
ಬೀದರ:ಸೆ.9:ಹುಮನಾಬಾದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಸಿ.ಡಿ.ಪಿ.ಓ, ಮೆಲ್ವಿಚಾರಕರು, ಆಶಾ, ಅಂಗನವಾಡಿ ಕಾರ್ಯಕರ್ತರು, ಜಿ.ಪಿ.ಎಲ್.ಎಫ್ ಸದಸ್ಯರಿಗೆ ಋತು ಚಕ್ರ ನಿರ್ವಹಣೆ ಕುರಿತು ತಾಲೂಕ ಮಟ್ಟದ ತರಬೇತಿಯನ್ನು ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆವತಿಯಿಂದ ಸ್ವಚ್ಛ ಬೀದರ ಅಭೀಯಾನದ ಅಂಗವಾಗಿ ಬಯಲು ಬರ್ಹಿದಸೆ ಮುಕ್ತ ಅಭಿಯಾನದ ಅಂಗವಾಗಿ ತಾಲೂಕ ಮಟ್ಟದ ತರಬೇತಿಯನ್ನು ಹಮ್ಮಿಕೊಳಲಾಯಿತು. ತರಬೇತಿಯನ್ನು ಹುಮನಾಬಾದ ತಾಲೂಕ ಪಂಚಾಯತ ಕಾರ್ಯನಿರ್ವಾÀಹಕ ಅಧಿಕಾರಿ ದೀಪಿಕಾ.ಬಿ ನಾಯ್ಕರ್ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು, ಅವರು ಮಾತನಾಡಿ ತಾಲೂಕಿನ ಎಲ್ಲ ಗ್ರಾಮಗಳು ಬಯಲು ಬರ್ಹಿದಸೆ ಮುಕ್ತ ಗ್ರಾಮಕ್ಕಾಗಿ ನಾವೇಲ್ಲರು ಸಂಕಲ್ಪ ತೊಟು ಕಾರ್ಯನಿರ್ವಹಿಸಬೇಕಾಗಿದೆ ವಿಶೇಷವಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ತಮ್ಮ ಓಣಿ ಸಂಪೂರ್ಣ ಗ್ರಾಮದಲ್ಲಿ ಸಂಪೂರ್ಣ ಬಯಲು ಬರ್ಹಿದಸೆ ಮುಕ್ತಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಿ ಅದರ ದುಷ್ಪರಿಣಾಮ ಕುರಿತು ಎಚ್ಚರಿಸಿ ಎಲ್ಲರು ಕಡ್ಡಾಯವಾಗಿ ವೈಯಕ್ತಿಕ ಮತ್ತು ಸಮುದಾಯ ಸೌಚಾಲಯ ಬಳಸಲು ಮಾಹಿತಿ ನೀಡಬೇಕೆಂದು ನುಡಿದರು.
ಭಾರತ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ ಅವರು ಮಾತನಾಡಿ ನಾರಿ ಶಕಿ ಜಾಗೃತಿಗೊಳಿಸಿದರೆ ಇಡಿ ಸಮುದಾಯಕ್ಕೆ ಜಾಗೃತಿ ಮಾಡಿದಂತಾಗುತ್ತದೆ ತರಬೇತಿ ಮೂಲಕ ಬಯಲು ಬರ್ಹಿದಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ, ಜೊತೆಗೆ ಹದಿಹರಿಯದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಲ್ಲಿ ಋತು ಚಕ್ರ ನಿರ್ವಹಣೆಯ ಕುರಿತು ತರಬೇತಿ ನೀಡಿ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಲಾಗುತ್ತದೆ ಎಂದು ಮಹಾತ್ಮ ಗಾಂಧಿಜೀ ಅವರ ಪರಿಕಲ್ಪನೆ ಸ್ವಚ್ಛ ಭಾರತ ಸ್ವಚ್ಛ ಬೀದರನ ಪ್ರತಿಜ್ಞಾವಿಧಿಯನ್ನು ಎಲ್ಲರಿಗೂ ಭೋಧಿಸಿದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರರವರು ಮಾತನಾಡಿ ಶಾಂತೀಶ್ವರಿ ಸಂಸ್ಥೆಯು ವಿಶೇಷ ಕಾಳಜಿವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೊಡಿಸಿ ಸ್ವಚ್ಛ ಬೀದರ ಜಿಲ್ಲೆಗೆ ಶ್ರಮಿಸುತ್ತಿರುವುದು ಮಾದರಿಯ ಸೇವೆಯಾಗಿದೆ ಎಂದರು. ಜಿಲ್ಲಾ ಪಂಚಾಯತನ ಲೆಕ್ಕ ಸಹಾಯಕರಾದ ಪ್ರವೀಣ ಸ್ವಾಮಿ ಮಾತನಾಡಿ ಸ್ವಚ್ಛ ಬೀದರ ಹಾಗೂ ಸ್ವಚ್ಚ ಭಾರತದ ಪರಿಕಲ್ಪನೆಯನ್ನು ನಾವೆಲ್ಲರು ಸೇರಿ ಸಾಕಾರಗೊಳಿಸಬೇಕೆಂದು ತಿಳಿಸಿ ಜಿ.ಪಿ.ಎಲ್.ಎಫ್ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಬಯಲು ಬರ್ಹಿದಸೆ ಮುಕ್ತ ಗ್ರಾಮಕ್ಕಾಗಿ ಶ್ರಮವಹಿಸಿ ಮಾದರಿ ಗ್ರಾಮಗಳಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ರಾಷ್ಟೀಯ ಆರೋಗ್ಯ ಮೀಷನ್ ಜಿಲ್ಲಾ ಸಂಯೋಜಕರಾದ ಶಿವಶಂಕರ ಬೇಮಳಗಿ ಮಾತನಾಡಿ ಶಾಲಾ ಮಕ್ಕಳಿಗಾಗಿ ಸುಚಿ ಕಿಟ್‍ಗಳ ಕುರಿತು ಮಾಹಿತಿ ನೀಡಿ ಇವುಗಳ ಸಮರ್ಪಕ ಬಳಕೆಗಾಗಿ ಜಾಗೃತಿ ನೀಡಿ ಋತು ಚಕ್ರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ನುಡಿದರು. ತರಬೇತೊದಾರರಾಗಿ ರಾಜೀವಗಾಂಧಿ ಪರಿಸರ ಪ್ರಶಸ್ತಿ ಪುರಸ್ಕøತರಾದ ಶೈಲೇಂದ್ರ ಕವಾಡಿ ಮಾತನಾಡಿ ತಾಲೂಕಿನ ಗ್ರಾಮಗಳಲ್ಲಿ ಸ್ಚಚ್ಛತೆಯ ಜೊತೆಗೆ ಪ್ಲಾಸ್ಟಿಕ್ ಮುಕ್ತ ಗ್ರಾಮಗಳಾಗಿ ಮಾಡಲು ಶ್ರಮವಹಿಸಬೇಕು ಇಲ್ಲದಿದರೆ ಮುಂದೊದ್ದು ದಿನ ಪ್ಲಾಸ್ಟಿಕ್ ಬಳಕೆಯಿಂದ ಮನಿಷ್ಯನ ಆರೋಗ್ಯದ ಮೇಲೆ ಹಾಗೂ ಭೂಮಿಯ ಮೇಲೆ ದುಷ್ಪರಿಣಾಮ ಬಿರಿ ದೊಡ್ಡ ಅನಾಹುತ ಆಗಬಹುದು ಆದರಿಂದ ಎಲ್ಲರು ಪ್ಲಾಸ್ಟಿಕ್‍ನ ಸಂಪೂರ್ಣ ಬಳಕೆ ನಿಲ್ಲಿಸಬೇಕು. ಋತು ಚಕ್ರ ನಿರ್ವಹಣೆ ಕುರಿತು ವೈದ್ಯಾಧಿಕಾರಿಗಳಾದ ಡಾ.ಯೋಗೆಶ್ವರಿರವರು ಋತು ಚಕ್ರದ ಸಮರ್ಪಕ ನಿರ್ವಹಣೆ ಹಾಗೂ ಅದರ ವೈದ್ಯಾಕಿಯ ವಿಧಾನ ಹಾಗೂ ಲಭ್ಯವಿರುವ ಸಾಮಾಗ್ರಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ತಾವು ಜಾಗೃತರಾಗಿ ಇತರ ಮಹಿಳೆಯರಿಗೆ ಜಾಗೃತಿ ಮಾಡಬೇಕೆಂದು ತರಬೇತಿ ನೀಡಿದರು, ಆಶಾ ಮೆಲ್ವೀಚಾರಕಿ ಲಕ್ಷ್ಮೀ ಹಾಗೂ ಅಂಗವಾಡಿ ಮೆಲ್ವೀಚಾರಕಿ ಕಲಾವತಿ ರೆಡ್ಡಿರವರು ಕೊಡ ತರಬೇತಿ ನೀಡಿದರು.
ವೇದಿಕೆಯ ಮೇಲೆ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕಿ ಶಿವಲೀಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ ಹಿರೆಮಠ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಸುಕೆಶನಿ, ತಾಲೂಕ ಕ್ಷೇತ್ರ ವ್ಯವಸ್ಥಾಪಕ ವಿಕಾಸ, ಕಾವೇರಿ ಸ್ವಾಮಿ, ಪತ್ರಕರ್ತ ಕಾಶಿನಾಥ ಜಕ್ಕಾ, ಪ್ರಮುಖರಾದ ಚಂದ್ರಕಾತ ಸ್ವಾಮಿ ಚನ್ನಳ್ಳಿ, ಅನೀಲ ಸ್ವಾಮಿ ಕನಕಟ್ಟಾ, ಅಶ್ವಿನಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಜಾಗೃತಿಯ ಕಿರು ಚಿತ್ರ ಪ್ರದರ್ಶಿಸಲಾಯಿತು. ಆರತಿ ಸ್ವಾಮಿ ಸ್ವಾಗತಿಸಿದರು ನಾಗೇದ್ರ ಮಡ್ರೆ ಕಾರ್ಯಕ್ರಮ ನಿರೊಪಿಸಿದರು ಪುರ್ಣಿಮಾ ವಂದಿಸಿದರು,ನಂತರ ತರಬೇತಿ ಪಡೆದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.