ಬಯಲು ಶೌಚಾಲಯ ತೆರುವುಗೊಳಿಸಲು ಆಗ್ರಹ

ರಾಯಚೂರು, ಏ.೨-ವಾರ್ಡ್ ನ ೧೦ ರಲ್ಲಿ ದಿಗಂಬರ್ ಜೈನ್ ದೇವಸ್ಥಾನದ ಪಕ್ಕದಲ್ಲಿ ಬಯಲು ಶೌಚಾಲಯವನ್ನು ತೆರವುಗೊಳಿಸಬೇಕೆಂಡು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡ ಬಣ ನಗರ ಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಾರ್ಡ್ ನ ೧೦ ರಲ್ಲಿ ಪುರಾತನವಾದ ದಿಗಂಬರ್ ಜೈನ್ ದೇವಸ್ಥಾನದ ಪಕ್ಕದಲ್ಲಿ ಬದಿಯಲ್ಲಿ ಸಾರ್ವಜನಿಕರ ಬಯಲು ಶೌಚಾಲಯವನ್ನು ತೆರವುಗೊಳಬೇಕೆಂದು ಒತ್ತಾಯಿಸಿದರು
ಈ ಹಿಂದೆ ತಾವು ವಾರ್ಡ ನಂ ೧೦ ರ ನಗರಸಭೆ ಸದಸ್ಯರಾಗಿದ್ದಾಗ್ಯೂ ತಮ್ಮ ಗಮನಕ್ಕೆ ತರಲಾಗಿತ್ತು.ತಾವು ಕೂಡ ಇದರ ಬಗಕ್ಕೆ ಪ್ರಯತ್ನ ಪಟ್ಟಿದ್ದೀರಿ. ಆದರೆ ಆ ವೇಳೆಯಲ್ಲಿ ಇದು ಆಗಲಿಲ್ಲ ,ಈಗ ನಗರಸಭೆಯ ಅಧ್ಯಕ್ಷರಾಗಿದ್ದರಿಂದ ಬಯಲು ಶೌಚಾಲಯವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಬಯಲು ಶೌಚಾಲಯದಿಂದ ದೇವಸ್ಥಾನಕ್ಕೆ ದುರ್ವಾಸನೆ ಬರುತ್ತಿದ್ದು. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅದಲ್ಲದೆ ಕೇಂದ್ರ ಸರಕಾರದ ಸ್ವಚ್ಛ ಭಾರತದ ಅಡಿಯಲ್ಲಿ ಬಯಲು ಶೌಚಾಲಯವನ್ನು ತೆಗೆದು ಹಾಕಲು ತಿಳಿಸಲಾಗಿ ದೆ .ಸರಕಾರದ ಯೋಜನೆಯಂತೆ ಮನೆ ಮನೆಗೂ ಸ್ವಚ್ಚ ಭಾರತದ ಅಡಿಯಲ್ಲಿ ಶೌಚಾಲಯ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯ ರೂಪದಲ್ಲಿ ಇದ್ದು. ಅದಕ್ಕಾಗಿ ಶಾಶ್ವತವಾಗಿ ಬಯಲು ಶೌಚಾಲಯ ತೆರವುಗೊಳಿಸಬೇಕೆಂದು
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಸಿ.ಕೆ ಜೈನ್
ಒತ್ತಾಯಿಸಿದರು.