
ಜಗಳೂರು.ಫೆ.೨೬:ಪಟ್ಟಣದ ಬಯಲುರಂಗಮಂದಿರದಲ್ಲಿ ₹1.20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕನ್ನಡ ಭವನ ಹಾಗೂ ಪರಿಕರಗಳನ್ನು ಅಭಿವೃದ್ದಿಪಡಿಸುವೆ.ಮುಂದಿನ ವರ್ಷದಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಗಳೂರಿನಲ್ಲಿಯೇ ಆಯೋಜಿಸಲು ಅವಕಾಶ ಕೊಡಿ ಯಾವುದೇ ಆಡಳಿತ ಪಕ್ಷದವರು ಮುಖ್ಯಮಂತ್ರಿ ಯಾದರೂ ಸಮ್ಮೇಳನಕ್ಕೆ ಆಹ್ವಾನಿಸುವೆ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಎಸ್.ವಿ.ರಾಮಚಂದ್ರ ಎಂದು ತಿಳಿಸಿದರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಸಾಪದಿಂದ ಆಯೊಜಿಸಿದ್ದ ಅನುಭಾವ ಕವಿ ಮಹಾಲಿಂಗರಂಗ ವೇದಿಕೆ ಯಲ್ಲಿ ಕನ್ನಡಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಕೇವಲ ದಾವಣಗೆರೆ ಜಿಲ್ಲೆಯ ಕೆಲ ತಾಲೂಕು ಗಳಿಗೆ ಮಾತ್ರ ಸೀಮಿತವಲ್ಲ ಗಡಿನಾಡು ಜಗಳೂರಿನಲ್ಲಿಯೂ ಕನ್ನಡ ಸಾಹಿತ್ಯ ಆಸಕ್ತಿ ಅಪಾರವಾಗಿದೆ.ಕನ್ನಡ ಭಾಷಾ ಭಿಮಾನಿಗಳಿಗೆ ಸಮ್ಮೇಳನದಲ್ಲಿ ಕನ್ನಡ ದಿಗ್ವಿಜಯರಿಂದ ಕನ್ನಡದ ಕಂಪು ಸೂಸಿ ತಾಲೂಕಿನಲ್ಲಿ ಸಾಹಿತ್ಯ ಲೋಕ ಶ್ರೀಮಂತಗೊಳಿಸುವೆ.ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳನ್ನು ಯಶಸ್ವಿಗೊಳಿಸಿದ ಹೃದಯ ಶ್ರೀಮಂತಿಕೆಯ ಜನರ ಬೆಂಬಲ ನಮಗಿದೆ ಎಂದು ಹೇಳಿದರು.ಬರದನಾಡಿಗೆ ಭದ್ರಾಮೇಲ್ದಂಡೆ ಯೋಜನೆಯ ಪರಿಕಲ್ಪನೆ ಪರಿಚಯಿಸಿದ ಹೊರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಅವರ ಪರಿಶ್ರಮ ಹಾಗೂ ಬಿಜೆಪಿ ಆಡಳಿತ ಸರಕಾರದ ಸಹಕಾರದಿಂದ ಯೋಜನೆ ಸಕಾರಗೊಂಡಿದ್ದು.ಮುಂದಿನ ವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಶೀಘ್ರ 10 ಕೆರೆಗಳಿಗೆ ನೀರು ಭರ್ತಿಮಾಡಲಾಗುವುದು.ಬಿಜೆಪಿ ಪಕ್ಷದ ಕೊಡುಗೆ ಯಾಗಿ ತಾಲೂಕಿನ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಳಗಳ ಮೂಲಕ ಮನೆಬಾಗಿಲಿಗೆ ಕುಡಿಯುವ ನೀರು ಹರಿಸುವೆ.ನೀರಿನ ಸಮಸ್ಯೆಯಿದ್ದ ಜಗಳೂರು ತಾಲೂಕಿಗೆ ಹೆಣ್ಣು ಕೊಡಲು ಹಿಂಜರಿ ಯುತ್ತಿದ್ದವರಿಗೆ ಬರದನಾಡು ಹಸಿರುನಾಡನ್ನಾಗಿಸಿ ತೋರಿಸುವೆ ಎಂದು ಸವಾಲು ಹಾಕಿದರು.