ಬಯಲು ಶೌಚಾಲಯ ಮುಕ್ತ ಭಾರತಕ್ಕೆ ಕರೆ

ಕಲಬುರಗಿ ಜು 23: ನಗರದ ಜನ ಶಿಕ್ಷಣ ಸಂಸ್ಥಾನ ದಿಂದ ಸ್ವಚ್ಛತಾ ಪಕವಾಡಕಾರ್ಯಕ್ರಮದ ಅಡಿಯಲ್ಲಿ ಬಯಲು ಶೌಚಾಲಯ ಮುಕ್ತ
ಭಾರತ ಕಾರ್ಯಕ್ರಮವನ್ನು ಕಮಲಾಪುರ ತಾಲ್ಲೂಕಿನ ಮಹಾಗಾಂವ ಕ್ರಾಸ್‍ನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜನ ಶಿಕ್ಷಣಸಂಸ್ಥಾನದ ಕಾರ್ಯಕ್ರಮ ಸಂಯೋಜಕರಾದ ಪಾರ್ವತಿ ಹಿರೇಮಠ ಮಾತನಾಡಿ
ಮಹಿಳೆಯರು ಸರಕಾರದ ಸವತ್ತುಗಳನ್ನು ಬಳಸಿಕೊಂಡುಮನೆಗೊಂದು ಶೌಚಾಲಯವನ್ನು ಕಟ್ಟಿಸಿಕೊಳ್ಳುವುದರ ಮೂಲಕ ಬಯಲು ಶೌಚಾಲಯ ಮುಕ್ತ ಭಾರತ ಮಾಡಬೇಕೆಂದು ಹೇಳಿದರು.ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಶ್ರೀದೇವಿ ವಾಲಿಮಾತನಾಡಿದರು. ಕಾರ್ಯಕ್ರಮದಲ್ಲಿ ಶರಣಮ್ಮಾ ಪ್ರಸನ್ನಕುಮಾರ,ಜ್ಯೋತಿ ಬೆಲ್ಸೂರೆ, ಬಸವರಾಜ ಧಾಬಾ ಉಪಸ್ಥಿತರಿದ್ದರು. 60 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು.