ಗಾಯಳು ವ್ಯಕ್ತಿಯನ್ನು ಚಿಕ್ಕಜೋಗಿಹಳ್ಳಿಯಿಂದ ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದ್ದು ಅಲ್ಲಿನ ವೈದ್ಯರಿಗೂ ಚಿಕಿತ್ಸೆ ಕುರಿತಾಗಿ ತಿಳಿಸಿದ್ದು ಸಂಬಂದಿಸಿದ ಇಲಾಖೆಯಾದ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಗಾಯಳು ವ್ಯಕ್ತಿ ಕುರಿತಾದ ಚಿಕಿತ್ಸೆ ಹಾಗೂ ಪರಿಹಾರ ಕುರಿತಾಗಿ ತಿಳಿಸಿದ್ದೇನೆ ಅಲ್ಲದೆ ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಾಗಿ ಕರಡಿಗಳಿದ್ದು ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಯ ಹೆಚ್ಚಾಗಿ ಕರಡಿಗಳಿರುವ ವ್ಯಾಪ್ತಿಯಲ್ಲಿ ಜನರು ಒಬ್ಬೊರಾಗಿ ಓಡಾಡದೆ ಗುಂಪಾಗಿ ಓಡಾಡುವಂತೆ ಹಾಗೂ ಬಯಲು ಶೌಚಾ ಮುಕ್ತಿಗೊಳಿಸಿ ಪಂಚಾಯತಿಯಿಂದ ಮನೆಮುಂದೆ ನಿರ್ಮಿಸಲಾಗಿರುವ ಶೌಚಾಲಯ ಬಳಸಿಕೊಳ್ಳುವುದರಿಂದ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಉತ್ತಮ ಪರಿಸರ ಕಾಪಾಡುವ ಜೊತೆಗೆ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಇದರ ಬಗ್ಗೆ ಗ್ರಾಮಪಂಚಾಯಿತಿ ಮಟ್ಟದ ಅಧಿಕಾರಿಗಳಿಗೂ ಸಭೆಗಳಲ್ಲಿ ತಿಳಿಸಿ ಕರಡಿಗಳು ಹೆಚ್ಚಾಗಿರುವ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆಯಾಗಿ ಇರುವಂತೆ ಶಾಸಕ ಡಾ ಶ್ರೀನಿವಾಸ ಎನ್ ಟಿ ಪತ್ರಿಕೆ ಮೂಲಕ ಜನತೆಗೆ ಸಂದೇಶ ನೀಡಿದ್ದಾರೆ. ನಂತರವಾಗಿ ಕಾಡುಪ್ರಾಣಿಗಳ ಹಾಗೂ ಜನತೆಯ ನಡುವಿನ ಸಂಘರ್ಷ ತಪ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವ ಬಗ್ಗೆ ಶಾಸಕರು ತಿಳಿಸಿದರು.